ಬಿಸಿಎಂ ಹಾಸ್ಟೆಲ್ ಸೀಟು ದೊರಕಿಸಿಕೊಡುವಂತೆ ಆಗ್ರಹಿಸಿ ಶಾಸಕರ ಕಚೇರಿಗೆ ಪೋಷಕರ ಲಗ್ಗೆ

0 40

ಹೊಸನಗರ : ಕಳೆದ ಜೂನ್ ತಿಂಗಳಲ್ಲೇ ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲಿಸಿದ್ದು ಜುಲೈ 10 ಕಳೆದರೂ ಬಿಸಿಎಂ ಹಾಸ್ಟೆಲ್ ನಲ್ಲಿ ಅರ್ಜಿ ಸಲ್ಲಿಸಿದರು ಯಾವುದೇ ಭರವಸೆ ಈವರೆಗೆ ದೊರಕಿಲ್ಲವೆಂದು ತತಕ್ಷಣ ನಮ್ಮ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ದೊರಕಿಸ ಕೊಡಬೇಕೆಂದು ಮಕ್ಕಳ ಪೋಷಕರು ಸೋಮವಾರ ಶಾಸಕ ಬೇಳೂರು ಗೋಪಾಲಕೃಷ್ಣ ರವರ ಕಚೇರಿಗೆ ಲಗ್ಗೆ ಇಟ್ಟು ಸಮಸ್ಯೆ ಬಗೆಹರಿಸುವಂತೆ ಶಾಸಕರ ಆಪ್ತ ವಲಯದ ಸಣ್ಣಕ್ಕಿ ಮಂಜು ಅವರಿಗೆ ಶಾಸಕರ ಗಮನ ಸೆಳೆಯುವಂತೆ ಮನವಿ ಪತ್ರ ಸಲ್ಲಿಸಿದರು.

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಸಕರ ಕಚೇರಿಯಿದ್ದು ಹಾಸ್ಟೆಲ್ ಸೌಲಭ್ಯ ವಂಚಿತ ಪೋಷಕರು ತಾಲೂಕು ಪಂಚಾಯತ್ ಸಭಾಂಗಣಕ್ಕೆ ಬಂದ ವಿಷಯ ತಿಳಿದು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವೈ. ನರೇಂದ್ರ ಕುಮಾರ್ ಶಾಸಕರ ಕಚೇರಿಗೆ ಆಗಮಿಸಿ ಶಾಸಕರ ಆಪ್ತವಲಯದ ಸಣ್ಣಕ್ಕಿ ಮಂಜು ರವರೊಂದಿಗೆ ಸಮಾಲೋಚನೆ ನಡೆಸಿ ತಕ್ಷಣ ತಾಲೂಕು ಹಿಂದುಳಿದ ವರ್ಗದ ಕಲ್ಯಾಣಾಧಿಕಾರಿ ರಾಘವೇಂದ್ರ ಅವರನ್ನು ಕರೆಸಿ ಸಮಾಲೋಚನೆ ನಡೆಸಿ ಇನ್ನೆರಡು ದಿನದಲ್ಲಿ ಸಮಸ್ಯೆ ಬಗೆಹರಿಸಿ ಕೊಡುವಂತೆ ಭರವಸೆ ಪಡೆದರು.

ಶಾಲಾ ಮಕ್ಕಳು ದೂರದ ಮುಳುಗಡೆ ಪ್ರದೇಶದಿಂದ 7-8 ಕಿ.ಮೀ ನಡೆದುಕೊಂಡು ಬರಬೇಕಾಗಿದ್ದು ಅಲ್ಲದೆ ತೀರ ಬಡ ಕುಟುಂಬದ ಮಕ್ಕಳು ಆದ ಕಾರಣ ತತಕ್ಷಣ ಮಕ್ಕಳ ಶಿಕ್ಷಣಕ್ಕೆ ಸ್ಪಂದಿಸುವ ಮೂಲಕ ಸಮಸ್ಯೆ ಬಗೆಹರಿಸುವಂತೆ ಪೋಷಕರು ಅಧಿಕಾರಿಗಳನ್ನು ಒತ್ತಾಯಿಸಿದರು.

ಕೊಡಸೆಯ ಗಿರೀಶ್, ಕೃಷ್ಣಪ್ಪ, ಕಲಾವತಿ, ತೊಗರೆ ಕೃಷ್ಣಮೂರ್ತಿ, ಮಂಜಪ್ಪ ಹೀಲಗೋಡು, ಹೆಬ್ಬುರಳಿ ಹರೀಶ, ಪದ್ಮಾವತಿ, ಲೀಲಾವತಿ ಪುರುಷೋತ್ತಮ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!