ನೈರುತ್ಯ ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸುವ ಅಭಿಲಾಷೆ ಇದೆ ; ಆಯನೂರು ಮಂಜುನಾಥ್

0 511

ಶಿವಮೊಗ್ಗ: ಮುಂಬರಲಿರುವ ನೈರುತ್ಯ ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸುವ ಅಭಿಲಾಷೆ ಹೊಂದಿದ್ದು, ನನಗೆ ಅವಕಾಶ ಸಿಗಬಹುದು ಎಂದು ಕಾಂಗ್ರೆಸ್ ಮುಖಂಡ, ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.


ಅವರು ಭಾನುವಾರ ಮಿಷನ್ ಕಾಂಪೌಂಡಿನಲ್ಲಿ ನೈರುತ್ಯ ಪದವೀಧರರ ಕ್ಷೇತ್ರದ ಮತದಾರರ ನೊಂದಣಿ ಕಚೇರಿ ಉದ್ಘಾಟಿಸಿ ನಂತರ ಮಾತನಾಡಿದರು.
ನೈರುತ್ಯ ಪದವೀಧರರ ಕ್ಷೇತ್ರ ಐದೂವರೆ ಜಿಲ್ಲೆಗಳನ್ನು ಒಳಗೊಂಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೊಡಗು, ಅಲ್ಲದೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲೂಕುಗಳನ್ನು ಒಳಗೊಂಡಿದೆ. ಸೆ.30ರಿಂದ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲಿದೆ. ಪದವೀಧರರು ತಮ್ಮ ಹೆಸರನ್ನು ನೊಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ನಾಲ್ಕೈದು ಜನ ಆಕಾಂಕ್ಷಿಗಳಿದ್ದಾರೆ. ಆದರೆ ಪಕ್ಷದ ತೀರ್ಮಾನಕ್ಕೆ ನಾನು ಬದ್ಧವಾಗಿದ್ದೇನೆ. ಪಕ್ಷವು ನನಗೇ ಟಿಕೆಟ್ ನೀಡಬಹುದೆಂಬ ಭರವಸೆ ಇದೆ. ಅದಕ್ಕಾಗಿಯೇ ಈಗಿನಿಂದಲೇ ಸಿದ್ಧತೆ ಮಾಡಿಕೊಂಡಿದ್ದೇನೆ. ಹೊಸ ಮತದಾರರು ತಮ್ಮ ಅರ್ಜಿಯನ್ನು ನಮ್ಮ ಹೊಸ ಕಾರ್ಯಾಲಯದಿಂದ ಪಡೆದು ಇಲ್ಲಿಗೆ ಸಲ್ಲಿಸುವಂತೆ ಮನವಿ ಮಾಡಿದರು.


ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ಎರಡೂ ಪಕ್ಷಗಳಿಗೆ ಈ ಬಾರಿ ಮತದಾರ ತಕ್ಕ ಉತ್ತರ ಕೊಟ್ಟಿದ್ದಾನೆ. ಅವರ ಶಕ್ತಿಯೇ ಕುಂದುತ್ತಿದೆ. ಕುರುಡನ ಹೆಗಲ ಮೇಲೆ ಕುಂಟ ಸವಾರಿ ಮಾಡಿದಂತಾಗುತ್ತದೆ ಎಂದು ವ್ಯಂಗ್ಯವಾಡಿದರು.


ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್ ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಧೀರರಾಜ್ ಹೊನ್ನವಿಲೆ, ಏಸುದಾಸ್, ಚಾಮರಾಜ್, ಎನ್.ಕೆ. ಶಾಮ್‌ಸುಂದರ್, ಪದ್ದಣ್ಣ, ಲಕ್ಷ್ಮಣ್, ಶಿ.ಜು. ಪಾಶಾ ಸೇರಿದಂತೆ ಅನೇಕರು ಶುಭ ಹಾರೈಸಿದರು.

Leave A Reply

Your email address will not be published.

error: Content is protected !!