Hosanagara | Stone Mining | Election Boycott | ಟೌನ್‌ಗೆ ಸಮೀಪವಿರುವ ಕಲ್ಲು ಗಣಿಗಾರಿಕೆ ಪುನರ್ ಆರಂಭಿಸಿದರೆ ಉಪವಾಸ ಸತ್ಯಾಗ್ರಹ ಮತ್ತು ಚುನಾವಣೆ ಬಹಿಷ್ಕಾರದ ಎಚ್ಚರಿಕೆ

0 120

ಹೊಸನಗರ: ತಾಲ್ಲೂಕಿನ ಕಳೂರು ಗ್ರಾಮದ ಸರ್ವೆ ನಂಬರ್ 112ರಲ್ಲಿ ಗಣಿಗಾರಿಕೆಯ ವಿರುದ್ಧ ಅನೇಕ ಗ್ರಾಮಸ್ಥರ ಮನವಿಯ ಮೇರೆಗೆ ತಟಸ್ಥವಾಗಿದ್ದ ಕಲ್ಲುಗಣಿಗಾರಿಕೆ ಮತ್ತೆ ಆರಂಭಿಸಲು ಕುಣಿಗಳನ್ನು ತೆಗೆದು ಸಂಚು ನಡೆಸುತ್ತಿದ್ದು ಕಲ್ಲುಗಣಿಗಾಕೆ ಆರಂಭಿಸದರೆ ಏಪ್ರಿಲ್ 3ರಿಂದ ತಾಲ್ಲೂಕು ಕಛೇರಿಯ ಮುಂಭಾಗ ಅನಿರ್ದಿಷ್ಟ ಕಾಲ ಉಪವಾಸ ಸತ್ಯಾಗ್ರಹ ಹಾಗೂ ಮುಂದಿನ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಕೃಷಿಕ ರತ್ನಾಕರ್ ಹಾಗೂ ಮಾರಿಗುಡ್ಡದ ಗ್ರಾಮಸ್ಥರು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ‌.

ಅವರು ಜಿಲ್ಲಾಧಿಕಾರಿಗಳಿಗೆ ಅಂಚೆ ಮೂಲಕ ಹಾಗೂ ಹೊಸನಗರ ತಹಶೀಲ್ದಾರ್ ರವರಿಗೆ ಹಾಗೂ ಸಬ್ಇನ್ಸ್‌ಪೆಕ್ಟರ್ ನೀಲಾರಾಜ್ ನರಲಾರರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, ಹೊಸನಗರ ತಾಲ್ಲೂಕು ಹಿಂದಿನ ತಹಶೀಲ್ದಾರ್ ರಾಜೀವ್ ಭೂ ವಿಜ್ಞಾನ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮದ ರೆವಿನ್ಯೂ ಇನ್ಸ್‌ಪೆಕ್ಟರ್ ವೆಂಕಟೇಶ್ ಮೂರ್ತಿ ಗ್ರಾಮ ಆಡಳಿತಾಧಿಕಾರಿ ಕೌಶಿಕ್ ಸ್ಥಳ ಪರಿಶೀಲಿಸಿ ಕಲ್ಲು ಗಣಿಗಾರಿಕೆ ನಡೆಸುವುದು ಸೂಕ್ತವಲ್ಲ ಪಟ್ಟಣಕ್ಕೆ ಸಮೀಪವಿದೆ ಮನೆಗಳಿಗೆ ಹಾನಿಯಾಗಲಿದೆ ಅದು ಅಲ್ಲದೇ ಪಟ್ಟಣ ಪಂಚಾಯತಿಯವರು ತುರ್ತು ಸಭೆ ನಡೆಸಿ ಕಲ್ಲುಗಣಿಗಾರಿಕೆಯನ್ನು ನಿಲ್ಲಿಸಬೇಕೆಂಬ ಪತ್ರದ ಮೂಲಕ ತಿಳಿಸಿದ್ದು ಮಾನ್ಯ ಜಿಲ್ಲಾದಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿಗಳು ತಾತ್ಕಾಲಿಕ ತಡೆ ನೀಡಿದ್ದು ಆದರೆ ಪುನಃ ಆರಂಭಿಸುವ ಸಂಚು ನಡೆದಿದೆ ಯಾವುದೇ ಕಾರಣಕ್ಕೂ ನಾವು ಕಲ್ಲು ಗಣಿಗಾರಿಕೆ ನಡೆಸಲು ಬಿಡುವುದಿಲ್ಲ ನಮ್ಮ ಪ್ರಾಣವನ್ನಾದರೂ ಬಿಟ್ಟೆವು ನಾವು ಕಲ್ಲುಗಣಿಗಾರಿಕೆ ನಡೆಸಲು ಬಿಡುವುದಿಲ್ಲ ಇದರ ಜೊತೆಗೆ ಇಲ್ಲಿಯವರೆಗೆ ಯಾವುದೇ ಜನಪ್ರತಿನಿಧಿಗಳು ಶಾಸಕರು ಗೃಹ ಮಂತ್ರಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸಿಲ್ಲದ ಕಾರಣ ಮುಂದೆ ಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಮಾರಿಗುಡ್ಡದ ಜನತೆ ನಿಶ್ಚಯಿಸಿದ್ದು ತಕ್ಷಣ ಅಧಿಕಾರಿಗಳು ಮತ್ತು ಸ್ಥಳೀಯರು ಶಾಸಕರು ಗೃಹ ಮಂತ್ರಿಗಳು ನಮ್ಮ ಮನವಿಗೆ ಸ್ಪಂದಿಸಲಿ ಇಲ್ಲವಾದರೆ ಮುಂದೆ ಆಗುವ ಅನಾಹುತಗಳಿಗೆ ನೀವೇ ಜವಾಬ್ದಾರರು ಎಂದರು.


ಈ ತಹಶೀಲ್ದಾರ್ ಹಾಗೂ ಸಬ್ ಇನ್ಸ್ಪೇಕ್ಟರ್‌ರವರಿಗೆ ಮನವಿ ಪತ್ರವನ್ನು ಕೃಷಿಕ ರತ್ನಾಕರ್‌ರವರ ನೇತೃತ್ವದಲ್ಲಿ ಕೊಡುವ ಸಂದರ್ಭದಲ್ಲಿ ಮಾರಿಗುಡ್ಡ ಗ್ರಾಮಸ್ಥರಾದ ಸಂದರ್ಭದಲ್ಲಿ ನಾಗೇಂದ್ರ ಡಿ, ಗೋವಿಂದರಾಜು, ಮಂಜುನಾಥ, ಗಣೇಶ, ಮಂಜುನಾಥ, ಪ್ರದೀಪ, ಮನು, ಕಟ್ಟೆ ರಾಘವೇಂದ್ರ, ರಮೇಶ, ಹೆಚ್.ಆರ್ ರಾಘವೇಂದ್ರ ಮಹೇಂದ್ರ, ಸಂತೋಷ ಹಾಗೂ ರೆವಿನ್ಯೂ ಇನ್ಸ್‌ಪೆಕ್ಟರ್ ವೆಂಕಟೇಶ್ ಮೂರ್ತಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!