ಬಸ್ ಮತ್ತು ಬೈಕ್ ನಡುವೆ ಅಪಘಾತ, ಸವಾರರಿಬ್ಬರು ಸ್ಥಳದಲ್ಲೇ ಸಾವು !

0 1,298

ತೀರ್ಥಹಳ್ಳಿ : ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ 16ನೇ ಮೈಲಿಕಲ್ಲಿನ ಮಂಡಗದ್ದೆ ಫಿಶ್ ಹೋಟೆಲ್ ಸಮೀಪ ಈ ಘಟನೆ ನಡೆದಿದೆ.

ಸಂಜೆ 6:45 ರ ಸುಮಾರಿಗೆ ಈ ಘಟನೆ ನಡೆದಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದ್ದು ಮೃತರ ಗುರುತು ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಬೈಕ್‌ನಲ್ಲಿದ್ದವರು ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದರು. ಶಿವಮೊಗ್ಗ ಕಡೆಯಿಂದ ತೀರ್ಥಹಳ್ಳಿಗೆ ಕಡೆಗೆ ಬರುತ್ತಿದ್ದ ಖಾಸಗಿ ಬಸ್‌ಗೆ (ಸಹ್ಯಾದ್ರಿ) ಮುಖಾಮುಖಿ ಡಿಕ್ಕಿಯಾದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.

ಇನ್ನೂ ಅಪಘಾತಕ್ಕೊಳಗಾದ ಬೈಕ್ ನಂಬರ್ ದಾವಣಗೆರೆ ರಿಜಿಸ್ಟ್ರೇಷನ್ ತೋರಿಸುತ್ತಿದ್ದು (KA 17 EC 2519) ಗಾಡಿಯ ಹಿಂಬದಿಯಲ್ಲಿ ದೊಡ್ಮನೆ ಎಂದು ಬರೆಯಲಾಗಿದೆ.

Leave A Reply

Your email address will not be published.

error: Content is protected !!