ಕೋಡೂರು ಬಳಿ ಪಲ್ಟಿಯಾದ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಲಾರಿ, ತಪ್ಪಿದ ಭಾರಿ ಅನಾಹುತ

0 1,104

ಹೊಸನಗರ : ಹೊಸನಗರ-ಶಿವಮೊಗ್ಗ ರಸ್ತೆಯ ಅಮ್ಮನಘಟ್ಟ ತಿರುವು ಬಳಿ ಇಂದು ಬೆಳಗಿನಜಾವ ಮಂಗಳೂರಿನಿಂದ ಬಳ್ಳಾರಿ ಜಿಲ್ಲೆ ಕೂಡ್ಲಿಗಿಗೆ ಇಂಧನ ತುಂಬಿಸಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಮಗುಚಿ ಬಿದ್ದ ಘಟನೆ ನಡೆದಿದೆ.

ಈ ಘಟನೆ ನಡೆದ ಪಕ್ಕದಲ್ಲೇ ನೂತನ ಪೆಟ್ರೋಲ್ ಬಂಕ್ ಇತ್ತೀಚಿಗಷ್ಟೇ ಪ್ರಾರಂಭಗೊಂಡಿದ್ದು ಯಾವುದೇ ಅನಾಹುತವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.

ಅಪಘಾತ ಸಂಭವಿಸಿದ ಸುದ್ದಿ ತಿಳಿಯುತ್ತಿದ್ದಂತೆ ಹೊಸನಗರ ಅಗ್ನಿಶಾಮಕ ದಳದ ಸಿಬ್ಬಂದಿಯವರು ಸ್ಥಳಕ್ಕೆ ಧಾವಿಸಿ ಸಂಭವಿಸಬಹುದಾದ ಬಾರಿ ದುರಂತವನ್ನು ಶಮನಗೊಳಿಸಿದ್ದಾರೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave A Reply

Your email address will not be published.

error: Content is protected !!