ಹೊಸನಗರದಲ್ಲಿ ಮರೀಚಿಕೆಯಾದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ! ಸಂಸದರೇ ಜನರ ಸಮಸ್ಯೆಗೆ ಪರಿಹಾರ ಯಾವಾಗ ?

0 468

ಹೊಸನಗರ : ತಾಲ್ಲೂಕಿನಲ್ಲಿ ಸುಮಾರು ವರ್ಷಗಳಿಂದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ತೊಂದರೆಯಿಂದ ಜನರು ಬೇರೆ-ಬೇರೆ ನೆಟ್‌ವರ್ಕ್‌ಗಳಿಗೆ ಮೊರೆ ಹೋಗಿದ್ದಾರೆ. ಕೆಲವರು ಇನ್ನೂ ಬಿಎಸ್‌ಎನ್‌ಎಲ್ ಟವರ್ ಇವತ್ತು, ನಾಳೆ ಸರಿಯಾಗಲಿದೆ ಎಂದು ಬಿಎಸ್‌ಎನ್‌ಎಲ್ ಸಿಮ್ ಇಟ್ಟುಕೊಂಡು ನೆಟ್‌ವರ್ಕ್ ಸರಿಯಾಗುವುದನ್ನೇ ಕಾಯುತ್ತಿದ್ದಾರೆ. ಕೆಲವು ಸರ್ಕಾರಿ ಕಛೇರಿಗಳಲ್ಲಿ ಬ್ಯಾಂಕ್‌ಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ಇನ್ನೂ ಎರಡು ತಿಂಗಳಲ್ಲಿ ಲೋಕಸಭೆ ಚುನಾವಣೆ ಆಗಮಿಸಲಿದ್ದು ಇನ್ನು ಬಿಎಸ್‌ಎನ್‌ಎಲ್ ಟವರ್ ಸರಿಯಾಗುವುದು ಮರೀಚಿಕೆಯಾಗಿಯೇ ಉಳಿಯಲಿದೆ ಎಂಬುದು ಜನ ಸಾಮಾನ್ಯರು ಮಾತನಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಕಛೇರಿಯೇ ಸರಿಯಿಲ್ಲ ಇನ್ನೂ ನೆಟ್‌ವರ್ಕ್ ಸರಿಯಾಗುವುದು ಯಾವಾಗ?
ಸುಮಾರು ಮೂರು ತಿಂಗಳ ಹಿಂದೆ ಸಂಸದರಾದ ಬಿ.ವೈ ರಾಘವೇಂದ್ರರವರು ಹೊಸನಗರಕ್ಕೆ ಆಗಮಿಸಿ ಹೊಸನಗರ ತಾಲ್ಲೂಕಿನಲ್ಲಿ 47 ಟವರ್‌ಗಳು ನಿರ್ಮಾಣವಾಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಸಚಿವರೊಂದಿಗೆ ಮಾತನಾಡಿ, ಹಣ ಬಿಡುಗಡೆಗೊಳಿಸಲಾಗಿದೆ. ತುರ್ತು ಕೆಲಸ ಪ್ರಾರಂಭಿಸುವುದಾಗಿ ಹೇಳಿಕೆ ನೀಡುವುದರ ಜೊತೆಗೆ ಹೊಸನಗರ ತಾಲ್ಲೂಕಿನ ಎಲ್ಲ ಹಳ್ಳಿ-ಹಳ್ಳಿಗಳಿಗೆ ಬಿಎಸ್‌ಎನ್‌ಎಲ್ ಟವರ್ ನಿರ್ಮಾಣವಾಗಲಿದೆ ಎಂಬ ಉದ್ದೇಶದಿಂದ ಅರಣ್ಯ ಇಲಾಖೆ ಬಿಎಸ್‌ಎನ್‌ಎಲ್ ಇಂಜಿನಿಯರ್‌ಗಳನ್ನು ಹಾಗೂ ಸರ್ಕಾರದ ಎಲ್ಲ ಅಧಿಕಾರಿಗಳನ್ನು ಕರೆಸಿ ತಕ್ಷಣ ಟವರ್ ನಿರ್ಮಾಣವಾಗಲು ಎಲ್ಲರೂ ಶ್ರಮಿಸಬೇಕೆಂದರು ಅದೇ ಸಭೆಯಲ್ಲಿ ಪತ್ರಕರ್ತರೊಬ್ಬರು ಹೊಸನಗರ ತಾಲ್ಲೂಕಿನ ಹೃದಯ ಭಾಗದಲ್ಲಿರುವ ಬಿಎಸ್‌ಎನ್‌ಎಲ್ ಕಛೇರಿಯ ಕಿಟಕಿಗಳು ಬಿದ್ದು ಹೋಗುತ್ತಿದೆ ಮಳೆಗಾಲದಲ್ಲಿ ಒಳಗೆ ಇರುವ ಮೀಷನರಿಗಳು ಹಾಳಾಗುತ್ತದೆ ಮಳೆಗಾಲದಲ್ಲಿ ಕಛೇರಿಯ ಒಳಗೆ ನೀರು ಬರುತ್ತಿರುವುದರಿಂದ ಒಳಗಿರುವ ಅಧಿಕಾರಿಗಳ ಜೀವಕ್ಕೆ ತೊಂದರೆಯಾಗಲಿದೆ ಎಂದು ಸೂಚಿಸಿದರು. ಆದರೆ ಇಲ್ಲಿಯವರೆಗೆ ಕಛೇರಿಯು ದುರಸ್ಥಿಯಾಗಿಲ್ಲ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಹ ಸರಿಯಾಗಿಲ್ಲ. ಸಂಸದರು ನೀಡುವ ಆಶ್ವಾಸನೆ ಹೊಸನಗರ ಜನರಿಗೆ ಬರೀ ಆಶ್ವಾಸನೆಯಾಗಿಯೇ ಉಳಿದಿದೆ.

ಎರಡು ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು ಇನ್ನಾದರೂ ತಕ್ಷಣ ಸಂಸದರು ಸ್ಪಂದಿಸಿ ಪಟ್ಟಣದ ಹಾಗೂ ಸುತ್ತ-ಮುತ್ತಲಿನಲ್ಲಿ ಬಿಎಸ್‌ಎನ್‌ಎಲ್ ಸಿಮ್ ಇರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿ ಎಂಬುದೇ ನಮ್ಮ ಆಶಯವಾಗಿದ್ದು ಇಲ್ಲವಾದಲ್ಲಿ ವಿರೋಧ ಪಕ್ಷದವರಿಗೆ ಬಿಎಸ್‌ಎನ್‌ಎಲ್ ಟವರ್ ಹಾಗೂ ನೆಟ್‌ವರ್ಕ್ ಇಲ್ಲದಿರುವುದೇ ಒಂದು ಅಸ್ತ್ರವಾಗಲಿದ್ದು ನಿಮ್ಮ ವಿರುದ್ಧ ಅಪಪ್ರಚಾರಕ್ಕೆ ದಾರಿಯಾಗಲಿದೆ ಸಂಸದರೇ ತಕ್ಷಣ ಎಚ್ಚೆತ್ತುಕೊಂಡು ಹೊಸನಗರ ತಾಲ್ಲೂಕಿನ ಎಲ್ಲ ರಾಜಕೀಯ ನಾಯಕರು ನಮ್ಮನ್ನಾಳುವ ನಾಯಕರು ನಮ್ಮನ್ನು ಕುಗ್ರಾಮ ಮಾಡಲು ಹೊರಟಿರುವುದನ್ನು ತಡೆಯಿರಿ.

Leave A Reply

Your email address will not be published.

error: Content is protected !!