ಲಾರಿ ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿ, 20 ಪ್ರಯಾಣಿಕರಿಗೆ ಗಾಯ

0 700

ಶೃಂಗೇರಿ : ಲಾರಿ ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ 20 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಕೆರೆಕಟ್ಟೆ ಸಮೀಪದ ಮಾತೊಳ್ಳಿ ಬಳಿ ನಡೆದಿದೆ.

ಗಾಯಾಳುಗಳಲ್ಲಿ 10ಕ್ಕೂ ಹೆಚ್ಚು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ. ಎರಡು ಗಂಟೆ ಕಾದರೂ ಸ್ಥಳಕ್ಕೆ ಆಂಬುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಗಾಯಾಳುಗಳು ಪರದಾಡಿದರು. ನಂತರ ಪೊಲೀಸರ ವಾಹನದಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಆಂಬುಲೆನ್ಸ್ ಬಾರದಿದ್ದಕ್ಕೆ ಪೊಲೀಸರು ಮಾನವೀಯತೆ ಮೆರೆದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದ್ದಾರೆ. ಅಪಘಾತದಲ್ಲಿ ಲಾರಿ ಮತ್ತು ಖಾಸಗಿ ಬಸ್ ಜಖಂಗೊಂಡಿವೆ. ಇನ್ನೂ ಘಟನೆ ಸಂಬಂಧ ಹಲವು ತಾಸುಗಳ ಕಾಲ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಕೂಡ ಉಂಟಾಗಿತ್ತು.

ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave A Reply

Your email address will not be published.

error: Content is protected !!