ಜ.26ಕ್ಕೆ ‘ಉಪಾಧ್ಯಕ್ಷ’ ಚಲನಚಿತ್ರ ಬಿಡುಗಡೆ ; ನಟ ಚಿಕ್ಕಣ್ಣ

0 330

ಶಿವಮೊಗ್ಗ: ತಾನು ಇದೇ ಮೊದಲ ಬಾರಿಗೆ ನಾಯಕನಟನಾಗಿ ಅಭಿನಯಿಸುತ್ತಿರುವ ಉಪಾಧ್ಯಕ್ಷ ಕನ್ನಡ ಸಿನಿಮಾ ಜ.26ಕ್ಕೆ ರಾಜ್ಯಾದ್ಯಂತ ತೆರೆಕಾಣುತ್ತಿದೆ ಎಂದು ಹಾಸ್ಯನಟ ಚಿಕ್ಕಣ್ಣ ಹೇಳಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಡಿ.ಎನ್. ಸಿನಿಮಾಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶಕ್ತಿ, ರ‍್ಯಾಂಬೋ-2, ಕೃಷ್ಣ ರುಕ್ಕು ಖ್ಯಾತಿಯ ಅನಿಲ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಉಮಾಪತಿ ಗೌಡ ಅವರು ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ ಎಂದರು.

ದಶಕದ ಹಿಂದೆ ತೆರೆಕಂಡು ಜನಪ್ರಿಯವಾಗಿದ್ದ ಚಿತ್ರ ಅಧ್ಯಕ್ಷ. ಹಾಸ್ಯನಟ ಶರಣ್ ಚಿತ್ರದ ನಾಯಕನಾಗಿ ಅಭಿನಯಿಸಿದ್ದರು. 12 ವರ್ಷಗಳ ನಂತರ ಇದೀಗ ಆ ಚಿತ್ರದ ಸೀಕ್ವೆಲ್ ಅಂದರೆ ಅದರ ಮುಂದುವರೆದ ಭಾಗವಾಗಿ ಉಪಾಧ್ಯಕ್ಷ ತಯಾರಾಗಿದೆ ಎಂದರು.

ನಾನು ಈವರೆಗೆ ಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಉಪಾಧ್ಯಕ್ಷ ಚಿತ್ರವನ್ನು ಕುಟುಂಬ ಸಮೇತ ಮುಜುಗರವಿಲ್ಲದೆ ಬಂದು ನೋಡಬಹುದಾದ ಹಳ್ಳಿ ಸೊಗಡಿನ ಕಥೆಯಿದೆ. ಅಧ್ಯಕ್ಷ ಚಿತ್ರ ನೋಡದವರಿಗೂ ಸಹ ಈ ಸಿನಿಮಾ ಅರ್ಥವಾಗುತ್ತದೆ. ಆ ಚಿತ್ರದ ಬಗ್ಗೆ ತೋರಿಸಿಯೇ ಈ ಸಿನಿಮಾ ಅರಂಭವಾಗುತ್ತದೆ ಜೊತೆಗೆ ಒಳ್ಳೆಯ ಲವ್‌ಸ್ಟೋರಿ ಕೂಡ ಇದೆ. ಚಿತ್ರಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದೇನೆ. ಈಗಾಗಲೇ ನಮ್ಮ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಜನರ ಮನ ಗೆದ್ದಿವೆ. ನಾನು ಕನ್ನಡದ ತುಂಬಾ ಜನ ಸ್ಟಾರ್‌ಗಳ ಜೊತೆ ಅಭಿನಯಿಸಿದ್ದೇನೆ, ಆ ಎಲ್ಲ ಸ್ಟಾರ್‌ಗಳ ಒಂದಷ್ಟು ಫ್ಯಾನ್ಸ್ ಬಂದು ನಮ್ಮ ಸಿನಿಮಾ ನೋಡಿದರೆ, ಚಿತ್ರ ಖಂಡಿತವಾಗಿಯೂ ಗೆಲ್ಲುತ್ತೆ ಎಂದು ಹೇಳಿದರು.

ನಿರ್ದೇಶಕ ಅನಿಲ್‌ಕುಮಾರ್ ಮಾತನಾಡಿ, ಉಪಾಧ್ಯಕ್ಷ, ಅಧ್ಯಕ್ಷನಚಿತ್ರದ ಮುಂದುವರೆದ ಪಕ್ಕಾ ಮನರಂಜನಾತ್ಮಕ ಚಿತ್ರವಾಗಿದೆ. ಇದೊಂದು ನಾಯಕನಾಗಿ ಚಿಕ್ಕಣ್ಣ ಗೆಲ್ಲಬೇಕು ಎನ್ನುವುದೇ ನಮ್ಮೆಲ್ಲರ ಉದ್ದೇಶ, ಲಾಕ್‌ಡೌನ್ ಸಮಯದಲ್ಲಿ ಚಂದ್ರಮೋಹನ್ ಈ ಕಥೆ ಹೇಳಿದರು. ಆನಂತರ ನಿರ್ಮಾಪಕ ಉಮಾಪತಿ ಅವರಿಗೆ ಹೇಳಿದಾಗ ಅವರೂ ಕಥೆಯನ್ನು ಇಷ್ಟಪಟ್ಟು ನಿರ್ಮಾಣಕ್ಕೆ ಮುಂದಾದರು. ಈ ಟೈಟಲನ್ನೂ ಸಹ ಅವರೇ ಅಲ್ಲಿಂದಲೇ ಉಪಾಧ್ಯಕ್ಷನ ಕಥೆ ಶುರುವಾಗುತ್ತದೆ ಎಂದರು.

ನಾಯಕಿ ಮಲೈಕ ಮಾತನಾಡಿ ಇಡೀ ಸಿನಿಮಾ ಪ್ರೇಕ್ಷಕರನ್ನು ನಗಿಸುತ್ತದೆ, ಲೈಫ್‌ನಲ್ಲಿ ಎಷ್ಟೇ ಒತ್ತಡವಿದ್ದರು ಚಿತ್ರ ನೋಡಿದ ಮೇಲೆ ಅದೆಲ್ಲ ಮರೆತು ಹೋಗುತ್ತದೆ. ಚಿಕ್ಕಣ್ಣ ಅವರಿಗೆ ಇದು ತುಂಬಾ ಸ್ಪೆಷಲ್ ಸಿನಿಮಾ ಎಂದರು.

Leave A Reply

Your email address will not be published.

error: Content is protected !!