ಗುರುಸ್ಪಂದನಾ ಕಾರ್ಯಕ್ರಮ | ಶಿಕ್ಷಕರು ತಮ್ಮ ಕರ್ತವ್ಯಗಳನ್ನು ಮರೆಯಬಾರದು

0 779

ಹೊಸನಗರ: ರಾಜ್ಯದಲ್ಲಿ ಅದು ಅಲ್ಲದೇ ಶಿವಮೊಗ್ಗ ಜಿಲ್ಲೆಯ ಹೊಸನಗರ (Hosanagara) ತಾಲ್ಲೂಕಿನ ಶಿಕ್ಷಕರ (Teacher’s) ಬಗ್ಗೆ ಅಪಾರ ಗೌರವವನ್ನು ಇಲ್ಲಿಯವರೆಗೆ ಕಾಪಾಡಿಕೊಂಡು ಬಂದಿದ್ದಾರೆ. ಹಿಂದಿನ ಶಿಕ್ಷಕರು ಹಾಕಿಕೊಟ್ಟ ಗೌರವವನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಹೆಚ್.ಆರ್. ಕೃಷ್ಣಮೂರ್ತಿಯವರು ಹೇಳಿದರು.

ಹೊಸನಗರ ಆರ್ಯ ಈಡಿಗರ ಭವನದ ಆವರಣದಲ್ಲಿ ಗುರುಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುರು ಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತೋಷದಾಯಕ ವಿಷಯವಾಗಿದೆ. ನಾವು ಶಿಕ್ಷಕರ ಸ್ಪಂದನೆಗಾಗಿ ಶೇ.95 ಕೆಲಸವನ್ನು ಮಾಡಿದ್ದೇವೆ. ಇನ್ನೂ ಅಲ್ಪ-ಸ್ವಲ್ಪ ಕೆಲಸ ಬಾಕಿ ಇರಬಹುದು. ಅದನ್ನು ಮಾಡಿ ಮುಗಿಸುತ್ತೇವೆ. ನಮಗೆ ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗಳಿಗೆ ಹೋಗುತ್ತಿಲ್ಲ ಎಂಬ ದೂರು ಬರುತ್ತೀವೆ. ಅದನ್ನು ಸರಿಪಡಿಸಿಕೊಳ್ಳುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ನಿಮ್ಮ ಶಾಲೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಎಲ್ಲ ಶಿಕ್ಷಕರ ಕರ್ತವ್ಯವಾಗಿದೆ ನೀವು ಮಾಡುವ ಕೆಲಸ ಮುಂದಿನ ಶಿಕ್ಷಕರಿಗೆ ದಾರಿ ದೀಪವಾಗಬೇಕಾಗಿರುವುದರಿಂದ ಪ್ರತಿಯೊಬ್ಬರು ತಮ್ಮ ಕರ್ತವ್ಯಗಳನ್ನು ಮರೆಯಬಾರದು ಎಂದರು.

ಶಾಲೆಯ ದಾಖಲಾತಿ ನೀಡುವಾಗ ಎಚ್ಚರ:
ಶಾಲೆಯ ದಾಖಲಾತಿಗಳಾದ ಟಿ.ಸಿ ಇತರೆ ದಾಖಲಾತಿ ನೀಡುವಾದ ದಾಖಲಾತಿ ಪುಸ್ತಕದಲ್ಲಿರುವಂತೆ ನೀಡಬೇಕು. ಒಂದು ಸ್ವಲ್ಪ ಹೆಚ್ಚು ಕಡಿಮೆಯಾದರೂ ನ್ಯಾಯಾಲಯದ ಮುಂದೆ ನಿಲ್ಲುವ ಪರಿಸ್ಥಿತಿ ಬರುತ್ತದೆ. ಎಚ್ಚರದಿಂದ ಕಾರ್ಯನಿರ್ವಹಿಸಿ ಎಂದರು.

ರಜೆ ಹಾಕುವ ಮುಂಚೆ ಬಿಇಒ ಗಮನಕ್ಕೆ ತರಬೇಕು:
ಶಿಕ್ಷಕರು ಈ ಹಿಂದೆ ರಜೆ ಹಾಕುವಾಗ ಶಾಲೆಯ ಮುಖ್ಯೋಪಾಧ್ಯಾಯರಿಗೆ ತಿಳಿಸಿ. ರಜೆ ಮೇಲೆ ಹೋಗುತ್ತಿದ್ದರು ಇದು ಸರಿಯಾದ ಕ್ರಮವಲ್ಲ. ಆರೋಗ್ಯ ಸಮಸ್ಯೆ ಅಥವಾ ತುರ್ತು ಸಂದರ್ಭದಲ್ಲಿ ರಜೆ ಹಾಕಿ ಹೋದರೆ ಅದಕ್ಕೆ ಮಾನ್ಯತೆಯಿದೆ. ಹಾಗೆಯೇ ರಜೆ ಹಾಕಿ ಹೋಗುವ ಸಂದರ್ಭದಲ್ಲಿ ಇಲಾಖೆಯ ಗಮನಕ್ಕೆ ತಂದು ರಜೆ ಹಾಕಬೇಕು. ಇಲ್ಲವಾದರೇ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್ ಸುರೇಶ್‌ ಮಾತನಾಡಿ, ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿರುವ ಸಿಬ್ಬಂದಿ ವರ್ಗ ಹಾಗೂ ಶಿಕ್ಷಣಾಧಿಕಾರಿಗಳು ಯಾವುದೇ ಸಂದರ್ಭದಲ್ಲಿಯು ನಮ್ಮೊಂದಿಗೆ ಸಹಕಾರ ನೀಡುತ್ತಿದ್ದಾರೆ. ಶಿಕ್ಷಕರ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯುತ್ತಿದೆ ತಾಲ್ಲೂಕಿನಲ್ಲಿರುವ ಎಲ್ಲ ಶಿಕ್ಷಕರ ಎಸ್.ಆರ್ ಪುಸ್ತಕವನ್ನು ನೋಡಿದರೆ ತಿಳಿಯುತ್ತದೆ ಶಿಕ್ಷಕರೇ ಶಿಕ್ಷಣ ಇಲಾಖೆಯ ವಿರುದ್ಧ ಹೋರಾಟ ಮಾಡುವುದು ಸರಿಯಾದ ಕ್ರಮವಲ್ಲ. ಹೆಚ್ಚುವರಿ ಶಿಕ್ಷಕರು ಇದ್ದ ಸ್ಥಳದಿಂದ ಕಡಿಮೆ ಇರುವ ಶಿಕ್ಷಕರ ಶಾಲೆಗಳಿಗೆ ವರ್ಗಾವಣೆ ಅಥವಾ ನಿಯೋಜನೆ ಮಾಡುವುದು ಸರ್ವೆ ಸಾಮಾನ್ಯ. ಅದಕ್ಕೆ ಎಸ್‌ಡಿಎಂಸಿಯವರನ್ನು ಕಟ್ಟಿಕೊಂಡು ಹೋರಾಟ ಮಾಡುವುದು ಸರಿಯಾದ ಕ್ರಮವಲ್ಲ ನಾವೆಲ್ಲರೂ ಒಟ್ಟಿಗೆ ಒಂದಾಗಿ ಹೋಗೋಣ ಎಂದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಎಲ್ಲ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವಣ್ಯಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್ ಸುರೇಶ್, ಕಾರ್ಯದರ್ಶಿ ಮಹಮ್ಮದ್ ಆಲ್ತಾಫ್, ಗೌರಾವಾಧ್ಯಕ್ಷ ಗಂಗಾನಾಯ್ಕ್, ಜಗದೀಶ್ ಕಾಗಿನೆಲೆ, ಖಜಾಂಚಿ ಪುಟ್ಟಸ್ವಾಮಿ, ಬಡ್ತಿ ಮುಖ್ಯೋಪಾಧ್ಯಾಯ ಸಂಘದ ಅಧ್ಯಕ್ಷ ಕುಬೇಂದ್ರಪ್ಪ, ಗಣಪತಿ ಆರ್, ಲಿಲ್ಲಿ ಡಿಸೋಜ, ಪೃಥ್ವಿರಾಜ್, ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಧರ್ಮಪ್ಪ, ಗಣೇಶ್, ಪೂರ್ಣಿಮಾ, ಸಿ.ಡಿ ನಿಜಗುಣ, ಶಿವಪ್ಪ, ಯುವರಾಜ್ ಒಡೆಯರ್, ಮೂರ್ತಿನಾಯಕ್, ಬಿ.ಎಂ ರಾಜು, ಸುಜಾತ, ಜಯಲಕ್ಷ್ಮಿ ಹಾಗೂ ಶಿಕ್ಷಕರ ಸಂಘದ ನಿರ್ದೆಶಕರು ಸಹಕಾರಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸದಸ್ಯರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!