ಹುಂಚ ಮುತ್ತಿನಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ ವೃದ್ಧೆಯ ಗುರುತು ಪತ್ತೆ

0 2,919

ರಿಪ್ಪನ್‌ಪೇಟೆ : ಹುಂಚದ ಮುತ್ತಿನಕೆರೆಯಲ್ಲಿ ಸೋಮವಾರ ಮಧ್ಯಾಹ್ನ ಪತ್ತೆಯಾಗಿದ್ದ ಮಹಿಳೆಯ ಶವದ ಗುರುತು ಪತ್ತೆಯಾಗಿದೆ.

ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದ ಜಯಮ್ಮ ಎಂದು ಗುರುತಿಸಲಾಗಿದೆ. ಮಾ.18 ರಂದು ಕೆರೆಯಲ್ಲಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು, ಆದರೆ ಈಕೆಯ ಗುರುತು ಪತ್ತೆಯಾಗಿರಲಿಲ್ಲ.

ಈಗ ಮೃತ ವೃದ್ದೆಯ ಗುರುತು ಪತ್ತೆಯಾಗಿದ್ದು, ಈಕೆಯ ಕಾಲಿಗೆ ಕಟ್ಟಲಾಗಿತ್ತು ಹಾಗೂ ಕಲ್ಲುಕಂಬವೊಂದನ್ನು ಈಕೆಯ ದೇಹಕ್ಕೆ ಕಟ್ಟಲಾಗಿತ್ತು. ಈ ಹಿನ್ನೆಲೆಯಲ್ಲಿ ಇದು ಕೊಲೆ ಶಂಕೆ ವ್ಯಕ್ತವಾಗಿತ್ತು.

ಸದ್ಯ ವೃದ್ಧೆಯ ಶವವನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ.

ಈಕೆಯ ಕೊಲೆಗೆ ಕಾರಣವೇನೆಂಬುದು ತಿಳಿಯಲು ಹಾಗೂ ಅಪರಾಧಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!