ರಿಪ್ಪನ್‌ಪೇಟೆಯ ವಿವಿಧೆಡೆ ಸಂಭ್ರಮದ 77ನೇ ಸ್ವಾತಂತ್ರ್ಯೋತ್ಸವ

0 31

ರಿಪ್ಪನ್‌ಪೇಟೆ: 77ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ ಸಂಭ್ರಮದೊಂದಿಗೆ ಶಾಲಾ ಕಾಲೇಜ್ ವಿದ್ಯಾರ್ಥಿಗಳ ಪಥ ಸಂಚಲನದೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.

ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮಾಧ್ಯಕ್ಷೆ ಧನಲಕ್ಷ್ಮಿ ಧ್ವಜಾರೋಹಣ ನೆರವೇರಿಸಿ ನಂತರ ಸರ್ಕಾರದ ಸೂಚನೆಯನ್ವಯ ಬರುವೆ ಆಣ್ಣಿಕೆರೆಯ ಬಳಿ ಧ್ವಜಾರೋಹಣ ನೆರವೇರಿಸಿ ಕೆರೆಗಳ ಒತ್ತುವರಿಯಾಗಿರುವುದು ಮತ್ತು ಅಂತರ್ಜಲ ಹೆಚ್ಚಳಕ್ಕಾಗಿ ಬರುವ ವರ್ಷದಲ್ಲಿ ಕೆರೆಯ ಹೂಳು ತೆಗೆಯುವುದರೊಂದಿಗೆ ಕೆರೆಗಳ ರಕ್ಷಣೆ ಮಾಡುವುದು ಇದರ ಉದ್ದೇಶವಾಗಿದೆ ಎಂದರು.

ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ. ಪ್ರವೀಣ್, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ.ಅನಿಲ್‌ಕುಮಾರ್, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜಪ್ಪ, ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮೇಲ್ವಿಚಾರಕ ರಾಘವೆಂದ್ರ, ಬಿಸಿಎಂ ಬಾಲಕಿಯ ವಿದ್ಯಾರ್ಥಿನಿಲಯದಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯೆ ಎಂ.ಡಿ.ಇಂದ್ರಮ್ಮ,ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಕ ಕೃಷಿ ಅಧಿಕಾರಿ ಶಾಂತಮೂರ್ತಿ, ಸರ್ಕಾರಿ ಪಶು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಡಾ.ದಯಾನಂದ,‌ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜ್‌ನಲ್ಲಿ ಪ್ರಾಚಾರ್ಯ ಟಿ.ಚಂದ್ರಶೇಖರ್, ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಪಾಚಾರ್ಯ ಎಸ್.ಕೆ.ಮಂಜುನಾಥ, ಶ್ರೀ ಗುರುಬಸವೇಶ್ವರ ವಿದ್ಯಾಸಂಸ್ಥೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಗುಡ್‌ಶಫರ್ಡ್ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು, ಮೇರಿಮಾತಾ ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು, ಜುಮ್ಮಾಮಸೀದಿಯಲ್ಲಿ ಧರ್ಮಗುರುಗಳು ಶಾರದ ರಾಮಕೃಷ್ಣ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವಿಕರಿಸಿದರು.

ನಂತರ ಪ್ರೌಢಶಾಲೆ ಪ್ರಾಥಮಿಕ ಮತ್ತು ಅಂಗನವಾಡಿ ಶಾಲೆಯ ವಿದ್ಯಾರ್ಥಿಗಳಿಂದ ಗ್ರಾಮದ ಪ್ರಮುಖ ಬೀದಿಯಲ್ಲಿ ಜಯಘೋಷಣೆಯೊಂದಿಗೆ ಜನಾಕರ್ಷಣೆ ಪಥಸಂಚಲ ನೇರವೇರಿತು.


ಕೋಡೂರು ವರದಿ ;
ಕೋಡೂರು ಗ್ರಾ.ಪಂ ಆವರಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗ್ರಾ.ಪಂ ಅಧ್ಯಕ್ಷ ಕೆ.ಎಸ್ ಉಮೇಶ್ ಧ್ವಜಾರೋಹಣ ಗೈಯುವ ಮೂಲಕ ಆಚರಿಸಲಾಯಿತು.
ಇನ್ನೂ ಕಾರಕ್ಕಿ ಗ್ರಾಮದಲ್ಲಿ ಅಮೃತ್ ಸರೋವರ ಯೋಜನೆಯಡಿ ನಿರ್ಮಾಣವಾದ ತಿಪ್ಪಯ್ಯನ ಕೆರೆಯಲ್ಲಿ ಊರಿನ ಹಿರಿಯರಾದ ಗಂಗಜ್ಜ ಕಾರಕ್ಕಿ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷರು, ಸದಸ್ಯರು, ಪಿಡಿಒ, ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಹಾಗೂ ಕೋಡೂರು ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು. ಮಕ್ಕಳ ವಿಶೇಷ ವೇಷಭೂಷಣ ನೆರೆದವರನ್ನು ಆಕರ್ಷಿಸಿತು.

Leave A Reply

Your email address will not be published.

error: Content is protected !!