ಮಲೆನಾಡಿನ ತೀರ್ಥಹಳ್ಳಿಯಲ್ಲಿ ಸಂವಿಧಾನ ಜಾಗೃತಿ ಜಾಥಾ

0 257

ತೀರ್ಥಹಳ್ಳಿ : ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಂವಿಧಾನದ ಆಧಾರ ಸ್ತಂಭಗಳು. ಸಂವಿಧಾನ ಜಾರಿಗೆ ಬಂದು 75 ವರ್ಷಗಳಾದ ಈ ಸಂದರ್ಭದಲ್ಲಿ ಸಂವಿಧಾನದ ಅರಿವು ಸಮಾಜದ ಪ್ರತಿ ಪ್ರಜೆಗಳಿಗೆ ತಲುಪಿಸುವುದು ಸರ್ಕಾರದ ಆಶಯವಾಗಿರುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಆಶಾಲತಾ ತಿಳಿಸಿದರು.

ಫೆ.15 ರಂದು ತೀರ್ಥಹಳ್ಳಿ ತಾಲ್ಲೂಕಿನ ಹೆಗ್ಗೋಡು ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಸಾಲೂರು ಗ್ರಾಮ ಪಂಚಾಯಿತಿ ಮೂಲಕ ತೀರ್ಥಹಳ್ಳಿ ತಾಲ್ಲೂಕು ಪ್ರವೇಶಿಸಿದ ಸಂವಿಧಾನ ಜಾಗೃತಿ ಜಾಥಾ ರಥವನ್ನ ಇಲ್ಲಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಇತರೆ ಸದಸ್ಯರುಗಳು, ವಿವಿಧ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು, ಮಹಿಳೆಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಪೂರ್ಣ ಕುಂಭ ಮೆರವಣಿಯೊಂದಿಗೆ ಸ್ವಾಗತಿಸಿದರು.

ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಧರ್ ಆಚಾರ್ ಮಾತನಾಡಿ, ಸಂವಿಧಾನದ ಮಹತ್ವವನ್ನು ಸಭೆಗೆ ತಿಳಿಸಿದರು. ಜಾಥವು ಹೊಸಹಳ್ಳಿ, ಹೆಗ್ಗೋಡು ಗ್ರಾಮ ಪಂಚಾಯಿತಿ ಮೂಲಕ ಚಲಿಸಿ ತೀರ್ಥಮತ್ತೂರು ಗ್ರಾಮ ಪಂಚಾಯತಿಯಲ್ಲಿ ವಾಸ್ತವ್ಯ ಮಾಡಲಾಯಿತು.

ಅರೆಹಳ್ಳಿ, ಬಿದರಗೋಡು, ಆಗುಂಬೆ, ಹೊನ್ನೆತಾಳು, ನಾಲೂರು, ಮೇಘರವಳ್ಳಿ, ಮುಳಾಗಿಲು, ಬಸವಾನಿ ಗ್ರಾಮ ಪಂಚಾಯಿತಿಗಳ ಮೂಲಕ ಜಾಗೃತಿ ಜಾಥಾದ ಎರಡು ಟ್ಯಾಬ್ಲೊಗಳು ಫೆಬ್ರವರಿ-14 ರಿಂದ 19ರವೆರೆಗೆ ಒಟ್ಟು 4 ದಿನಗಳವೆರೆಗೆ ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳು ಹಾಗೂ ಪಟ್ಟಣ ಪಂಚಾಯತ್‍ಗಳಲ್ಲಿ ಸಂಚರಿಸಲಿದ್ದು, ಸಂವಿಧಾನದ ಆಶಯಗಳನ್ನು ಜನಸಾಮಾನ್ಯರಿಗೆ ತಿಳಿಸಿಕೊಡಲಿದೆ.

Leave A Reply

Your email address will not be published.

error: Content is protected !!