ರೈತರು, ಸೈನಿಕರು, ಶಿಕ್ಷಕರು ದೇಶದ ಬೆನ್ನೆಲುಬು ; ಮಾಜಿ ಸೈನಿಕ ಕೃಷ್ಣಪ್ಪ ಎಂ

0 368

ರಿಪ್ಪನ್‌ಪೇಟೆ : ರೈತರು, ಸೈನಿಕರು ಮಬ ಶಿಕ್ಷಕರು ದೇಶದ ಬೆನ್ನೆಲುಬು ಎಂದು ಮಾಜಿ ಸೈನಿಕ ಕೃಷ್ಣಪ್ಪ ಎಂ ಹೇಳಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೌಡಕೊಪ್ಪದಲ್ಲಿ ಇಂದು ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರೈತರು ದೇಶಕ್ಕೆ ಅನ್ನವನ್ನು ನೀಡಿದರೆ ಶಿಕ್ಷಕರು ಸದೃಢ ಸಮಾಜವನ್ನು ಮತ್ತು ದೇಶವನ್ನು ಕಟ್ಟವ ಕಾರ್ಯ ಮಾಡುತ್ತಾರೆ. ಸೈನಿಕರು ದೇಶವನ್ನು ಕಾಯುವುದರ ಮೂಲಕ ದೇಶದಲ್ಲಿನ ಜನರನ್ನು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳುತ್ತಾರೆ ಎಂದು ತಿಳಿಸಿ, ಯುವಕರಿಗೆ ಸೈನ್ಯಕ್ಕೆ ಸೇರಲು ಕರೆ ನೀಡಿದರು.

ವಿದ್ಯಾರ್ಥಿಗಳಿಗೆ ಸೈನ್ಯದಲ್ಲಿನ ಅವರ ಅನುಭವಗಳನ್ನು ಹಂಚಿಕೊಳ್ಳುವುದರ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಯು ತನ್ನದೇ ಆಗಿರುವಂತಹ ಕೊಡುಗೆಯನ್ನು ನೀಡಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.

ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ರಾಘು ಪೂಜಾರಿ ಮಾತನಾಡಿ, ಈಗಿನ ದಿನಮಾನಗಳಲ್ಲಿ ಮೊಬೈಲ್ ಹಾವಳಿಯಿಂದ ಯುವಕರಲ್ಲಿ ಕ್ರೀಡೆ, ಸಾಂಸ್ಕೃತಿಕ ಓದು ಬರೆಯುವ ಕೌಶಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಮೊಬೈಲ್ ಅನ್ನು ಬಿಟ್ಟು ಪುಸ್ತಕವನ್ನು ಹಿಡಿಯುವುದರ ಮೂಲಕ ದೇಶಕ್ಕೆ ಗುರುತರವಾದ ಕಾಣಿಕೆ ನೀಡಲು ಸಲಹೆ ನೀಡಿದರು.

ಮುಖ್ಯ ಶಿಕ್ಷಕಿ ಅಂಬಿಕಾ ಸಂತೋಷ್ ಮಾತನಾಡಿ, ಪ್ರೇರಣಾ ಸ್ವಯಂಸೇವಾ ಸಂಘ ಪ್ರತಿ ವರ್ಷ ನಮ್ಮ ಸುತ್ತಮುತ್ತ ಇರುವ ಮಾಜಿ ಮತ್ತು ಹಾಲಿ ಸೈನಿಕರನ್ನು ಗುರುತಿಸಿ ಅವರಿಗೆ ಅಭಿನಂದನೆ ಸಲ್ಲಿಸುತ್ತಿರುವುದು ಅತ್ಯಂತ ಅರ್ಥ ಪೂರ್ಣ ಕಾರ್ಯಕ್ರಮ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಶೋಭಾ, ಎಸ್‌ಡಿಎಂಸಿ ಉಪಾಧ್ಯಕ್ಷೆ ಸುಮಿತ್ರಾ, ಸದಸ್ಯರಾದ ಆಶಾ, ಗಿರೀಶ್, ಸರಿತಾ ಹಾಗೂ ಪ್ರೇರಣಾ ಸ್ವಯಂಸೇವಾ ಸಂಘದ ಸದಸ್ಯರಾದ ಕೀರ್ತಿ, ಪ್ರಶಾಂತ, ದಿನೇಶ, ಶಾರದಾ, ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!