ಚಕ್ರವರ್ತಿ ಸೂಲಿಬೆಲೆ ವಿರುದ್ಧ FIR ದಾಖಲು ! ದೂರು ಕೊಟ್ಟವರ‍್ಯಾರು ? ಕಾರಣವೇನು ?

0 34

ಶಿವಮೊಗ್ಗ : ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಉಪಾಧ್ಯಕ್ಷೆ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದ ಆರೋಪದಡಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಶಿವಮೊಗ್ಗದ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಉಪಾಧ್ಯಕ್ಷೆ ಸೌಗಂಧಿಕಾ ರಘುನಾಥ್ ಅವರಿಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಫೇಸ್‌ಬುಕ್‌ನಲ್ಲಿ ಅವಾಚ್ಯ ಶಬ್ದದಿಂದ ನಿಂಧಿಸಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸೌಂಗಧಿಕಾ ಅವರು ಪಕ್ಷದ ಕಾರ್ಯಕರ್ತೆಯರೊಂದಿಗೆ ವಿನೋಬನಗರ ಪೊಲೀಸ್‌ ಠಾಣೆ ತೆರಳಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 504, 509ರ ಅಡಿ ಎಫ್ಐಆರ್ ದಾಖಲಾಗಿದೆ.

ಚಂದ್ರಯಾನ 3 ಯಶಸ್ವಿಯಾಗಲು ದೇವರಿಗೆ ಕೈ ಮುಗಿದು ಫೋಟೋ ಹಾಕಿ ಎಂದು ಚಕ್ರವರ್ತಿ ಸೂಲಿಬೆಲೆ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು. ಇದಕ್ಕೆ ಸೌಗಂಧಿಕ ರಘುನಾಥ್ ಅವರು ವಿಜ್ಞಾನಿಗಳ ಶ್ರಮಕ್ಕೆ ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ. ಆದರೆ ಅದನ್ನು ತೋರಿಕೆಗಾಗಿ ಆಗಲಿ ಅಥವಾ ಫೋಟೋಗಾಗಿ ದೇವರ ಮುಂದೆ ನಿಲ್ಲಬೇಡಿ ಎಂದು ಪ್ರತಿಕ್ರಿಯಿಸಿರುತ್ತಾರೆ.

ಪ್ರತಿಯಾಗಿ ಚಕ್ರವರ್ತಿ ಸೂಲಿಬೆಲೆ ಅವರು “ನಿನಗೆ ಎಲ್ಲಿ ಯಾಕೆ ಉರಿ ಬಂತು” ಎಂದು ಪ್ರತಿಕ್ರಿಯಿಸಿದ್ದಾರೆ. ಈ ಹಿನ್ನೆಯಲ್ಲಿ ಕಾಂಗ್ರೆಸ್ಸಿನ ಮಹಿಳಾ ಮುಖಾಂಡರಾದ ಸ್ಟೇಲ್ಲಾ ಮಾರ್ಟೀನ್, ಅರ್ಚನಾ, ಸಂಧ್ಯಾರಾಣಿ, ಶಮೀಮ್ ಭಾನು, ಶೋಭಾ, ನಾಗರತ್ನ, ಗ್ಲಾಡಿ, ರಸಿಯ, ಸಲೀಮ ಅವರು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಹಾಗೆಯೇ ಫೇಕ್ ಅಕೌಂಟ್ ಮೂಲಕ ಸಿದ್ದರಾಮಯ್ಯ ಅವರ ಬಗ್ಗೆ ಅಸಭ್ಯವಾಗಿ ಪೋಸ್ಟ್ ಮಾಡಿದವರ ವಿರುದ್ಧವು ದೂರು ದಾಖಲಿಸಲಾಯಿತು.

Leave A Reply

Your email address will not be published.

error: Content is protected !!