ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದಿದ್ದರೆ ಸರ್ಕಾರಿ ಸೌಲಭ್ಯದಿಂದ ವಂಚಿತರಾಗುತ್ತೀರಿ ; ಉಪ ತಹಶೀಲ್ದಾರ್ ರಾಕೇಶ್ ಬ್ರೀಟ್ಟೋ

0 32


ಹೊಸನಗರ: ತಾಲ್ಲೂಕಿನಲ್ಲಿ ಸರ್ಕಾರಿ ಸೌಲಭ್ಯ ಪಡೆಯುತ್ತಿರುವವರು ತಕ್ಷಣ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳದಿದ್ದರೇ ಮುಂದಿನ ದಿನದಲ್ಲಿ ಸರ್ಕಾರಿ ಸೌಲಭ್ಯ ಪಡೆಯುತ್ತಿರುವವವರು ಸರ್ಕಾರಿ ಸೌಲಭ್ಯದಿಂದ ವಂಚಿತರಾಗುತ್ತೀರಿ ಎಂದು ಹೊಸನಗರ ತಾಲ್ಲೂಕು ಕಛೇರಿಯ ಉಪತಹಶೀಲ್ದಾರ್ ರಾಕೇಶ್ ಬ್ರಿಟ್ಟೋರವರು ಹೇಳಿದರು.


ಅವರು ತಾಲ್ಲೂಕು ಕಛೇರಿಯ ಆವರಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಇಂದಿರಾ ಗಾಂಧಿ ವೃದ್ಯಾಪ್ಯ ಯೋಜನೆ, ವಿಧವಾ ವೇತನ, ಸಂಧ್ಯಾ ಸುರಕ್ಷ ಯೋಜನೆ, ಅಂಗವಿಕಲ ಪೋಷಣೆ ಯೋಜನೆ, ಪಿಂಚಣಿ ಸೌಲಭ್ಯ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಸೌಲಭ್ಯ ಪಡೆಯುತ್ತಿರುವ ಪಲಾನುಭವಿಗಳು ಬ್ಯಾಂಕ್ ಮತ್ತು ಅಂಚೆ ಕಛೇರಿಗಳಲ್ಲಿ ತಮ್ಮ ಖಾತೆಗೆ ಆಧಾರ್ ಕಾರ್ಡ್ ಜೊಡಣೆ ಮಾಡಿಸದಿದ್ದರೇ ಪುನಃ ಪರಿಶೀಲಿಸಿ ಆಧಾರ್ ಸಂಖ್ಯೆಗಳು ಎನ್‌ಪಿಸಿಯನ್ನು ಲಿಂಕ್ ಮಾಡಿಸುವಂತೆ ತಿಳಿಸಿದ್ದಾರೆ.


ಹೊಸನಗರ ತಾಲ್ಲೂಕಿನಲ್ಲಿ ಸುಮಾರು 6 ಸಾವಿರ ಫಲಾನುಭವಿಗಳು ಈ ಸೌಲಭ್ಯ ಪಡೆಯುತ್ತಿದ್ದು ಅದರಲ್ಲಿ 5 ಸಾವಿರ ಫಲಾನುಭವಿಗಳು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸಿಕೊಂಡಿದ್ದು ಸುಮಾರು 1ಸಾವಿರ ಜನರು ಇನ್ನೂ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿಕೊಂಡಿಲ್ಲ. ತಕ್ಷಣ ಮಾಡಿಸಿಕೊಳ್ಳಬೇಕೆಂದು ಕೇಳಿಕೊಂಡಿದ್ದಾರೆ.


ಈ ಸಂದರ್ಭದಲ್ಲಿ ಶಿರಾಸ್ಥೆದಾರ್ ಸುಧೀಂದ್ರಕುಮಾರ್, ಪ್ರಥಮ ದರ್ಜೆ ಗುಮಾಸ್ಥರಾದ ವಿನಯ್ ಎಂ ಆರಾಗ್ಯ, ಚಿರಾಗ್, ಗ್ರಾಮ ಆಡಳಿತಾಧಿಕಾರಿ ಕೌಶಿಕ್, ನವೀನ್, ಗುಮಾಸ್ಥ ಸತೀಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!