Suicide | ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ !

0 26

ಚಿಕ್ಕಮಗಳೂರು: ತಾಲ್ಲೂಕಿನ ಆಲ್ದೂರು ಸಮೀಪದ ದೊಡ್ಡಮಾಗರವಳ್ಳಿ ಗ್ರಾಮದ ಮಧು ಅವರ ಪತ್ನಿ ಪ್ರಿಯದರ್ಶಿನಿ ಎಂಬುವವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.


ಮೃತ ಪ್ರಿಯದರ್ಶಿನಿ ಮೂಡಿಗೆರೆ ತಾಲ್ಲೂಕಿನ ಹೆಸಗಲ್ ಗ್ರಾಮದವರಾಗಿದ್ದು ಇವರನ್ನು ಆಲ್ದೂರು ಸಮೀಪದ ದೊಡ್ಡಮಾಗರವಳ್ಳಿ ಗ್ರಾಮದ ಲಕ್ಷ್ಮಣ ಅವರ ಮಗ ಮಧು ಎಂಬುವವರಿಗೆ ವಿವಾಹ ಮಾಡಿಕೊಡಲಾಗಿತ್ತು. ಇವರಿಗೆ 4 ವರ್ಷದ ಒಂದು ಹೆಣ್ಣು ಮಗುವಿದೆ.


ಮೃತ ಪ್ರಿಯದರ್ಶಿನಿ ಹಾಗೂ ಅವರ ಪತಿ ಮಧು ತಮ್ಮ ಮನೆಯಲ್ಲಿ ಊಟ ಮುಗಿಸಿ ಮಲಗಿದ್ದು ಬೆಳಗ್ಗಿನಜಾವ ಸುಮಾರು 3:50 ಸಮಯದಲ್ಲಿ ಮಧು ಅವರ ಅಣ್ಣ ಮನು ಪ್ರಿಯದರ್ಶಿನಿ ಸಹೋದರ ಪರೀಕ್ಷಿತ್‍ಗೆ ಕರೆ ಮಾಡಿ ನಿಮ್ಮ ಅಕ್ಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಷಯ ತಿಳಿಸಿದ್ದಾರೆ. ಪ್ರಿಯದರ್ಶಿನಿ ಅವರ ಸಹೋದರ ಪರೀಕ್ಷಿತ್ ಆಲ್ದೂರು ಠಾಣೆಗೆ ದೂರು ನೀಡಿದ್ದು, ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.

Leave A Reply

Your email address will not be published.

error: Content is protected !!