ತಂದೆ-ತಾಯಿಯರು ಸಂಸ್ಕಾರವಂತರಾದರೆ ಮಕ್ಕಳು ಸಂಸ್ಕಾರವಂತರಾಗಲು ಸಾಧ್ಯ ; ಮೂಲೆಗದ್ದೆ ಶ್ರೀಗಳು

0 337

ರಿಪ್ಪನ್‌ಪೇಟೆ: ತಂದೆ-ತಾಯಿಯರು ಸಂಸ್ಕಾರವಂತರಾದರೆ ಅವರ ಮಕ್ಕಳು ಸುಸಂಸ್ಕಾರವಂತರಾಗಲು ಸಾಧ್ಯ. ದೇವರಿಗೆ ಶಕ್ತಿ ತುಂಬುವ ಗುರು ಹೇಗೆಯೋ ಹಾಗೆ ಮನೆಯಲ್ಲಿರುವ ತಾಯಿಯೇ ಸರ್ವ ಶ್ರೇಷ್ಟಳು. ಶಿವ-ಪಾರ್ವತಿಯರನ್ನು ನಾವು ಭಕ್ತಿಯಿಂದ ಪೂಜಿಸಿ ಪ್ರಾರ್ಥಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆಂಬ ನಂಬಿಕೆಯಂತೆ ನಮ್ಮ ಮಕ್ಕಳು ಗುರುವಿನೊಂದಿಗೆ ತಮ್ಮ ತಂದೆ ತಾಯಿಯವರ ಪಾದವನ್ನು ಭಕ್ತಿಯಿಂದ ಪೂಜೆ ಮಾಡಿದರೆ ವಿದ್ಯೆಯೊಂದಿಗೆ ಸಕಲವೂ ಸಿದ್ದಿಸುವುದೆಂದು ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಜಿ ಹೇಳಿದರು.

ಪಟ್ಟಣದ ಶ್ರೀಗುರುಬಸವೇಶ್ವರ ಪ್ರಾಥಮಿಕ ಮತ್ತು ಪ್ರೌಡಶಾಲೆಯಲ್ಲಿ ಶಾರದಾ ಪೂಜೆ ಮತ್ತು ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳ ಬೀಳ್ಕೊಡಿಗೆ ಕಾರ್ಯಕ್ರಮ ಮತ್ತು ತಂದೆ-ತಾಯಿಯರ ಪಾದಪೂಜೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿ, ಮಕ್ಕಳಿಗೆ ಪ್ರೀತಿಸುವುದರೊಂದಿಗೆ ತಪ್ಪು ಮಾಡಿದಲ್ಲಿ ಶಿಕ್ಷಿಸುವುದರಿಂದ ಮುಂದೆ ಉತ್ತಮರಾಗಲು ಸಹಕಾರಿಯಾಗುವುದು. ಮೊದಲ 10 ವರ್ಷ ಕಷ್ಟ ಪಟ್ಟರೆ ಮುಂದೆ ಜೀವನ ಪೂರ್ತಿ ಸುಖವಾಗಿರಬಹುದು. ಮನೆಯಲ್ಲಿ ಹಿರಿಯರು ಟಿವಿ ಮತ್ತು ಮೊಬೈಲು ಬಳಕೆಯಿಂದ ದೂರವಿದ್ದರೆ ಮಕ್ಕಳು ಸಹ ಈ ಗೀಳಿನಿಂದ ಮುಕ್ತರಾಗಲು ಸಾಧ್ಯವೆಂದ ಅವರು ಅಂಗ್ಲಭಾಷೆ ಬೇಕು ಆದರೆ ಅವರ ಸಂಸ್ಕೃತಿ ಬೇಡಾ ನಮ್ಮ ದೇಶ ಸಂಸ್ಕೃತಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಬದುಕು ಹಸನಾಗುವುದೆಂದು ಹೇಳಿ, ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಶ್ರಮಿಸುಬೇಕಾಗಿದೆ ಎಂದರು.

ಭವಿಷ್ಯದಲ್ಲಿ ಪರೀಕ್ಷೆ ಎಂಬ ಯುದ್ದ ಮಾಡಲು ಹೊರಟಿರುವ ಮಕ್ಕಳ ತಲೆ ಮೇಲೆ ಹಸ್ತವನ್ನು ಇಟ್ಟು ಭಕ್ತಿಯಿಂದ ತಂದೆ ತಾಯಿಯರು ಗುರು ಹಿರಿಯರು ಹರಸಿದಾಗ ಮಕ್ಕಳು ಜಯಸಾಧಿಸಲು ಸಾಧ್ಯವಾಗುವುದೆಂದರು.

ಪ್ರೌಢಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಈಶ್ವರಮಳಕೊಪ್ಪ ಆಧ್ಯಕ್ಷತೆ ವಹಿಸಿದ್ದರು.
ಎಸ್.ಜೆ.ಜಿ. ವಿದ್ಯಾಪೀಠದ ನಿರ್ದೇಶಕರಾದ ಎಲ್.ವೈ.ದಾನೇಶಪ್ಪ, ಹೆಚ್.ಎಂ.ವರ್ತೇಶ್‌ಗೌಡ ಹುಗುಡಿ, ಗುರುಬಸವೇಶ್ವರ ಹಿರಿಯ ಪ್ರಾಥಮಿಕ ಪಾಠಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಡಾಕಪ್ಪ, ಇಂದಿರಾ ದಾನೇಶಪ್ಪ, ಕುಶಲಾ, ಮುಖ್ಯೋಪಾಧ್ಯಾಯ ಗುರುಪ್ರಕಾಶ್, ಪ್ರೌಢಶಾಲೆಯ ಪ್ರಾಚಾರ್ಯ ಚಂದ್ರಪ್ಪ, ಇನ್ನಿತರ ಶಿಕ್ಷಕ ವೃಂದ ಹಾಜರಿದ್ದರು.

ವಿದ್ಯಾರ್ಥಿ ಸಾಹಿತ್ಯ ಸಂಗಡಿಗರು ಪ್ರಾರ್ಥಿಸಿದರು. ನಂದನ್ ಸ್ವಾಗತಿಸಿದರು.

Leave A Reply

Your email address will not be published.

error: Content is protected !!