ಕದ್ದಿರುವ ಜೆಸಿಬಿ ಬಳಸಿ ATM ಯಂತ್ರ ಕದಿಯಲು ಯತ್ನ !

0 43

ಶಿವಮೊಗ್ಗ : ನಗರದಲ್ಲಿ ಜೆಸಿಬಿ ಬಳಸಿ ಎಟಿಎಂ ಯಂತ್ರ ದೋಚಲು ಯತ್ನಿಸಿರುವ ಘಟನೆ ನಡೆದಿದೆ.

ವಿನೋಬನಗರ ಶಿವಾಲಯದ ಮುಂಭಾಗವಿರುವ ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಹಣ ದೋಚಲು ಕಳ್ಳ ಮುಂದಾಗಿದ್ದಾನೆ. ಸಮೀಪದ ಪೆಟ್ರೋಲ್ ಪಂಪ್ ಬಳಿಯಿದ್ದ ಜೆಸಿಬಿಯ ಕೀ ಅನ್ಲಾಕ್ ಮಾಡಿದ್ದಾನೆ. ಬಳಿಕ ಜೆಸಿಬಿಯಲ್ಲಿ ಬಂದು ಎಟಿಎಂ ಯಂತ್ರ ಕಳವು ಮಾಡಿ ಹಣ ದೋಚಲು ಮುಂದಾಗಿದ್ದಾನೆ.

ಆದರೆ ಶಟರ್ ಮುರಿಯುತ್ತಿದ್ದಂತೆ ಬ್ಯಾಂಕ್ ಕಂಟ್ರೋಲ್ ರೂಂಗೆ ಅಲಾರಾಂ ಹೋಗಿದೆ. ಕೂಡಲೇ ಬ್ಯಾಂಕ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿ ಜೆಸಿಬಿಯನ್ನು ಬಿಟ್ಟು ಪರಾರಿ ಆಗಿದ್ದಾನೆ.

ನಾಪತ್ತೆ ಆಗಿರುವ ಆರೋಪಿಗಾಗಿ ಹುಡುಕಾಟ ಮುಂದುವರಿದಿದ್ದು, ಜೆಸಿಬಿ ವಶಕ್ಕೆ ಪಡೆಯಲಾಗಿದೆ.

Leave A Reply

Your email address will not be published.

error: Content is protected !!