Shivamogga Airport | ತಿರುಪತಿ, ಗೋವಾ, ಹೈದರಾಬಾದ್‌‌ಗೆ ಇಂದಿನಿಂದ ವಿಮಾನ ಸೇವೆ ಆರಂಭ

0 4,052

ಶಿವಮೊಗ್ಗ : ಶಿವಮೊಗ್ಗ ವಿಮಾನ ನಿಲ್ದಾಣದಿಂದ (Shivamogga Airport) ಇಂಡಿಗೋ (Indigo) ಬಳಿಕ ಇದೀಗ ಸ್ಟಾರ್‌ ಏರ್‌ ಸಂಸ್ಥೆಯಿಂದಲೂ (Star Air) ವಿಮಾನ (Flight) ಸೇವೆ ಆರಂಭವಾಗಿದೆ.

ಶಿವಮೊಗ್ಗದಿಂದ ಗೋವಾ, ಹೈದರಾಬಾದ್ (Hyderabad) ಹಾಗೂ ತಿರುಪತಿಗೆ (Thirupathi) ವಾರದಲ್ಲಿ ಸ್ಟಾರ್‌ ಏರ್‌ನಿಂದ ನಾಲ್ಕು ದಿನ ವಿಮಾನ ಹಾರಾಟ ಇಂದಿನಿಂದಲೇ ಆರಂಭವಾಗಿದೆ.

ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://bit.ly/3SPThec

ಶಿವಮೊಗ್ಗ – ಗೋವಾ, ಹೈದರಾಬಾದ್‌ ಮತ್ತು ತಿರುಪತಿ ನಡುವೆ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ವಿಮಾನ ಹಾರಾಟ ಸೌಲಭ್ಯ ಇರುತ್ತದೆ. ಅದರಂತೆ ಇಂದು ಹೈದರಾಬಾದ್‌‌ನಿಂದ ಸ್ಟಾರ್ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಸಂಸದ ಬಿ.ವೈ ರಾಘವೇಂದ್ರ ಅವರು ಬರಮಾಡಿಕೊಂಡರು.

ಗೋವಾ, ಹೈದರಾಬಾದ್, ಹಾಗೂ ತಿರುಪತಿಗೆ ವಿಮಾನ ಹಾರಾಟಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಂಸದ ರಾಘವೇಂದ್ರ, ಶಿವಮೊಗ್ಗದ ಸರ್ವಾಂಗೀಣ ಅಭಿವೃದ್ಧಿಗೆ ಮತ್ತೊಂದು ವಿಮಾನ ಸಂಸ್ಥೆ ಸೇರ್ಪಡೆಯಾಗಿದೆ. ತಿರುಪತಿ, ಹೈದರಾಬಾದ್, ಗೋವಾಗೆ ಸಂಚರಿಸಲು ಉಡಾನ್ ಯೋಜನೆಯಡಿ ಈ ವಿಮಾನ ಹಾರಾಟ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಇಂದು ಒಂದೇ ದಿನ 400 ಜನ ಈ ಹೊಸ ವಿಮಾನದಲ್ಲಿ ಸಂಚರಿಸುತ್ತಿದ್ದಾರೆ. ಕೈಗಾರಿಕೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಈ ಏರ್‌ಪೋರ್ಟ್ ಪೂರಕವಾಗಿದೆ. ಸ್ಪೈಸ್ ಜೆಟ್ ಸೇರಿದಂತೆ ವಿವಿಧ ವಿಮಾನಯಾನ ಸಂಸ್ಥೆಗಳು ಶಿವಮೊಗ್ಗಕ್ಕೆ ಬರಲು ಉತ್ಸುಕತೆ ತೋರಿವೆ. ಇನ್ನು ಏರ್‌ಪೋರ್ಟ್ ನಲ್ಲಿ ಮಂಜು ಕವಿದ ವಾತಾವರಣ ತಿಳಿಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲದೇ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ತೊಂದರೆಗಳಾಗದಂತೆ ಕ್ರಮ ವಹಿಸಲಾಗಿದೆ ಎಂದರು.

ಶಿವಮೊಗ್ಗ ಏರ್‌ಪೋರ್ಟ್ ಮತ್ತಷ್ಟು ಅಭಿವೃದ್ಧಿ ಆಗಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಲಾಗಿದೆ. ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಕೂಡ ಡಿಸೆಂಬರ್ ವೇಳೆಗೆ ಮುಗಿಯಲಿದೆ. ಕಡಿಮೆ ಖರ್ಚಿನಲ್ಲಿ ಸುಂದರ ಏರ್‌ಪೋರ್ಟ್ ನಿರ್ಮಿಸಿರುವುದು ಮಲೆನಾಡಿಗರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಈಗಾಗಲೇ ಶಿವಮೊಗ್ಗ-ಬೆಂಗಳೂರು ನಡುವೆ ಇಂಡಿಗೋ ವಿಮಾನ ಸಂಚರಿಸುತ್ತಿದೆ. ಇದೀಗ ಸ್ಟಾರ್ ಏರ್ ಲೈನ್ಸ್ ವಿಮಾನಗಳು ಶಿವಮೊಗ್ಗದಿಂದ ಗೋವಾ, ಹೈದರಾಬಾದ್, ತಿರುಪತಿಗೆ ಹಾರಾಟ ನಡೆಸಲಿವೆ.

Leave A Reply

Your email address will not be published.

error: Content is protected !!