ಪರಿಸರ ನಾಶದಿಂದ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗುತ್ತಿದೆ ; ಸಿಪಿಐ ಗುರಣ್ಣ ಎಸ್ ಹೆಬ್ಬಾಳ್

0 294

ಹೊಸನಗರ: ಕಾಡು ಪ್ರಾಣಿಗಳಿಗೆ ಜಲಚರಗಳಿಗೆ ಪಕ್ಷಿಗಳಿಗೆ ಪರಿಸರ ನಾಶದಿಂದ ತೊಂದರೆಯಾಗುತ್ತಿದ್ದು ಇವುಗಳನ್ನು ಉಳಿಸಿಕೊಳ್ಳಬೇಕಾದರೆ ಕಾಡು ನಾಶ ಮಾಡುವುದಿಲ್ಲ ಪ್ಲಾಸ್ಟಿಕ್ ಬಳಸುವುದಿಲ್ಲ ಹಾಗೂ ಎಲ್ಲೆಂದರಲ್ಲಿ ಬಿಸಾಕುವುದಿಲ್ಲ ಎಂದು ಪ್ರತಿಯೊಬ್ಬರು ಪ್ರತಿಜ್ಞೆ ಮಾಡಬೇಕಾಗಿದೆ ಎಂದು ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ ಹೇಳಿದರು.

ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಅಂದೊಲನದ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಸೈಕ್ಲಿಂಗ್ ಕ್ಲಬ್ ಇವರ ವತಿಯಿಂದ ಕೊಪ್ಪದಿಂದ ಸಿಗಂದೂರುವರೆಗೆ ಸೈಕ್ಲಿಂಗ್‌ನಲ್ಲಿ ಹೊಸನಗರದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದು ಬೆಳಿಗ್ಗೆ 8 ಗಂಟೆಗೆ ಕೊಪ್ಪದಿಂದ ಹೊಸನಗರ ಮಾರ್ಗವಾಗಿ ಪ್ರಯಾಣ ಬೆಳಸಿದ್ದು ಹೊಸನಗರ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಮಾತನಾಡಿದರು.

ಪರಿಸರ ನಾಶವಾಗಿರುವುದರಿಂದ ಸರಿಯಾದ ಸಮಯಕ್ಕೆ ಮಳೆಯಿಲ್ಲದಂತಾಗಿದ್ದು ಮಲೆನಾಡು ಪ್ರದೇಶದಲ್ಲಿ ಬರಗಾಲ ತಂಡಾವ ವಾಡುತ್ತಿದೆ ಪರಿಸರ ಉಳಿಸುವುದು ಪ್ಲಾಸ್ಟಿಕ್ ತ್ಯಾಜಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು ನಾವು-ನೀವು ಸೇರಿ ಜನರಲ್ಲಿ ಜಾಗೃತಿ ಮೂಡಿಸೋಣ ಎಂದರು.

ಈ ಸೈಕ್ಲಿಂಗ್‌ನಲ್ಲಿ ಭಾಗವಹಿಸಿದ ಕೊಪ್ಪ ರವಿ ಮೆಡಿಕಲ್ಸ್ ಮಾಲೀಕ ರವಿ ಮಾತನಾಡಿ, ಕಾಡು ಪ್ರಾಣಿಗಳು ಜಲಚರಗಳು ಸರಿಸೃಪಗಳ ಪಕ್ಷಿಗಳು ಪರಿಸರ ನಾಶದಿಂದ ತೊಂದರೆಗೊಳಗಾಗುತ್ತಿದೆ ಅವುಗಳ ಜೀವ ಮತ್ತು ಜೀವನ ನೇರವಾಗಿ ಪ್ರಕೃತಿಯನ್ನೇ ಅವಲಂಬಿಸಿರುವುದರಿಂದ ಪರಿಸರದಲ್ಲಾಗುವ ಚಿಕ್ಕ ಬದಲಾವಣೆಯೂ ಸಹ ಅವುಗಳ ನಾಶಕ್ಕೆ ಕಾರಣವಾಗಬಲ್ಲದು ಅಥವಾ ಅವುಗಳ ಜೀವನ ಕ್ರಮವನ್ನೇ ಬದಲಿಸಿ ಜೈವಿಕ ಸರಪಳಿಯನ್ನೇ ತುಂಡಾಗಬಹುದು. ಮನುಷ್ಯ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಭೂಮಿಯಲ್ಲಿ ಪರಿಸರ ಆತಂಕದಲ್ಲಿದೆ ಪ್ಲಾಸ್ಟಿಕ್ ಮಿತವಾಗಿ ಬಳಸಿ ಎಂದರು.

ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ನೇತೃತ್ವದಲ್ಲಿ ಕೊಪ್ಪದಿಂದ ಆಗಮಿಸಿ ಹೊಸನಗರ ಮಾರ್ಗವಾಗಿ ಸಿಗಂದೂರಿಗೆ ಸೈಕ್ಲಿಂಗ್‌ನಲ್ಲಿ ತೆರಳಿದರು.

Leave A Reply

Your email address will not be published.

error: Content is protected !!