ವಿದ್ಯಾಭ್ಯಾಸದೊಂದಿಗೆ ಕ್ರೀಡಾ ಚಟವಟಿಕೆಗಳಿಗೆ ಪ್ರಾಮುಖ್ಯತೆ ನೀಡಿ ; ಮಧು ಬಂಗಾರಪ್ಪ

0 34

ಶಿವಮೊಗ್ಗ: ಮಕ್ಕಳು ವಿದ್ಯಾಭ್ಯಾಸದೊಂದಿಗೆ ಕ್ರೀಡೆ ಮತ್ತು ಇತರೆ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡಬೇಕೆಂದು ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧುಬಂಗಾರಪ್ಪನವರು ತಿಳಿಸಿದರು.


ಶಿವಮೊಗ್ಗದ ನೆಹರೂ ಒಳಕ್ರೀಡಾಂಗಣದಲ್ಲಿ ಇಂದಿನಿಂದ ಏರ್ಪಡಿಸಲಾಗಿರುವ ಶಿವಮೊಗ್ಗ ಓಪನ್ 4ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿ-2023 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.


ವಿದ್ಯಾರ್ಥಿಗಳು ಎಲ್ಲ ರೀತಿಯಲ್ಲಿ ಬೆಳೆಯಬೇಕು. ಅದಕ್ಕಾಗಿ ವಿದ್ಯೆಯೊಂದಿಗೆ ಈ ರೀತಿಯ ಚಟುವಟಿಕೆಗಳು ಅಗತ್ಯವಾಗಿದೆ. ಜಿಲ್ಲಾ ಮಟ್ಟದಲ್ಲಿ ನಡೆಯುವ ಕರಾಟೆ ಹಾಗೂ ಎಲ್ಲ ರೀತಿಯ ಕ್ರೀಡಾ ಚಟುವಟಿಕೆಗಳಿಗೆ ತಾವು ಸಹಕಾರ ನೀಡುವುದಾಗಿ ತಿಳಿಸಿದ ಅವರು ಸರ್ಕಾರದ ವತಿಯಿಂದ ದೊರಕುವ ಎಲ್ಲ ಸೌಲಭ್ಯಗಳನ್ನು ನೀಡುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.


ಪಾಲಿಕೆ ಸದಸ್ಯರಾದ ಹೆಚ್.ಸಿ ಯೋಗೇಶ್ ಮಾತನಾಡಿ, ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಅಂತರಾಷ್ಟ್ರ ಮಟ್ಟದ ಈ ಪಂದ್ಯಾವಳಿಯಲ್ಲಿ 1200 ಸ್ಪರ್ಧಿಗಳು, 78 ತೀರ್ಪುಗಾರರು, ಕೋಚ್‍ಗಳು ಬಂದಿದ್ದು ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.


ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಉಡುಪಿ ತಂಡದ ಕರಾಟೆ ಪಟುಗಳಾದ ಆಯುಷ್ ಮತ್ತು ಛಾಯಾರನ್ನು ಸನ್ಮಾನಿಸಲಾಯಿತು ಹಾಗೂ ವಲ್ರ್ಡ್ ಗ್ರಾಂಡ್ ಮಾಸ್ಟರ್‍ಗಳಾದ ರಾಜ್ಯದ ಅಫ್ತಾಬ್, ಶ್ರೀಲಂಕಾದ ಹಂಶಿ ಮೆಡೊನ್ಝಾ, ನೇಪಾಳದ ಅರುಣ್ ಕರ್ಕಿ ಮತ್ತು ಅಮೇರಿಕಾದ ಪೆರಿ ಎಫ್.ಮೌಲಾ ಇವರನ್ನು ಸನ್ಮಾನಿಸಲಾಯಿತು.


ಮಾಜಿ ಸೂಡಾ ಅಧ್ಯಕ್ಷ ರಮೇಶ್ ಮಾನಾಡಿದರು. ಕಾರ್ಯಕ್ರಮದಲ್ಲಿ ಗೋಣಿಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಪಾಲಿಕೆ ಮೇಯರ್ ಶಿವಕುಮಾರ್, ಪಾಲಿಕೆ ವಿರೋಧಪಕ್ಷದ ನಾಯಕಿ ರೇಖಾ ರಂಗನಾಥ್, ಪಾಲಿಕೆ ಸದಸ್ಯರು, ವಲ್ರ್ಡ್ ಗ್ರಾಂಡ್ ಮಾಸ್ಟರ್‍ಗಳು, ರಾಜ್ಯ ಕರಾಟೆ ಸಂಘದ ಕಾರ್ಯದರ್ಶಿ ಶಿವಮೊಗ್ಗ ವಿನೋದ್ ಮತ್ತು ತಂಡದವರು, ಇತರರು ಹಾಜರಿದ್ದರು.

Leave A Reply

Your email address will not be published.

error: Content is protected !!