ದಿ|| ದೇವರಾಜ ಅರಸುರವರ ಚಿಂತನೆ, ಸಾಧನೆಯನ್ನು ಇಂದಿನ ಯುವಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು

0 101


ಹೊಸನಗರ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ||ದೇವರಾಜ ಅರಸುರವರ ಚಿಂತನೆ ಸಾಧನೆಗಳನ್ನು ಇಂದಿನ ಯುವಪೀಳಿಗೆಗೆ ತಲುಪಿಸುವ ಜವಾಬ್ದಾರಿ ಹಿರಿಯರ ಮೇಲಿದೆ. ಹಿರಿಯರು ಅದನ್ನು ಹೇಳಿ ತಲುಪಿಸುವ ಕೆಲಸ ಮಾಡಬೇಕು ಎಂದು ನಾಡಹಬ್ಬಗಳ ಸಮಿತಿಯ ಸದಸ್ಯರಾದ ಹೆಚ್. ಶ್ರೀನಿವಾಸ್ ಕಾಮತ್‌ರವರು ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ದಿ|| ದೇವರಾಜ ಅರಸುರವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಪೂಜೆ ಸಲ್ಲಿಸಿ ಮಾತನಾಡಿದ ಅವರು, ಇವರು ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾಗ ರಾಜ್ಯ ಸಂಪೂರ್ಣ ಸುಭಿಕ್ಷೆಯಿಂದ ಕೂಡಿತ್ತು ಇವರು ಬಡವರಿಗಾಗಿ ಹಾಗೂ ಹಿಂದುಳಿದ ಜನರಿಗಾಗಿ ಅನೇಕ ಹೊಸ-ಹೊಸ ಯೋಜನೆಗಳನ್ನು ಜಾರಿಗೆ ತಂದು ಹಿಂದುಳಿದ ಜನಾಂಗದ ಜನನಾಯಕರಾಗಿದ್ದಾರೆ ಉಳುವವನೇ ಭೂಮಿಯ ಒಡೆಯ ಎನ್ನುವುದು ಬಡವರ ರೈತರ ಪಾಲಿಗೆ ಉತ್ತಮವಾದ ಯೋಜನೆಯಾಗಿತ್ತು.
ಇವರು ಸ್ವಾಭಿಮಾನ ಮತ್ತು ಹೋರಾಟದ ಶಕ್ತಿಯಾಗಿದ್ದು ಬೆಳೆಸಿಕೊಂಡವರು. ಹೋರಾಟದ ಛಲವನ್ನು ಮೈಗೂಡಿಸಿಕೊಂಡಿರುವುದರಿಂದಲೇ ಎಲ್ಲ ಹಿತಾಸಕ್ತಿಗಳನ್ನು ಬದಿಗೊತ್ತಿ ಕೆಲಸ ಮಾಡಿದ್ದರಿಂದ ಜನನಾಯಕರೆನಿಸಿಕೊಂಡಿದ್ದಾರೆ ಎಂದರು.


ಈ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಚುನಾವಣೆ ಶಿರಾಸ್ಥೆದಾರ್ ಸತೀಶ್, ನಾಡಹಬ್ಬಗಳ ಸಮಿತಿಯ ಸದಸ್ಯ ಎನ್ ಶ್ರೀಧರ ಉಡುಪ, ಬಿ.ಸಿ.ಎಂ ಹಾಸ್ಟೆಲ್ ಪ್ರಥಮ ದರ್ಜೆ ಗುಮಾಸ್ಥ ನಟರಾಜ್, ಪಟ್ಟಣ ಪಂಚಾಯಿತಿ ಸದಸ್ಯರಾದ ಗುಲಾಬಿ ಮರಿಯಪ್ಪ, ಕೃಷ್ಣವೇಣಿ, ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್, ವಾರ್ಡನ್ ಕಲಾವತಿ, ಪಟ್ಟಣ ಪಂಚಾಯತಿ ಆರೋಗ್ಯ ಇಲಾಖೆಯ ಪ್ರಶಾಂತ್, ವಿವಿಧ ಇಲಾಖೆಯ ಅಧಿಕಾರಿಗಳ ವರ್ಗ ನೌಕರರ ವರ್ಗ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!