ವಿನಯಾಂಜಲಿ |“ಸಮ್ಯಕ್ತ್ವ ಪ್ರಾಪ್ತಿ ಮಾಡಿಕೊಂಡ ರಾಷ್ಟ್ರಸಂತ” ಪ್ರಾತಃಸ್ಮರಣೀಯ ಆಚಾರ್ಯಶ್ರೀ 108 ವಿದ್ಯಾಸಾಗರ ಮಹಾರಾಜ ; ಹೊಂಬುಜ ಶ್ರೀಗಳು

0 236

ರಿಪ್ಪನ್‌ಪೇಟೆ : ರಾಷ್ಟ್ರಸಂತ ಆಚಾರ್ಯ ಶ್ರೀ 108 ವಿದ್ಯಾಸಾಗರ ಮುನಿಶ್ರೀಯವರು 77ನೇ ವಯಸ್ಸಿನಲ್ಲಿ ಸಲ್ಲೇಖನ ವ್ರತದ ಬಳಿಕ ಸಮಾಧಿ ಮರಣ ಹೊಂದಿದರು. ಅವರ ಅಗಲಿಕೆಯು ಜೈನಧರ್ಮೀಯರಿಗಲ್ಲದೇ, ಇಡೀ ದೇಶದ ಎಲ್ಲಾ ಧರ್ಮದವರಿಗೆ ದುಃಖವನ್ನುಂಟು ಮಾಡಿದೆ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಫೆ. 19ರ ಸೋಮವಾರದಂದು ಶ್ರೀಕ್ಷೇತ್ರದಲ್ಲಿ ನಡೆದ ವಿನಯಾಂಜಲಿ ಸಭೆಯಲ್ಲಿ ತಿಳಿಸಿದರು.

ಕರ್ನಾಟಕದಲ್ಲಿ ಜನಿಸಿದ ಆಚಾರ್ಯ ಶ್ರೀಗಳು ಉತ್ತರ ಭಾರತದ ನೂರಾರು ಜಿನಾಲಯಗಳ ಪಂಚಕಲ್ಯಾಣ ನೆರವೇರಿಸಿದ್ದನ್ನು ನೆನಪಿಸಿದರು.
ವಿದ್ಯಾಸಾಗರ ಮುನಿಶ್ರೀಯವರು “ಪ್ರಾಕೃತ, ಸಂಸ್ಕೃತ, ಹಿಂದಿ, ಮರಾಠಿ, ಕನ್ನಡ, ಇಂಗ್ಲೀಷ್ ಮುಂತಾದ ಹತ್ತಕ್ಕೂ ಹೆಚ್ಚು ಭಾಷಾ ಪಾಂಡಿತ್ಯವನ್ನು ಹೊಂದಿದ್ದರು. 100ಕ್ಕೂ ಹೆಚ್ಚು ಜೈನ ಧರ್ಮ ತತ್ವ ಸಂಸ್ಕಾರ, ಸಂಸ್ಕೃತಿಗಳ ಕೃತಿ ರಚಿಸಿದ್ದಾರೆ. ಶಿಷ್ಯರಿಗೆ ದೀಕ್ಷಾ ಗುರುಗಳಾಗಿ ಉನ್ನತ ಆದರ್ಶ ತೋರಿದ್ದಾರೆ. ಸತತ 60 ವರ್ಷಗಳ ಕಾಲ ಉತ್ತರ ಭಾರತದಲ್ಲಿ ಪ್ರಭಾವೀ ಪ್ರವಚನದ ಮೂಲಕ ಸಮಾಜದ ಸಾಮರಸ್ಯ, ಸಹಭಾಳ್ವೆಗೆ ಪ್ರೇರಣೆ ನೀಡಿದ್ದರು. ಅವರು ಸಮ್ಯಕ್ತ್ವ ಪ್ರಾಪ್ತಿ ಮಾಡಿಕೊಂಡ ಶ್ರೇಷ್ಠ ಮುನಿಶ್ರೀಗಳಾಗಿದ್ದರು ಮತ್ತು ಪ್ರಾತಃ ಸ್ಮರಣೀಯರಾಗಿ ದೇಹತ್ಯಾಗವಾದರೂ ನಾವೆಲ್ಲರೂ ಅವರ ಸನ್ಮಾರ್ಗ ಪಥದಲ್ಲಿ ಸಾಗೋಣ” ಎಂದು ಹೊಂಬುಜ ಶ್ರೀಗಳು ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪ್ರಾರ್ಥಿಸಿ ವಿನಯಾಂಜಲಿ ಸಮರ್ಪಿಸಿದರು.

ಶ್ರಾವಕ-ಶ್ರಾವಿಕೆಯರು ಪುಷ್ಪಗಳನ್ನಿರಿಸಿ ಗೌರವ ಸಲ್ಲಿಸಿದರು.

Leave A Reply

Your email address will not be published.

error: Content is protected !!