ರಿಪ್ಪನ್‌ಪೇಟೆಯಲ್ಲಿ ವ್ಯಕ್ತಿಯ ಶವ ಪತ್ತೆ !

0 1,188

ರಿಪ್ಪನ್‌ಪೇಟೆ : ಇಲ್ಲಿನ ಹೊಸನಗರ ರಸ್ತೆಯ ಹಳೇ ಗವಿಸಿದ್ದೇಶ್ವರ ಬಾರ್ ಬಳಿಯಲ್ಲಿ ಮಲಗಿರುವ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.

ಮೃತನನ್ನು ಶಿನ್ಸ್ ಜೋಸೇಫ್ ಎನ್ನಲಾಗುತಿದ್ದು ಈತನು ಕಳೆದ 20 ವರ್ಷಗಳ ಹಿಂದೆ ರಿಪ್ಪನ್‌ಪೇಟೆಯಲ್ಲಿ ವಾಸವಾಗಿದ್ದು ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ನಿವಾಸಿಯಾಗಿದ್ದಾನೆ.

ಕಳೆದೆರಡು ತಿಂಗಳುಗಳಿಂದ ರಿಪ್ಪನ್‌ಪೇಟೆಯಲ್ಲಿ ಸ್ನೇಹಿತರೊಂದಿಗೆ ಇದ್ದ ಈತನು ಭಾನುವಾರ ರಾತ್ರಿ ಹೊಸನಗರ ರಸ್ತೆಯ ಹಳೇ ಗವಿಸಿದ್ದೇಶ್ವರ ಬಾರ್ ಬಳಿಯಲ್ಲಿ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದಾನೆ.

ಮೃತದೇಹವನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದ್ದು ರಿಪ್ಪನ್‌ಪೇಟೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave A Reply

Your email address will not be published.

error: Content is protected !!