ರಾಷ್ಟ್ರವನ್ನು ದೀಪಾವಳಿ ಬೆಳಗಿಸಲಿ | ‌ಪೃಥ್ವಿಗೆ ಹಾಲುಣಿಸುವ ಗೋವು ಮಾತೃ ಸಮಾನ ; ಹೊಂಬುಜ ಶ್ರೀಗಳು

0 745

ರಿಪ್ಪನ್‌ಪೇಟೆ : ದೀಪಾವಳಿ (Deepavali) ಪಾಡ್ಯದಂದು ಗೋವುಗಳನ್ನು ಪೂಜಿಸುತ್ತೇವೆ. ಸನಾತನ ಧರ್ಮ ಶಾಸ್ತ್ರದಲ್ಲಿ ಗೋವುಗಳು (Cows) ಪೃಥ್ವಿಗೆ ಹಾಲುಣಿಸುವ ಮಾತೃ ಸಮಾನ ಎಂಬ ವಿಚಾರವನ್ನು ಸರ್ವರೂ ಅರಿತುಕೊಳ್ಳಬೇಕು ಎಂದು ಹೊಂಬುಜ (Hombuja) ಜೈನ ಮಠದ (Jaina Mutt) ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ತಿಳಿಸಿದರು.

ಶ್ರೀಕ್ಷೇತ್ರ ಹೊಂಬುಜ ಶ್ರೀಮಠದ ಗೋಶಾಲೆಯಲ್ಲಿ ಧಾನ್ಯಾದಿ ಕಜ್ಜಾಯಗಳನ್ನು ಗೋವುಗಳಿಗೆ ಸೇವಿಸಲು ನೀಡಿ, ಆಗಮೋಕ್ತ ವಿಧಾನದಲ್ಲಿ ದೀಪ ಬೆಳಗಿಸಿ, ಗಂಧ ಕುಂಕುಮ ಪ್ರಸಾದ, ತಿಲಕವಿಟ್ಟು ಪೂಜಿಸಿದ ಬಳಿಕ ಪ್ರವನಚದಲ್ಲಿ ತಿಳಿಸಿದರು.

ಕೃಷಿ ಕ್ಷೇತ್ರ ವರ್ಧಿಸಲು ಪ್ರತಿಯೋರ್ವ ರೈತರು ಕಾಮಧೇನು ಸ್ವರೂಪದ ಗೋವುಗಳನ್ನು ಪೋಷಿಸುವುದು ಭಾರತೀಯ ಸನಾತನ ಧರ್ಮದ ಸಂಕೇತ. ದೀಪಾವಳಿ ಪರ್ವದ ಆಚರಣೆಯಿಂದ ರಾಷ್ಟ್ರ ಬೆಳಗಲೆಂದು ಶುಭಾಶೀರ್ವಾದ ಮಾಡಿದರು.

ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಅಬೀಷ್ಠವರಪ್ರದಾಯಿನಿ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕ್ಷೇತ್ರಪಾಲ, ತ್ರಿಕೂಟ ಜಿನಾಲಯಗಳಲ್ಲಿ ಪೂಜಾ ವಿಧಾನಗಳಲ್ಲಿ ಊರ-ಪರವೂರ ಭಕ್ತರು ಪಾಲ್ಗೊಂಡರು.

Leave A Reply

Your email address will not be published.

error: Content is protected !!