ಜೆಜೆಎಂ ಯೋಜನೆ ಸಮರ್ಪಕ ಅನುಷ್ಟಾನಕ್ಕೆ ಶ್ರಮಿಸಿ ; ಬೇಳೂರು ಗೋಪಾಲಕೃಷ್ಣ

0 229

ರಿಪ್ಪನ್‌ಪೇಟೆ: ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೆ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಜಲಜೀವನ್ ಮಿಷನ್ ಯೋಜನೆ ಜಾರಿಗೊಳಿಸಿದ್ದು ಈ ಯೋಜನೆಯಡಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬರುವೆ, ಗವಟೂರು, ಕೆರೆಹಳ್ಳಿ, ಮುಗುಟಿಕೊಪ್ಪ ಗ್ರಾಮಗಳ ವ್ಯಾಪ್ತಿಗೆ 9 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ರಿಪ್ಪನ್‌ಪೇಟೆಯ ವಿವಿಧ ಬಡಾವಣೆಗಳ ವ್ಯಾಪ್ತಿಗೆ ಜಲಜೀವನ್ ಯೋಜನೆಯಡಿ 9 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಈ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ವಿನಾಯಕ ವೃತ್ತದಲ್ಲಿ ಆಯೋಜಿಸಲಾದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ಚಕ್ರನಗರದಿಂದ ಹೊಸನಗರ ತಾಲ್ಲೂಕಿನ ಕಸಬಾ ಮತ್ತು ಕೆರೆಹಳ್ಳಿ ಹೋಬಳಿಯ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಸರ್ಕಾರ 417 ಕೋಟಿ ರೂ‌. ಅನುದಾನವನ್ನು ಬಿಡುಗಡೆ ಮಾಡಿದೆ. ಈ ಯೋಜನೆಯ ಸಮಗ್ರ ಅನುಷ್ಟಾನಕ್ಕೆ ಅಧಿಕಾರಿಗಳು ಶ್ರಮಿಸುವಂತೆ ಹೇಳಿ, ಎಷ್ಟೇ ದೂರವಿದ್ದರೂ ಕೂಡಾ ಕಾಮಗಾರಿ ಮಾಡಬೇಕು ಐಎಸ್‌ಐ ಮಾರ್ಕ್‌ನ ಉಪಕರಣಗಳನ್ನು ಬಳಸಬೇಕು ಕಳಪೆ ಗುಣಮಟ್ಟದ ಪೈಪ್‌ಗಳನ್ನು ಬಳಸಿರುವುದು ಕಂಡರೆ ತಕ್ಷಣ ನನ್ನ ಗಮನಕ್ಕೆ ತರುವಂತೆ ಗ್ರಾಮಸ್ಥರಿಗೆ ತಿಳಿಸಿದರು.

ಜನ ಮತಹಾಕುವ ಮೂಲಕ ನನಗೆ ಆಶೀರ್ವದಿಸಿದ್ದಾರೆ. ಅವರ ಋಣ ತೀರಿಸಬೇಕಾಗಿದೆ. ಅಭಿವೃಧ್ಧಿ ವಿಚಾರದಲ್ಲಿ ಪಕ್ಷ ಬೇಧ ಮರೆತು ಕೆಲಸ ಮಾಡುವುದಾಗಿ ಹೇಳಿ, ಮುಂದಿನ ದಿನಗಳಲ್ಲಿ ಈಗಾಗಲೇ ಆನಂದಪುರ ಮಾರ್ಗದ ರಸ್ತೆಯ ಅಗಲೀಕರಣ ಕಾಮಗಾರಿ ಪ್ರಾರಂಭವಾಗಿದ್ದು ಇದರೊಂದಿಗೆ ತೀರ್ಥಹಳ್ಳಿ ರಸ್ತೆಯ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಕೊಡಿಸುವುದರೊಂದಿಗೆ ಶಿವಮೊಗ್ಗ – ಹೊಸನಗರ ರಸ್ತೆಗೂ ಅನುದಾನವನ್ನು ಕೊಡಿಸುವುದಾಗಿ ಭರವಸೆ ನೀಡಿದರು.

ನಾನು ಕಳೆದ ಹತ್ತು ವರ್ಷ ಕಾಲ ಅಧಿಕಾರವಿಲ್ಲದೇ ವನವಾಸ ಅನುಭವಿಸುವಂತಾದರೂ ಕೂಡಾ ಧೃತಿಗೆಡದೆ ಸದಾ ಜನರ ಜೊತೆ ಇದ್ದು ಅವರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಪ್ರೀತಿ ವಿಶ್ವಾಸಗಳಿಸಿದರ ಪರಿಣಾಮದಿಂದಾಗಿ ಈ ಬಾರಿ ನನ್ನ ಆಯ್ಕೆ ಮಾಡಿದ್ದೀರ ಆ ಕಾರಣ ನಾನು ನಿಮ್ಮ ಯಾವುದೇ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದಾಗಿ ಹೇಳಿ, ನನ್ನ ಬಳಿ ಬರಲು ಯಾರನ್ನು ಅವಲಂಭಿಸುವುದು ಬೇಡಾ ನೇರವಾಗಿ ಬರುವಂತೆ ಹೇಳಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಡಿ.ಈ.ಮಧುಸೂದನ್, ಗಣಪತಿ, ಆಶೀಫ್, ಪ್ರಕಾಶ ಪಾಲೇಕರ್, ವಿನೋಧ, ಮಹಾಲಕ್ಷ್ಮಿ, ಎನ್.ಚಂದ್ರೇಶ್, ಸುಂದರೇಶ್, ಜಿ.ಡಿ.ಮಲ್ಲಿಕಾರ್ಜುನ, ಅನುಪಮಾ ರಾಕೇಶ್, ದಾನಮ್ಮ, ಅಶ್ವಿನಿ ರವಿಶಂಕರ್, ಸಾರಾಭಿ, ತಹಶೀಲ್ದಾರ್ ರಶ್ಮಿ, ಲೋಕೋಪಯೋಗಿ ಇಲಾಖೆಯ ಎಇಇ ಮಲ್ಲಿಕಾರ್ಜುನ, ಪಿಎಸ್‌ಐ ಪ್ರವೀಣ್‌ಕುಮಾರ್, ಪಿಡಿಓ ಮಧುಸೂದನ್, ಇನ್ನಿತರರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!