ಶಾರದಾ ವಿವಿದ್ದೋದ್ದೇಶ ಸೌಹಾರ್ದದಿಂದ ನೇರ ಅಡಿಕೆ ಖರೀದಿ ಪ್ರಾರಂಭ | ನಮ್ಮ ಸಂಸ್ಥೆ ರೈತರಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಡಿಕೆ ಪ್ರೋತ್ಸಾಹ ಧನ ನೀಡುತ್ತಿದೆ ; ಅಧ್ಯಕ್ಷ ಶಿವಶಂಕರ್ ಹೆಚ್.ಎಸ್

0 830

ಹೊಸನಗರ: ಶಾರದಾ ವಿವಿದ್ದೋದೇಶ ಸೌಹಾರ್ಧ ಸಹಕಾರಿ ಸಂಸ್ಥೆಗಳು ರೈತರಿಗೆ ಗ್ರಾಹಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಡಿಕೆ (Arecanut) ಪ್ರೋತ್ಸಾಹ ಧನ ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತಿದೆ ಎಂದು ಶಾರದ ವಿವಿಧ್ದೋದೇಶ ಸಹಕಾರಿ ಸಂಸ್ಥೆಯ ಜಿಲ್ಲಾಧ್ಯಕ್ಷ ಶಿವಶಂಕರ್ ಹೆಚ್.ಎಸ್‌ರವರು ಹೇಳಿದರು.

ಹೊಸನಗರದ (Hosanagara) ಸ್ಟೇಟ್ ಬ್ಯಾಂಕ್ ಹಿಂಭಾಗದಲ್ಲಿ ನೇರ ಅಡಿಕೆ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ನಮ್ಮ ಸಂಸ್ಥೆ ಸುಮಾರು 24 ವರ್ಷಗಳಿಂದ ವಿವಿಧ ರೀತಿಯಲ್ಲಿ ಸಾರ್ವಜನಿಕರ ರೈತರ ಹಾಗೂ ಷೇರುದಾರರ ಸೇವೆ ಮಾಡಿಕೊಂಡು ಬರುತ್ತಿದೆ. ನಮ್ಮ ಸಂಸ್ಥೆಯಲ್ಲಿ ವಿವಿಧ ರೀತಿಯ ಠೇವಣಿ ಯೋಜನೆಗಳು ಸಹಕಾರಿ ಸದಸ್ಯರಿಗೆ ಲಭ್ಯವಿದೆ. ಅಡಿಕೆ, ಕಾಫಿ, ಕಾಳುಮೆಣಸು, ಶುಂಠಿ, ಸೇರಿದಂತೆ ಇತ್ಯಾದಿ ದಾಸ್ತಾನುಗಳು ಬಂಗಾರ ಅಡಮಾನ, ಠೇವಣಿ ಆಧಾರ, ವಾಹನ ಸಾಲ ಸೇರಿದಂತೆ ಕನಿಷ್ಠ ಬಡ್ಡಿ ದರ ಹಾಗೂ ಹಲವು ಆಧಾರ ಸಾಲಗಳು ಕನಿಷ್ಠ ಬಡ್ಡಿದರ ಹಾಗೂ ಗರಿಷ್ಠ ಪ್ರಮಾಣದಲ್ಲಿ ತ್ವರಿತ ರೀತಿಯಲ್ಲಿ ಸಾಲ ನೀಡುವ ವ್ಯವಸ್ಥೆಯಿದೆ. ರೈತರು ಷೇರುದಾರರು ಇದರ ಉಪಯೋಗವನ್ನು ಪಡೆದುಕೊಂಡು ನಮ್ಮ ಸಂಸ್ಥೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಯಲು ಸಹಕರಿಸಬೇಕೆಂದು ಕೇಳಿಕೊಂಡರು.

ಶಾರದಾ ವಿವಿದ್ದೋದೇಶ ಸಹಕಾರಿ ಸಂಸ್ಥೆಯ ವ್ಯವಸ್ಥಾಪಕರಾದ ಮಂಜುನಾಥ್ ಶರ್ಮ ಈ ಸಂದರ್ಭದಲ್ಲಿ ಮಾತನಾಡಿ, ನಮ್ಮ ಸಂಸ್ಥೆ ರಿಪ್ಪನ್‌ಪೇಟೆ ಶಾಖೆಯಲ್ಲಿ ಕೋಲ್ಡ್ ಸ್ಟೋರೇಜ್ ಗೋದಾಮಿನ ವ್ಯವಸ್ಥೆ ಇದ್ದು ಸಿಪ್ಪೆಗೋಟು, ಚಾಲಿ, ಶುಂಠಿ, ಮೆಣಸು, ಅರಿಶಿನ ಕೊಂಬು ಇತ್ಯಾದಿಗಳನ್ನು ದಾಸ್ತಾನು ಮಾಡಬಹುದಾಗಿದ್ದು ಅಲ್ಲದೇ ಸಾಲದ ವ್ಯವಸ್ಥೆಯೂ ಲಭ್ಯವಿದೆ. ವಿವಿಧ ಶಾಖೆಗಳಲ್ಲಿ ಹವಾ ನಿಯಂತ್ರಿತವಲ್ಲದ ಗೋದಾಮುಗಳು ದಾಸ್ತಾನಿಗೆ ಲಭ್ಯವಿದ್ದು ಬೆಳೆಗಾರರು ಸರಕುಗಳನ್ನು ಇಟ್ಟು ಉತ್ತಮ ಧಾರಣೆಯ ಸಂದರ್ಭದಲ್ಲಿ ಮಾರಾಟ ಮಾಡಲು ಅವಕಾಶವಿದೆ. ಇದಕ್ಕೂ ಸಹ ಸಾಲದ ವ್ಯವಸ್ಥೆಯ ಸೌಲಭ್ಯವಿದ್ದು ಎಲ್ಲ ಬೆಳೆಗಾರರು ಷೇರುದಾರರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದರು.

ಈ ಕಾರ್ಯಕ್ರಮದಲ್ಲಿ ಶಾರದ ಸಹಕಾರಿ ಸೌರ್ಹಾದದ ನಿರ್ದೆಶಕರುಗಳಾದ ರಮಾಕಾಂತ್ ಹೆಚ್.ಜಿ, ಎಂ.ಪಿ.ರಾಮನಂದ, ಶಾಖಾ ವ್ಯವಸ್ಥಾಪಕರಾದ ಗಿರೀಶ್‌ಎಸ್.ಕೆ, ಶಮಂತ್ ಎನ್.ಆರ್, ಚಿಕ್ಕನಕೊಪ್ಪ ಸ್ವರೂಪ್, ರಜತ್ ಡಿಎನ್, ರಕ್ಷಿತಾ ಜಿ.ಎನ್, ಭಾರ್ಗವಿ ಶಾಖಾ ಸಿಬ್ಬಂದಿಗಳು ಅಡಿಕೆ ಮಂಡಿಯ ಸಿಬ್ಬಂದಿಗಳು ಶಾರದಾ ಬ್ಯಾಂಕ್ ಸಿಬ್ಬಂದಿಗಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!