ಶ್ರಾವಣ ಮಾಸದ ಪ್ರಯುಕ್ತ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪುನಸ್ಕಾರ

0 38

ಸೊರಬ: ಪುರಾಣ ಪ್ರಸಿದ್ಧ ಐತಿಹಾಸಿಕ ಶ್ರೀ ರೇಣುಕಾಂಬ ದೇಗುಲದಲ್ಲಿ ಗುರುವಾರದಂದು ಶ್ರಾವಣ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಪೂಜೆ ಪುನಸ್ಕಾರಗಳು ನಡೆದವು.

ದೇವಾಲಯದಲ್ಲಿ ಆಗಸ್ಟ್ 2 ರಂದು ದುಷ್ಕರ್ಮಿಗಳು ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿ ವಿಫಲ ಕಳ್ಳತನ ಪ್ರಯತ್ನ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಶ್ರಾವಣ ಮಾಸದ ಮೊದಲನೇ ದಿನವಾದ ಗುರುವಾರದಂದು ಶ್ರೀ ರೇಣುಕಾಂಬ ದೇವಸ್ಥಾನದ ಕಾರ್ಯ ನಿರ್ವಹಣಾ ಅಧಿಕಾರಿಗಳು ದೇವಸ್ಥಾನ ವ್ಯವಸ್ಥಾಪನ ಸಮಿತಿಯವರು ಹಾಗೂ ಊರ ಗ್ರಾಮಸ್ಥರ ಸಮ್ಮುಖದಲ್ಲಿ ದೇವಾಲಯದಲ್ಲಿ ನವಗ್ರಹ ಪೂರ್ವಕ ಸಂಪ್ರೋಕ್ಷಣೆ ಕಾರ್ಯಕ್ರಮಗಳು ನಡೆದವು, ಅಲ್ಲದೇ ಅಮ್ಮನವರಿಗೆ ಶಕ್ತಿ ತುಂಬುವ ರೂಪದಲ್ಲಿ ಇಲ್ಲಿನ ಯಾಗ ಶಾಲೆಯಲ್ಲಿ ನವಗ್ರಹ ಪೂರ್ವಕ ಸಂಪ್ರೋಕ್ಷಣೆ ಹಾಗೂ ಕಲವೃಧ್ಧಿ, ನವಚಂಡಿ ಹೋಮ, ದೇವಿಯ ಪುನರ್ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ. https://fb.watch/mtU6Vdt1oh/?mibextid=NnVzG8

ಮಂಕಿ ಅನಂತ್ ಭಟ್ ರಾಯ್ಕರ್, ದೇವಸ್ಥಾನದ ಪ್ರಧಾನ ಅರ್ಚಕ ಅರವಿಂದ್ ಭಟ್, ದೇವಾಲಯದ ತಾಂತ್ರಿಕರಾದ ಕೆಳದಿ ರಾಮ್ ಭಟ್ ಇವರ ನೇತೃತ್ವದಲ್ಲಿ ಧಾರ್ಮಿಕ ಪೂಜೆ ಪುನಸ್ಕಾರಗಳು ನಡೆದವು.

ದೇವಾಲಯದಲ್ಲಿ ವಿಶೇಷ ತಳಿರು ತೋರಣ ಹಾಗೂ ಬಗೆ ಬಗೆಯ ಹೂವಿನ ಅಲಂಕಾರ ಮಾಡಲಾಗಿತ್ತು, ಬಂದಂತಹ ಭಕ್ತರಿಗೆ ಶ್ರೀ ರೇಣುಕಾಂಬ ಕಲ್ಯಾಣ ಮಂಟಪದಲ್ಲಿ ದೇವಿಯ ಹೆಸರಿನಲ್ಲಿ ಅನ್ನದಾಸೋಹ ಸೇವೆ ನಡೆಯಿತು.

“ಈ ಹಿಂದೆ ದೇವಾಲಯದಲ್ಲಿ ದುಷ್ಟರು ವಿಫಲ ಕಳ್ಳತನ ಪ್ರಯತ್ನ ನಡೆಸಿದ್ದು ಅಲ್ಲದೇ ಗರ್ಭಗುಡಿಗೆ ಪ್ರವೇಶಿಸಿ ದೇವಿಯ ಮೂರ್ತಿಯ ಬೆಳ್ಳಿ ಮುಖ ವಿರೂಪಗಳಿಸಿದ್ದರು. ಧಾರ್ಮಿಕ ಸಂಪ್ರದಾಯದಂತೆ ನಾಡಿನ ಸಮಸ್ತ ಭಕ್ತರ ಒಳಿತಿಗಾಗಿ ನವಗ್ರಹ ಪೂರ್ವಕ ಸಂಪ್ರೋಕ್ಷಣೆ, ವಿಶೇಷ ಹೋಮ, ಹವನಗಳನ್ನು ದೇಗುಲದಲ್ಲಿ ನಡೆಸಿದ್ದೇವೆ.”
– ವಿ.ಎಲ್ ಶಿವಪ್ರಸಾದ್ ದೇವಸ್ಥಾನ ಕಾರ್ಯ ನಿರ್ವಹಣಾ ಅಧಿಕಾರಿ

    ಸೊರಬ ತಾಲೂಕು ದಂಡಾಧಿಕಾರಿಗಳಾದ ಹುಸೇನ್ ಸರಕಾವಸ್, ದೇವಸ್ಥಾನ ಕಾರ್ಯ ನಿರ್ವಹಣಾ ಅಧಿಕಾರಿ ವಿ.ಎಲ್ ಶಿವಪ್ರಸಾದ್, ದೇವಾಲಯ ಅಧ್ಯಕ್ಷ ಪ್ರಸನ್ನ ಶೇಟ್, ಮಾಜಿ ತಾ.ಪಂ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಹೆಚ್. ಗಣಪತಿ ಹುಲ್ತಿಕೊಪ್ಪ, ಗ್ರಾಂ.ಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ, ಉಪಾಧ್ಯಕ್ಷ ರೇಣುಕಾ ಪ್ರಸಾದ್, ಸದಸ್ಯರಾದ ರತ್ನಾಕರ್ ಎಂ.ಪಿ, ತಾ.ಪಂ ಮಾಜಿ ಸದಸ್ಯ ನಾಗರಾಜ್ ಎನ್.ಜಿ, ಮುಜರಾಯಿ ಇಲಾಖೆ ವಿಷಯ ನಿರ್ವಾಹಕಿ ಎಂ.ಶೃತಿ ಸೇರಿದಂತೆ ಊರಿನ ಗ್ರಾಮಸ್ಥರು ದೇವಸ್ಥಾನ ವ್ಯವಸ್ಥಾಪನ ಸಮಿತಿಯವರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

    Leave A Reply

    Your email address will not be published.

    error: Content is protected !!