ನಕ್ಸಲ್ ಶ್ರೀಮತಿ ತೀರ್ಥಹಳ್ಳಿ ಕೋರ್ಟ್‌ಗೆ ಕರೆ ತಂದ ಪೊಲೀಸರು

0 702

ತೀರ್ಥಹಳ್ಳಿ : ನಕ್ಸಲ್ ಹೋರಾಟದ ಕೇಸ್ ಗಳ ತನಿಖೆ ಶಿವಮೊಗ್ಗದಲ್ಲಿ ಮತ್ತಷ್ಟು ಚುರುಕುಗೊಂಡಿದ್ದು ನಕ್ಸಲ್ ಹೋರಾಟದ ಕೇಸ್ ಸಂಬಂಧ ಕಾನೂನು ಪ್ರಕ್ರಿಯೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.

ನಕ್ಸಲ್ ನಾಯಕ ಬಿ.ಜಿ‌. ಕೃಷ್ಣಮೂರ್ತಿ ಯವರನ್ನ ಕಳೆದ ತಿಂಗಳು ಕೋರ್ಟ್‌ಗೆ ಹಾಜರುಪಡಿಸಿದ್ದ ಬೆನ್ನಲ್ಲೇ ಇದೀಗ ಮತ್ತೋರ್ವ ನಕ್ಸಲ್ ನಾಯಕಿ ತೀರ್ಥಹಳ್ಳಿ ಪೊಲೀಸರ ವಶಕ್ಕೆ ಪಡೆದು ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ.

ನಕ್ಸಲ್ ಶೃಂಗೇರಿಯ ಶ್ರೀಮತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಇಂದು ಬೆಳಿಗ್ಗೆ 10:30 ಕ್ಕೆ ತೀರ್ಥಹಳ್ಳಿ ಜೆಎಂಎಫ್ ಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಆಗುಂಬೆ ಠಾಣೆ ಕೇಸ್ ಸಂಬಂಧ ಕೋರ್ಟ್‌ಗೆ ಹಾಜರುಪಡಿಸಿದ್ದು ನಕ್ಸಲ್ ಶ್ರೀಮತಿಯನ್ನು ಬಾಡಿ ವಾರೆಂಟ್ ಮೇಲೆ ಕರತರಲಾಗಿದೆ.

ಹೈ ಸೆಕ್ಯೂರಿಟಿ ಮೂಲಕ‌ ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಿಂದ ಶಿವಮೊಗ್ಗಕ್ಕೆ ಕರೆತಂದು ಈಗ ತೀರ್ಥಹಳ್ಳಿ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ನಕ್ಸಲ್ ಪ್ರಕರಣದ ಆರೋಪಿಯಾಗಿರುವ ಶ್ರೀಮತಿ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪದ ತಾರಳ್ಳಿಕೊಡಿಗೆ ಗ್ರಾಮದವರು.

ನಕ್ಸಲ್ ಹೋರಾಟದಲ್ಲಿ ಬಿ.ಜಿ. ಕೃಷ್ಣಮೂರ್ತಿ ಜೊತೆ ಗುರುತಿಸಿಕೊಂಡಿದ್ದ ಶೃಂಗೇರಿಯ ಶ್ರೀಮತಿಯನ್ನು 2023ರ ನ. 7 ರಂದು ಕೇರಳ ಪೊಲೀಸರು ಅರೆಸ್ಟ್ ಮಾಡಿದ್ದರು. ವಿಚಾರಣೆ ಬಳಿಕ ತ್ರಿಶೂರ್ ಜೈಲಿನಲ್ಲಿ ಶ್ರೀಮತಿಯವರನ್ನ ಇರಿಸಲಾಗಿತ್ತು.

ಕರಪತ್ರ ಹಂಚಿಕೆ, ಸರ್ಕಾರಿ ಆಸ್ತಿ ನಷ್ಟ, ವಿದ್ವಂಸಕ ಕೃತ್ಯಕ್ಕೆ ಕ್ಕೆ ಸಂಚು ರೂಪಿಸಿದ ಆರೋಪದಲ್ಲಿದ್ದ ಕೇರಳದಲ್ಲಿ ಬಂಧನಕ್ಕೊಳಗಾಗಿದ್ದ ಶ್ರೀಮತಿಗೆ ಎನ್.ಆರ್.ಪುರ ನ್ಯಾಯಾಲಯದಿಂದ ಇತ್ತೀಚೆಗೆ 14 ದಿನಗಳ ನ್ಯಾಯಾಂಗ ಬಂಧನ ಸಹ ವಿಧಿಸಲಾಗಿತ್ತು.

Leave A Reply

Your email address will not be published.

error: Content is protected !!