ನಾಗರಹಳ್ಳಿ ನಾಗೇಂದ್ರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಹರಿದುಬಂದ ಭಕ್ತರ ದಂಡು

0 45




ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ದ ಶ್ರೀ ನಾಗರಹಳ್ಳಿ ನಾಗೇಂದ್ರಸ್ವಾಮಿಯ ನಾಗರಪಂಚಮಿಯ ಜಾತ್ರಾ ಮಹೋತ್ಸವವು ಶ್ರದ್ದಾಭಕ್ತಿಯಿಂದ ಭಕ್ತಜನಸಾಗರದಲ್ಲಿ ಸಂಭ್ರಮದೊಂದಿಗೆ ಸುಸಂಪನ್ನಗೊಂಡಿತು.


ಮುಂಜಾನೆಯಿಂದಲೇ ನಾಗೇಂದ್ರಸ್ವಾಮಿಗೆ ಕ್ಷೀರಾಭಿಷೇಕ ಎಳನೀರು ಅಭಿಷೇಕ ಶ್ರೀಸ್ವಾಮಿಗೆ ವಿಶೇಷ ಅಲಂಕಾರ ಪೂಜೆಯೊಂದಿಗೆ ಮಹಾಮಂಗಳಾರತಿ ನೈವೇದ್ಯ ಜರುಗಿತು.


ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಸರತಿಸಾಲಿನಲ್ಲಿ ನಿಂತು ದೇವರ ದರ್ಶನಾಶೀರ್ವಾದ ಪಡೆದರು. ವರ್ಷದಲ್ಲಿ ಎರಡು ಭಾರಿ ಆಚರಿಸುವ ಈ ಜಾತ್ರಾ ಮಹೋತ್ಸವದಲ್ಲಿ ಮದುವೆಯಾಗದವರು ಸಂತಾನ ಭಾಗ್ಯ ಹಾಗೂ ಆರೋಗ್ಯ ಭಾಗ್ಯ ಕರುಣಿಸುವಂತೆ ಹೀಗೆ ಹತ್ತು ಹಲವು ಇಷ್ಟಾರ್ಥಗಳನ್ನು ಈಡೇರಿಸುವಂತೆ ಹರಕೆ ಹಣ್ಣು-ಕಾಯಿ ಇಟ್ಟು ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸುತ್ತಿರುವುದು ಇಲ್ಲಿನ ವಿಶೇಷ.


ಇನ್ನೂ ಕಳೆದ ಬೇಸಿಗೆಯಲ್ಲಿ ಮಾಡಿಕೊಂಡು ಹರಕೆ ಈಡೇರಿಸಿದ ಸ್ವಾಮಿಗೆ ಹಣ್ಣು ಕಾಯಿ ಹರಕೆ ಸಮರ್ಪಿಸಿ ಪೂಜೆ ಮಾಡಿಸುವುದು ಮತ್ತು ಮಳೆ-ಬೆಳೆ ಸಂವೃದ್ದಿಯಿಂದ ಭರಿಸುವಂತೆ ಶ್ರೀ ಸ್ವಾಮಿಯಲ್ಲಿ ದೇವಸ್ಥಾನ ಧರ್ಮದರ್ಶಿ ಸಮಿತಿಯವರು ಸಾಮೂಹಿಕವಾಗಿ ಪ್ರಾರ್ಥಿಸಿರುವುದು ಈ ಬಾರಿಯ ವಿಶೇಷವಾಗಿದೆ.


ನಂತರ ನೆರೆದ ಭಕ್ತ ಸಮೂಹಕ್ಕೆ ದೇವಸ್ಥಾನ ಸೇವಾಸಮಿತಿಯವರು ಸಾಮೂಹಿಕ ಅನ್ನ ಸಂತರ್ಪಣೆ ನೆರವೇರಿಸಿದರು.


ರಿಪ್ಪನ್‌ಪೇಟೆಯ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ನಾಗರಪಂಚಮಿ


ರಿಪ್ಪನ್‌ಪೇಟೆ: ಇಲ್ಲಿನ ತಿಲಕ್‌ನಗರದಲ್ಲಿರುವ ನಾಗದೇವರ ಮತ್ತು ರಕ್ತೇಶ್ವರಿ ಆಮ್ಮನವರ ದೇವಸ್ಥಾನದಲ್ಲಿ ಇಂದು ನಾಗರಪಂಚಮಿಯ ಹಬ್ಬವನ್ನು ಶ್ರದ್ದಾಭಕ್ತಿಯಿಂದ ನೆರವೇರಿಸಿದರು.


ಬೆಳಗ್ಗೆಯಿಂದಲೇ ನಾಗದೇವರಿಗೆ ಕ್ಷೀರಾಭಿಷೇಕ ಎಳನೀರು ಅಭಿಷೇಕ ಶ್ರೀಸ್ವಾಮಿಗೆ ವಿಶೇಷ ಅಲಂಕಾರ ಪೂಜೆಯೊಂದಿಗೆ ಮಹಾಮಂಗಳಾರತಿ ನೈವೇದ್ಯ ಜರುಗಿತು.


ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸರತಿಸಾಲಿನಲ್ಲಿ ನಿಂತು ದೇವರರಲ್ಲಿ ಇಷ್ಠಾರ್ಥಗಳನ್ನು ಪರಿಹರಿಸುವಂತೆ ಹರಕೆ ಹಣ್ಣು ಕಾಯಿ ಇಟ್ಟು ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸುತ್ತಿರುವುದು ಇಲ್ಲಿನ ವಿಶೇಷ.


ಧಾರ್ಮಿಕ ಕೈಂಕರ್ಯಗಳು ನಡೆದು ಮಹಾಮಂಗಳಾರತಿಯ ನಂತರ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು.

Leave A Reply

Your email address will not be published.

error: Content is protected !!