ರಿಪ್ಪನ್‌ಪೇಟೆಯಲ್ಲಿ ರಾಮೋತ್ಸವ ಸಂಭ್ರಮಾಚರಣೆ

0 1,080

ರಿಪ್ಪನ್‌ಪೇಟೆ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದಲ್ಲಿ ಶ್ರೀಬಾಲರಾಮ ದೇವರ ಪ್ರಾಣ ಪ್ರತಿಷ್ಟಾಪನಾ ಮಹೋತ್ಸವದ ಅಂಗವಾಗಿ ರಿಪ್ಪನ್‌ಪೇಟೆಯ ಹಿಂದೂ ಬಾಂಧವರು ಮತ್ತು ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಸಮಿತಿಯವರು ಹಾಗೂ ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮತ್ತು ಜಿ.ಎಸ್.ಬಿ.ಸಮಾಜದವರು ಶ್ರೀರಾಮತಾರಕ ಹವನ ಮತ್ತು ಶ್ರೀರಾಮಮಂತ್ರ ಜಪ ಕಾರ್ಯಕ್ರಮದೊಂದಿಗೆ ರಾಮೋತ್ಸವದ ಸಂಭ್ರಮಾಚರಣೆ ನಡೆಸಿದರು.

ಜಿ.ಎಸ್.ಬಿ.ಸಮಾಜದವರು ಹೊಸನಗರ ರಸ್ತೆಯಲ್ಲಿನ ಜಿ.ಎಸ್.ಬಿ ಕಲ್ಯಾಣ ಮಂದಿರದಿಂದ ಮರ್ಯಾದ ಪುರುಷೋತ್ತಮ ಶ್ರೀರಾಮ ವಿಗ್ರಹವನ್ನು ಹೊತ್ತು ಮೆರವಣಿಗೆಯ ಮೂಲಕ ವಿನಾಯಕ ವೃತ್ತದ ಮಾರ್ಗವಾಗಿ ಶ್ರೀವರಸಿದ್ದಿವಿನಾಯಕ ಸ್ವಾಮಿ ಮತ್ತು ಜಗನ್ಮಾತೆ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಸಮಾಜದ ನೂರಾರು ಜನರು ರಾಮನಾಮ ಸ್ಮರಣೆಯೊಂದಿಗೆ ಭವ್ಯಮೆರವಣಿಗೆ ನಡೆಸುವುದರೊಂದಿಗೆ ರಾಮೋತ್ಸವವನ್ನು ಸಂಭ್ರಮಿಸಿ ಭಕ್ತ ಸಮೂಹದಿಂದ ರಾಮಭಕ್ತಿ ಸುಧೆ ಮೊಳಗಿಸಿದರು.

ದೇವಸ್ಥಾನದಲ್ಲಿ ಶ್ರೀವರಸಿದ್ದಿವಿನಾಯಕ ಸ್ವಾಮಿ ಮತ್ತು ಜಗನ್ಮಾತೆ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆಯೊಂದಿಗೆ `ಶ್ರೀರಾಮತಾರಕ’ಹವನ ಪೂಜೆಯೊಂದಿಗೆ ಮಹಿಳೆಯರಿಂದ ಶ್ರೀರಾಮ ಭಜನೆ ಮತ್ತು ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆಯೊಂದಿಗೆ ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾದವರು ಸಾಮೂಹಿಕ ಅನ್ನಸಂತರ್ಪಣೆ ನಡೆಸಿದರೆ ತುಮಕೂರಿನ ನಡೆದಾಡುವ ದೇವರು ತ್ರಿವಿಧ ದಾಸೋಹಿ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳ ಭಕ್ತವೃಂದ ರಿಪ್ಪನ್‌ಪೇಟೆ ಇವರಿಂದ ಪಾನಕ ಸೇವೆ ಮತ್ತು ಹಿಂದೂ ಜಾಗರಣಾ ವೇದಿಕೆ ಮತ್ತು ವಿಶ್ವಹಿಂದೂ ಪರಿಷತ್ ಇವರಿಂದ ಪಾನಕ, ಕೋಸಂಬರಿ, ರಾಜಸ್ಥಾನಿ ಬಳಗದವರಿಂದ ಕೇಸರಿ ಶ್ರೀರಾಮ ಶಾಲು ವಿತರಣೆ ಜರುಗಿತು.

ಪಾನಕ ಮತ್ತು ಕೋಸಂಬರಿಯ ವಿರಣೆಗೆ ಪಿಎಸ್‌ಐ ಎಸ್.ಪ್ರವೀಣ್‌ಕುಮಾರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಎಸ್.ಬಿ.ಸಮಾಜದ ಅಧ್ಯಕ್ಷ ಗಣೇಶ್ ಎನ್.ಕಾಮತ್, ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಅಧ್ಯಕ್ಷ ಈಶ್ವರಶೆಟ್ಟಿ, ದೇವಸ್ಥಾನ ಸಭಾಭವನ ಕಟ್ಟಡ ಸಮಿತಿ ಅಧ್ಯಕ್ಷ ಎನ್.ಸತೀಶ್, ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಸಮಿತಿಯ ಅಧ್ಯಕ್ಷ ನಾಗರಾಜ ಪವಾರ್, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಆರ್.ಟಿ.ಗೋಪಾಲ, ತುಳೋಜಿರಾವ್, ಸುಧೀಂದ್ರ ಪೂಜಾರಿ, ವೈ.ಜೆ.ಕೃಷ್ಣ, ಆರ್.ರಾಘುವೇಂದ್ರ, ವಿಶ್ವಹಿಂದು ಪರಿಷತ್‌ನ ರಂಜಿತ್, ಕಾರ್ತಿಕ ಎನ್.ನಾಯಕ್, ಎಂ.ಸುರೇಶ್‌ಸಿಂಗ್, ತಾ.ಪಂ.ಮಾಜಿ ಅಧ್ಯಕ್ಷೆ ನಾಗರತ್ನ ದೇವರಾಜ್, ಎನ್.ಮಂಜುನಾಥ ಕಾಮತ್, ಹರೀಶ್‌ಪ್ರಭು, ಕೆ.ವಿ.ಲಿಂಗಪ್ಪ, ಮುರುಳಿ ಕೆರೆಹಳ್ಳಿ ಲಕ್ಷ್ಮಣ ಬಳ್ಳಾರಿ, ಸುಧೀರ್, ರೇಖಾರವಿ, ಶೀಲಾ, ಕುಷನ್ ದೇವರಾಜ್, ಈಶ್ವರ, ಸುಹಾಸ್, ಹೆಚ್.ಎನ್.ಚೋಳರಾಜ್, ರವಿ ಶಬರೀಶನಗರ, ರಮೇಶ್ ಫ್ಯಾನ್ಸಿ, ಕೆ.ಬಿ.ಹೋವಪ್ಪ, ಲಕ್ಷ್ಮಿ ಶ್ರೀನಿವಾಸ್ ಆಚಾರಿ, ಶ್ರೀನಿವಾಸ ಆಚಾರ್, ಇನ್ನಿತರ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವಿನಾಯಕ ದೇವಸ್ಥಾನದ ಅವರಣದಲ್ಲಿ ಅಯೋಧ್ಯೆಯಲ್ಲಿ ನಡೆದ ಶ್ರೀರಾಮಲಲ್ಲಾ ಪ್ರತಿಷ್ಟಾಪನಾ ಕಾರ್ಯಕ್ರಮದ ನೇರಪ್ರಸಾರದ ಪ್ರದರ್ಶನ ಜರುಗಿತು. ನಂತರ ಜೈ ಶ್ರೀರಾಮ ಜಯಜಯರಾಮ ಜಯ ಘೋಷಣೆಯೊಂದಿಗೆ ದೇವಸ್ಥಾನದಿಂದ ಮೆರವಣಿಗೆ ನಡೆಸಿದರು.

Leave A Reply

Your email address will not be published.

error: Content is protected !!