ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಬಿ.ಜಿ. ಚಂದ್ರಮೌಳಿ ನೇಮಕ

0 894

ಹೊಸನಗರ : ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಬಿ.ಜಿ. ಚಂದ್ರಮೌಳಿ ಅವರನ್ನು ನೇಮಕ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಯಲ್ಲಿ ಬರುವ ಸಾಗರ ವಿಧಾನಸಭೆ ಕ್ಷೇತ್ರದ ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಜಿ.ಬಿ. ಚಂದ್ರಮೌಳಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.

ಜಿ.ಬಿ. ಚಂದ್ರಮೌಳಿ ಅವರು ತಕ್ಷಣ ಹೊಸನಗರ ಬ್ಲಾಕ್ ಕಾಂಗ್ರೆಸ್‌ನ ಅಧಿಕಾರ ವಹಿಸಿಕೊಂಡು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಮತ್ತು ಸ್ಥಳೀಯ ನಾಯಕರ ಸಹಯೋಗದಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಕಾರ್ಯೋನ್ಮುಖರಾಗಬೇಕೆಂದು ಸೂಚಿಸಲಾಗಿದೆ. ಈ ದಿಸೆಯಲ್ಲಿ ತಮಗೆ ಹೆಚ್ಚಿನ ಯಶಸ್ಸು ಸಿಗಲೆಂದು ಹಾರೈಸುತ್ತೇನೆ ಎಂದು ನೇಮಕಾತಿ ಆದೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಚಂದ್ರಮೌಳಿ ಗೌಡರವರು ಕೋಡೂರು ಗ್ರಾಮ ಪಂಚಾಯತಿ ಸದಸ್ಯರಾಗಿ ಹಾಗೂ ಹೊಸನಗರ ತಾಲ್ಲೂಕು ಪಂಚಾಯತಿ ಸದಸ್ಯರಾಗಿ ಸಾಕಷ್ಟು ಜನಪರ ಕೆಲಸವನ್ನು ಮಾಡಿರುವುದರ ಜೊತೆಗೆ ಬಡವ ಹಾಗೂ ಮಧ್ಯಮ ವರ್ಗದವರಿಗೆ ಸಾಕಷ್ಟು ಕೆಲಸವನ್ನು ಮಾಡಿದವರಾಗಿದ್ದು ಬಡವರೆಂದರೆ ಸಾಕಷ್ಟು ಸಹಾಯ ಹಸ್ತ ನೀಡಿದವರಾಗಿದ್ದಾರೆ.


ಪತ್ನಿ ಜ್ಯೋತಿ ಚಂದ್ರಮೌಳಿ ಜಿಲ್ಲಾ ಪಂಚಾಯತಿ ಸದಸ್ಯೆಯಾಗಿ ಕೆಲಸ ಮಾಡಿರುವ ಅನುಭವ ಹೊಂದಿದವರಾಗಿದ್ದೂ ಇಬ್ಬರು ಬಡವರಿಗೆ ಸಹಾಯ ಹಸ್ತ ನೀಡುವುದರ ಜೊತೆಗೆ ಈಗ ಬ್ಲಾಕ್ ಸಮಿತಿಯ ಅಧ್ಯಕ್ಷರಾಗಿರುವುದರಿಂದ ಹೊಸನಗರ ತಾಲ್ಲೂಕಿನ ಜನರಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡಲಿದ್ದಾರೆ.


ಒಂದಾಗುವುದೇ ಕಾಂಗ್ರೆಸ್ ಕಾರ್ಯಕರ್ತರು?:
ಹೊಸನಗರ ತಾಲ್ಲೂಕಿನಲ್ಲಿ ಎರಡು ಬಣಗಳಾಗಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿದ್ದೂ ಒಂದು ಬಣ ಮಧು ಬಂಗಾರಪ್ಪನವರ ಬೆಂಬಲದೊಂದಿಗೆ ಇನ್ನೊಂದು ಬಣ ಶಾಸಕ ಬೇಳೂರು ಗೋಪಾಲಕೃಷ್ಣರವರ ಬಣಗಳಾಗಿ ಒಡೆದು ಹೋಗಿದ್ದು ಇನ್ನಾದರೂ ಬ್ಲಾಕ್ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷ ಚಂದ್ರಮೌಳಿಗೌಡರು ಎರಡು ಬಣಗಳನ್ನು ಒಂದು ಮಾಡುವರೇ ಕಾದು ನೋಡಬೇಕಾಗಿದೆ.


ಲೋಕಸಭಾ ಚುನಾವಣೆಯಲ್ಲಿ ಈಡಿಗ, ಬಿಲ್ಲವರ ಮತಗಳು ಗೀತಾ ಶಿವರಾಜ್ ಕುಮಾರ್‌ರವರಿಗೆ ಖಚಿತವಾಗಿ ಬರುತ್ತದೆ. ಲಿಂಗಾಯತ ಮತ ಪಡೆಯುವ ಉದ್ದೇಶದಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಲಿಂಗಾಯತ ಸಮುದಾಯದ ಚಂದ್ರಮೌಳಿ ಗೌಡರವರನ್ನು ಚುನಾವಣೆ ಸಂದರ್ಭದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದು, ಇವರ ಆಯ್ಕೆಯಿಂದ ಲಿಂಗಾಯತ ಅಲ್ಪ-ಸ್ವಲ್ಪ ಮತ ಪಡೆಯುವುದರಲ್ಲಿ ಚಂದ್ರಮೌಳಿ ಗೌಡ ಯಶಸ್ವಿಯಾಗುತ್ತಾರೆ ಎಂದು ಹೇಳಲಾಗಿದೆ.

Leave A Reply

Your email address will not be published.

error: Content is protected !!