ಅಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದ ತ್ಯಾಜ್ಯ ವಿಲೇವಾರಿ ಘಟಕ ಈಗ ರೋಗಗ್ರಸ್ತ !!

0 29

ರಿಪ್ಪನ್‌ಪೇಟೆ: ಸ್ವಚ್ಚ ಗ್ರಾಮ ಯೋಜನೆಯಡಿ ಕೇಂದ್ರ ಸರ್ಕಾರ ಕೊಡಮಾಡುವ ನಿರ್ಮಲ ಗ್ರಾಮ ಪುರಸ್ಕಾರ ಪಡೆದ ಹೊಸನಗರ ತಾಲ್ಲೂಕಿನಲ್ಲಿ ಅತಿ ದೊಡ್ಡ ಗ್ರಾಮ ಪಂಚಾಯ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೂಲಕ ಅಂದಿನ ಗ್ರಾಮೀಣಾಭಿವೃದ್ದಿ ಪಂಚಾಯ್ತಿ ಸಚಿವರಾದ ಕೃಷ್ಣಬೈರೇಗೌಡರು ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ತ್ಯಾಜ್ಯ ವಿಲೆವಾರಿ ಘಟಕಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ ಘಟಕ ಇಂದು ನಿರ್ವಹಣೆಯಿಲ್ಲದೇ ರೋಗಗ್ರಸ್ತ ಘಟಕವಾಗಿ ಸುತ್ತಮುತ್ತಲಿನ ನಾಗರೀಕರಿಗೆ ಬರಬಾರದ ರೋಗ ಹರಡುವ ಕೇಂದ್ರದಂತಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದ ಕೃಷ್ಣಬೈರೇಗೌಡರು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಅಂದಿನ ಜಿ.ಪಂ.ಸಿ.ಇ.ಓ.ಸೈಥಿಲ್ ಮತ್ತು ವೈಶಾಲಿ ಇವರು ಬೆಳಂ ಬೆಳಗ್ಗೆ ದಿಢೀರ್ ಭೇಟಿ ನೀಡಿ ತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ದೇಶವ್ಯಾಪಿ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಂತಹ ಇಲ್ಲಿನ ತೀರ್ಥಹಳ್ಳಿ ರಸ್ತೆಯ ಮುಖ್ಯರಸ್ತೆಯಿಂದ ಹೊಸನಗರ ಸಂಪರ್ಕದ ಲಿಂಕ್ ರಸ್ತೆಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್ ಸಹ ತೆರೆದುಕೊಂಡಿದ್ದು ಇದರಿಂದ ಉತ್ಪತ್ತಿಯಾಗುವ ಹುಳ ಹುಪ್ಪಟೆಗಳು ಟ್ಯಾಂಕ್ ನೀರಿಗೆ ಬಿದ್ದು ಇದೇ ನೀರಯನ್ನು ಕುಡಿಯುವಂತಾಗಿದೆ. ಈ ಘಟಕ ಇಂದು ನಿರ್ವಹಣೆಯಿಲ್ಲದೇ ರೋಗಗ್ರಸ್ತವಾಗಿ ಸುತ್ತಮುತ್ತಲಿನ ಗಾಂಧಿನಗರ ಮತ್ತು ಎಂ.ಜಿ.ಬಡಾವಣೆ ನೆಹರು ಬಡಾವಣೆಯ ಪ್ರಗತಿ ನಗರ ಗವಟೂರು, ಬೆಟ್ಟನಕೆರೆ, ಬೆಳೆಕೋಡು, ಕುಕ್ಕಳಲೇ, ಹಳಿಯೂರು ಇನ್ನಿತರ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳು ಮತ್ತು ನಿವಾಸಿಗಳಲ್ಲಿ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದು ಈ ಘಟಕ ಕೊಳೆತ ಕಸದ ರಾಶಿಯಿಂದಾಗಿ ಅರೋಗ್ಯವಂತ ಮನುಷ್ಯ ಸಹ ಅನಾರೋಗ್ಯ ಪೀಡಿತರನ್ನಾಗಿಸುವ ಕೇಂದ್ರವಾಗಿ ಪರಿವರ್ತನೆಗೊಂಡಿದೆ.

ಮನೆ-ಮನೆಗೆ ತೆರಳಿ ಹಸಿ ಒಣ ಕಸ ಸಂಗ್ರಹಿಸಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೇರ್ಪಡಿಸುವ ಈ ಘಟಕದಲ್ಲಿ ಈ ಹಿಂದೆ ಊರಿನಲ್ಲೆಡೆ ಸಂಗ್ರಹಿಸಿದ ಕಸವನ್ನು ಎಲ್ಲೆಂದರಲ್ಲಿ ಬಿಸಾಕಿದ್ದು ಇದರಿಂದ ಸೊಳ್ಳೆಗಳ ಉತ್ಪಾದನೆಯೊಂದಿಗೆ ದುರ್ನಾತ ಬೀರುತ್ತಿದ್ದು ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಮತ್ತು ಬಡಾವಣೆಯ ನಿವಾಸಿಗಳು ನಿತ್ಯ ಹಿಡಿ ಶಾಪ ಹಾಕುತ್ತಾ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ಈ ರೋಗಗ್ರಸ್ಥ ತ್ಯಾಜ್ಯವಿಲೆವಾರಿ ಘಟಕಕ್ಕೆ ಸಮೀಪದಲ್ಲಿ ಮೇರಿಮಾತಾ ಪ್ರೌಢಶಾಲೆ ಮತ್ತು ಗುಡ್‌ಶಪರ್ಡ್ ಚರ್ಚ್ ಶಬರೀಶನಗರ, ಗಾಂಧಿನಗರ ಬಡಾವಣೆ ಹೊಂದಿಕೊಂಡಂತೆ ಈ ಬಡಾವಣೆಯ ಸಾರ್ವಜನಿಕರು ಗ್ರಾಮಾಡಳಿತಕ್ಕೆ ಹಾಗೂ ನೂತನ ಶಾಸಕ ಗೋಪಾಲಕೃಷ್ಣ ಮತ್ತು ಜಿಲ್ಲಾ ಪಂಚಾಯ್ತಿ ಸಿಇಓ ಡಿಹೆಚ್‌ಓ ಇತ್ತ ಗಮಹರಿಸುವುದರೊಂದಿಗೆ ರೋಗಗ್ರಸ್ಥ ತ್ಯಾಜ್ಯವಿಲೆವಾರಿ ಘಟಕಕ್ಕೆ ಮುಕ್ತಿ ಕಾಣಿಸುವರೇ ಕಾದು ನೋಡಬೇಕಾಗಿದೆ.

Leave A Reply

Your email address will not be published.

error: Content is protected !!