ರಿಪ್ಪನ್‌ಪೇಟೆಯಲ್ಲಿ ಕ್ರೈಸ್ತ ಬಾಂಧವರಿಂದ ಸಡಗರ ಸಂಭ್ರಮದಿಂದ ಕ್ರಿಸ್‌ಮಸ್ ಆಚರಣೆ

0 283

ರಿಪ್ಪನ್‌ಪೇಟೆ : ಬೈಬಲ್‌ನಲ್ಲಿ ಉಲ್ಲೇಖಿಸಿರುವಂತೆ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಬೋಧನೆಗಳಲ್ಲಿ ಒಂದಾಗಿದೆ. ಎಂದು ಪಟ್ಟಣದ ಗುಡ್ ಶಫರ್ಡ್ ಚರ್ಚ್ ನ ಧರ್ಮ ಗುರು ರೆ. ಫಾ. ಬಿನೋಯ್ ಹೇಳಿದರು.

ಉದಾಹರಣೆಗೆ ಬೈಬಲ್ ನಯೋಹಾನ್ 13:34-35 ನಲ್ಲಿ ಹೇಳಿದಂತೆ: “ನಾನು ನಿಮಗೆ ಹೊಸ ಆಜ್ಞೆಯನ್ನು ನೀಡುತ್ತೇನೆ. ಒಬ್ಬರನ್ನೊಬ್ಬರು ಪ್ರೀತಿಸಿ. ನಾನು ನಿಮ್ಮನ್ನು ಪ್ರೀತಿಸಿದಂತೆ, ನೀವು ಮಾಡಬೇಕು. ಒಬ್ಬರನ್ನೊಬ್ಬರು ಪ್ರೀತಿಸಿ, ನೀವು ಒಬ್ಬರನ್ನೊಬ್ಬರು ಪ್ರೀತಿಸಿದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿಯುವರು” ಎಂದು.

ಮ್ಯಾಥ್ಯೂ 5-7 ರಲ್ಲಿ ಮಾತನಾಡಿದ ಧರ್ಮೋಪದೇಶವು ನಮ್ರತೆ, ಕರುಣೆ ಮತ್ತು ಸದಾಚಾರದ ಕುರಿತು ಪ್ರಮುಖ ಬೋಧನೆಗಳನ್ನು ಒಳಗೊಂಡಿದೆ. ಒಟ್ಟಾರೆಯಾಗಿ ಸಂದೇಶವನ್ನು ಸಾಮಾನ್ಯವಾಗಿ ಗೋಲ್ಡನ್ ರೂಲ್ ಎಂದು ಸಂಕ್ಷೇಪಿಸಲಾಗಿದೆ.

“ಇತರರು ನಿಮಗೆ ಹೇಗೆ ಮಾಡಬೇಕೆಂದು ನೀವು ಬಯಸುತ್ತೀರೋ ಅದನ್ನು ಮಾಡಿ” (ಮ್ಯಾಥ್ಯೂ 7:12).

ಕ್ರಿಸ್ ಮಸ್ ದಿನದ ಶುಭಾಶಯಗಳು
ಶಾಂತಿ ಮತ್ತು ನೆಮ್ಮದಿಯ ಮೂಲಕ ಪ್ರತಿಯೊಬ್ಬರು ಬದುಕು ಕಟ್ಟಿಕೊಳ್ಳೋಣ : ರೆ. ಫಾ. ಬಿನೋಯ್.
ರಿಪ್ಪನ್ ಪೇಟೆ : ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಒತ್ತಡದ ಜೀವನವನ್ನು ಸಾಗಿಸುತ್ತಿರುವ ಪ್ರತಿಯೊಬ್ಬರಿಗೂ ಶಾಂತಿ ಮತ್ತು ನೆಮ್ಮದಿಯ ಬದುಕು ಅತ್ಯವಶ್ಯಕವಾಗಿದೆ. ಮಾನವ ಜಗತ್ತಿನಲ್ಲಿ ಶಾಂತಿ ಮತ್ತು ನೆಮ್ಮದಿಯ ಮೂಲಕ ಬದುಕು ಕಟ್ಟಿಕೊಳ್ಳೋಣ ಎಂದು ರಿಪ್ಪನ್‌ಪೇಟೆ ಗುಡ್ ಶಫರ್ಡ್ ಚರ್ಚಿನ ಧರ್ಮಗುರು ರೆ. ಫಾ. ಬಿನೋಯ್ ಹೇಳಿದರು.

ಪಟ್ಟಣದ ಗುಡ್ ಶಫರ್ಡ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ತಡರಾತ್ರಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು ಬೈಬಲ್ ನ ಯೋಹಾನ್ ಹೇಳಿದಂತೆ: “ನಾನು ನಿಮಗೆ ಹೊಸ ಆಜ್ಞೆಯನ್ನು ನೀಡುತ್ತೇನೆ: ಒಬ್ಬರನ್ನೊಬ್ಬರು ಪ್ರೀತಿಸಿ. ನಾನು ನಿಮ್ಮನ್ನು ಪ್ರೀತಿಸಿದಂತೆ, ನೀವು ಮಾಡಬೇಕು. ಒಬ್ಬರನ್ನೊಬ್ಬರು ಪ್ರೀತಿಸಿ, ನೀವು ಒಬ್ಬರನ್ನೊಬ್ಬರು ಪ್ರೀತಿಸಿದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿಯುವರು..” ಧರ್ಮೋಪದೇಶವು ನಮ್ರತೆ, ಕರುಣೆ ಮತ್ತು ಸದಾಚಾರದ ಕುರಿತು ಪ್ರಮುಖ ಬೋಧನೆಗಳನ್ನು ಒಳಗೊಂಡಿದೆ.

“ಇತರರು ನಿಮಗೆ ಹೇಗೆ ಮಾಡಬೇಕೆಂದು ನೀವು ಬಯಸುತ್ತೀರೋ ಅದನ್ನು ಮಾಡಿ”. ಕ್ರಿಸ್‌ಮಸ್ ಹಬ್ಬವು ಕ್ರೈಸ್ತ ಬಾಂಧವರ ಪವಿತ್ರ ಹಬ್ಬವಾಗಿದೆ , ಈ ಹಬ್ಬವು ಜಗತ್ತು ಕಂಡ ದಾರ್ಶನಿಕ ಪ್ರವಾದಿ ಶಾಂತಿ ನೆಮ್ಮದಿಯಿಂದ ಸೇವೆಯ ಮೂಲಕ ಬದುಕು ಕಟ್ಟಿಕೊಳ್ಳಬಹುದು ಎಂದು ಸಾರಿದ ಯೇಸು ಕ್ರಿಸ್ತನ ಹುಟ್ಟುಹಬ್ಬ ವಾಗಿದೆ. ಪ್ರತಿಯೊಬ್ಬ ಕ್ರೈಸ್ತ ಬಾಂಧವರು ಜಾತಿ ಮತ ಪಂಥಗಳ ಭೇದವನ್ನು ಮರೆತು ಸದ್ಭಾವನೆಯಿಂದ ಎಲ್ಲರೂ ಬೆರೆತು ಉತ್ತಮ ಪ್ರಜೆಗಳಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಪ್ರೀತಿ ವಿಶ್ವಾಸ ಹಾಗೂ ನಂಬಿಕೆಯ ಮೂಲಕ ಗೌರವವನ್ನು ನೀಡುವುದು ಪ್ರತಿಯೊಬ್ಬ ಕ್ರೈಸ್ತರ ಕರ್ತವ್ಯವಾಗಿರಬೇಕು ಎಂದರು.

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜ್ಯದ ಹಾಗು ಜಿಲ್ಲೆಯ ವಿವಿಧಡೆಗಳಿಂದ ಆಗಮಿಸಿದ ಕ್ರೈಸ್ತ ಬಾಂಧವರ ಜೊತೆಯಲ್ಲಿ ಹಿಂದೂ ಹಾಗೂ ಮುಸ್ಲಿಂ ಬಂಧುಗಳು ಸಹ ಭಾಗಿಯಾಗಿ ಕ್ರಿಸ್‌ಮಸ್ ಕೇಕ್ ಅನ್ನು ಹಂಚುವುದರ ಮೂಲಕ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು ಕೋರಿದರು.

ಗುಡ್ ಶಫರ್ಡ್ ಚರ್ಚಿನ ವತಿಯಿಂದ ಕ್ರಿಸ್‌ಮಸ್ ಹಬ್ಬದ ಆಚರಣೆಯ ಸಂಭ್ರಮದಲ್ಲಿ ಭಾಗವಹಿಸಿದ ಎಲ್ಲಾ ಭಕ್ತಾದಿಗಳಿಗೆ ಕೇಕ್ ಹಂಚುವುದರ ಮೂಲಕ ಶುಭ ಕೋರಿದರು.

Leave A Reply

Your email address will not be published.

error: Content is protected !!