ಬಸ್‌ನಲ್ಲೇ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ಲೇಡಿ ಕಂಡಕ್ಟರ್

0 70

ಚಿಕ್ಕಮಗಳೂರು : ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೆರಿಗೆ ನೋವು ಕಾಣಿಸಿದ್ದರಿಂದ ಮಹಿಳಾ ಕಂಡಕ್ಟರ್ ಬಸ್‌ನಲ್ಲಿಯೇ ಹೆರಿಗೆ ಮಾಡಿಸಿರುವಂತ ಅಪರೂಪದ ಘಟನೆ ನಡೆದಿದೆ.

ಚಿಕ್ಕಮಗಳೂರು ಡಿಪೋದ KA-18, F- 0865 ಬಸ್ ಬೆಂಗಳೂರು- ಚಿಕ್ಕಮಗಳೂರು ಮಾರ್ಗ ಮಧ್ಯೆ ಚಲಿಸುತ್ತಿತ್ತು. ಈ ವೇಳೆ ಉದಯಪುರ ಸಮೀಪದ ಕೃಷಿ ಕಾಲೇಜು ಹತ್ತಿರ ಈ ಸಂಗತಿ ನಡೆದಿದೆ.

ಬಿಹಾರ ಮೂಲದ ಗರ್ಭಿಣಿಯು ಬೆಂಗಳೂರಿನಿಂದ ಬೇಲೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಹತ್ತಿರದಲ್ಲಿ ಯಾವುದೇ ಆಸ್ಪತ್ರೆ ಇಲ್ಲದ ಕಾರಣ ಬಸ್‌ನಲ್ಲಿದ್ದ ಕಂಡಕ್ಟರ್ ವಸಂತಮ್ಮ ಅವರು ತಕ್ಷಣ ಬಸ್ ನಿಲ್ಲಿಸಿ 45 ಪ್ರಯಾಣಿಕರೆಲ್ಲರನ್ನು ಕೆಳಗೆ ಇಳಿಸಿದ್ದಾರೆ. ಬಳಿಕ ವಸಂತಮ್ಮ ಹಾಗೂ ಇನ್ನೊಬ್ಬ ಬೆಂಗಳೂರಿನ ಮಹಿಳೆ ಸೇರಿ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದಾರೆ. ಹೆರಿಗೆ ನಂತರ ಬಾಣಂತಿ, ಹೆಣ್ಣು ಮಗು ಆರೋಗ್ಯವಾಗಿದೆ ಎಂದು ಹೇಳಲಾಗಿದೆ.

ಬಾಣಂತಿಯು ಆರ್ಥಿಕವಾಗಿ ದುರ್ಬಲಳಾಗಿದ್ದ ಕಾರಣ ಕಂಡಕ್ಟರ್​ ವಸಂತಮ್ಮ ಇತರೆ ಖರ್ಚಿಗಾಗಿ ಪ್ರಯಾಣಿಕರಿಂದ 1,500 ರೂಪಾಯಿ ಸಂಗ್ರಹಿಸಿ ನೀಡಿದ್ದಾರೆ. ನಂತರ ಮಹಿಳೆಯನ್ನು ಆಂಬುಲೆನ್ಸ್ ಮೂಲಕ ನಗರದ ಶಾಂತಿಗ್ರಾಮ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave A Reply

Your email address will not be published.

error: Content is protected !!