2550ನೇ ಶ್ರೀ ಮಹಾವೀರ ತೀರ್ಥಂಕರರ ನಿರ್ವಾಣೋತ್ಸವ |
ಸರ್ವ ಜೀವಿಗಳ ಸಂರಕ್ಷಣೆಗೆ ಶ್ರೀ ಮಹಾವೀರ ವಾಣಿ ; ಹೊಂಬುಜ ಶ್ರೀಗಳು

0 403

ರಿಪ್ಪನ್‌ಪೇಟೆ : ಜಗತ್ತಿನ ಸರ್ವ ಜೀವಿಗಳ ಸಂರಕ್ಷಣೆ, ಪೋಷಣೆಗಾಗಿ ಇಪ್ಪನಾಲ್ಕನೇಯ ತೀರ್ಥಂಕರರಾದ ಶ್ರೀ ವರ್ಧಮಾನ ಮಹಾವೀರ ಸ್ವಾಮಿ 2550 ವರ್ಷಗಳ ಹಿಂದೆ ವಿಶ್ವ ಭ್ರಾತೃತ್ವ, ಅಹಿಂಸಾವಾದ ಪ್ರಚುರಪಡಿಸಿದರು ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದಲ್ಲಿ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಶ್ರೀ ಮಹಾವೀರ ವಾಣಿಯನ್ನು ಇಂದು ಪ್ರತಿಯೋರ್ವರೂ ಅನೂಚಾನ ಆಚರಿಸುವಂತಾಗಬೇಕು ಎಂದರು.

ಪ್ರತಿಯೊಂದು ಮನೆಯಲ್ಲಿ ವಾತ್ಸಲ್ಯಮಯ ಸಾಮಾರಸ್ಯವು ರಾಜ್ಯ-ದೇಶ-ವಿಶ್ವದೆಲ್ಲೆಡೆ ಆರೋಗ್ಯದಾಯಕ ಶಾಂತಿಯ ಪರಿಸರ ನಿರ್ಮಾಣವಾಗುವುದು ನಿಶ್ಚಿತ ಎಂದ ಶ್ರೀಗಳವರು ಶ್ರೀ ಮಹಾವೀರ ತೀರ್ಥಂಕರರ ಉಪದೇಶಗಳು ಜೈನಧರ್ಮಕ್ಕೆ ಸೀಮಿತವಾಗಿರದೇ ವಿಶ್ವದ ಸರ್ವ ಧರ್ಮೀಯರಿಗೂ ಪ್ರೇರಣೆ ನೀಡುವಂತಿದೆ ಎಂಬ ಅನೇಕಾಂತವಾದ, ಸತ್ಯ, ಆಸ್ತೇಯ, ಅಪರಿಗ್ರಹ ಧರ್ಮತತ್ವಗಳ ಕುರಿತು ವಿಶ್ಲೇಷಿಸಿದರು.


ಶ್ರೀ ಮಹಾವೀರ ಸ್ವಾಮಿ ಜಿನಬಿಂಬವನ್ನು ಅಷ್ಟವಿಧಾರ್ಚನೆ ಮೂಲಕ ಪ್ರಾತಃಕಾಲ ಶ್ರೀಕ್ಷೇತ್ರದ ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನಾಲಯದಲ್ಲಿ ಪೂಜಿಸಲಾಯಿತು. ಶ್ರಾವಕ-ಶ್ರಾವಿಕೆಯರು ಅಘ್ಯ ಅರ್ಪಿಸಿ, ಧನ್ಯತಾಭಾವ ತಳೆದರು. ಜಗನ್ಮಾತೆ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕ್ಷೇತ್ರಪಾಲ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜಾ ವಿಧಿಗಳು ನೆರವೇರಿಸಲಾಯಿತು.


ದೀಪಾವಳಿಯ ಅಮಾವಾಸ್ಯೆಯಂದು ಪ್ರಾತಃಕಾಲ ಶ್ರೀ ಮಹಾವೀರ ತೀರ್ಥಂಕರರ ನಿರ್ವಾಣ (ಮೋಕ್ಷ ಕಲ್ಯಾಣ) ಆಗಿರುವ ದ್ಯೋತಕವಾಗಿ ದೀಪ ಪ್ರಜ್ವಲನ ಮಾಡಿ ಅಂಧಕಾರವನ್ನು ದೂರಮಾಡಿ ಜ್ಞಾನದ ಬೆಳಕನ್ನು ಜಗತ್ತಿಗೆ ನೀಡಿದ್ದ ಸಂಕೇತವಾಗಿ ಶ್ರೀಕ್ಷೇತ್ರದಲ್ಲಿ ಹೊಂಬುಜ ಜೈನ ಮಠದ ಪೀಠಾಧೀಪತಿಗಳಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಭಕ್ತರನ್ನು ಹರಸಿ, ಉತ್ತಮ ಸಂಸ್ಕೃತಿ, ಸಂಸ್ಕಾರಗಳು ಅನಘ್ಯ ರತ್ನಗಳಾಗಿ ಪ್ರತಿಯೋರ್ವರಿಗೂ ಕ್ಷೇಮವುಂಟಾಗಲೆಂದು ಹರಸಿದರು.

Leave A Reply

Your email address will not be published.

error: Content is protected !!