ಜೀವ ವೈವಿಧ್ಯ ಕಾಯಿದೆಯ ಅನುಷ್ಠಾನಕ್ಕೆ ಶ್ರಮಿಸಿ ; ಅನಂತ ಹೆಗಡೆ ಆಶೀಸರ

0 207

ಹೊಸನಗರ : ಗ್ರಾಮ ಮಟ್ಟದಲ್ಲಿ ರಚನೆ ಆಗಿರುವ ಜೀವ ವೈವಿಧ್ಯ ಸಮಿತಿಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜೀವ ವೈವಿಧ್ಯ ಮಂಡಳಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದ ಅವರು, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳುವಾಗ ಅಧಿಕಾರಿವರ್ಗ ಹಾಗೂ ಗ್ರಾಮಸ್ಥರು ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಜೀವವೈವಿಧ್ಯ ಕಾಯಿದೆ 2002ರಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಅಧ್ಯಯನ ಮಾಡಬೇಕು. ನದಿ, ಕೆರೆಯಂತಹ ಜಲಮೂಲಗಳ ಸಂರಕ್ಷಣೆಗೆ ಆಧ್ಯತೆ ನೀಡಬೇಕು. ಪರಿಸರದ ಉಳಿವಿಗಾಗಿ ಪ್ರತಿಯೊಬ್ಬರೂ ತಮ್ಮ ಕೊಡುಗೆಗಳನ್ನು ನೀಡಬೇಕೆಂದರು.

ಜೀವ ವೈವಿಧ್ಯ ಮಂಡಳಿ ಹಿರಿಯ ಅಧಿಕಾರಿ ಡಾ.ಪ್ರೀತಮ್, ಸದಸ್ಯರಾದ ಶ್ರೀಪಾದ ಬಿಚ್ಚುಗತ್ತಿ, ಹನಿಯ ರವಿ, ಸುಪ್ರಕಾಶ್, ಕುಮಾರ ಸಂಪೆಕಟ್ಟೆ, ನಿಖಿಲ್, ಕೃಷ್ಣಮೂರ್ತಿ, ರುಕ್ಮಿಣಿ, ವಿಜಯ, ಆರ್‌ಎಫ್‌ಓ ರಾಘವೇಂದ್ರ, ಸಂಜಯ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!