ಪತ್ರಕರ್ತರೊಂದಿಗೆ ಸಚಿವ ಮಧು ಬಂಗಾರಪ್ಪ ಉದ್ದಟತನ ವರ್ತನೆ ವಿರುದ್ಧ ಸಿಎಂಗೆ ದೂರು

0 348

ಸಾಗರ: ಪತ್ರಕರ್ತರ ವಿರುದ್ಧ ಉದ್ದಟತನದಿಂದ ನಡೆದುಕೊಂಡ ಸಚಿವ ಮಧು ಬಂಗಾರಪ್ಪ (Madhu Bangarappa) ವಿರುದ್ಧ ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಾಲೂಕು ಘಟಕದಿಂದ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನವರಿಗೆ ಮನವಿ ಸಲ್ಲಿಸಿದರು.

ಕಳೆದ ಡಿ.01 ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ತಾಲ್ಲೂಕು ಪ್ರಗತಿಪರಿಶೀಲನಾ ಸಭೆ ನಡೆಸಿದ್ದು, ಈ ಸಭೆಗೆ ಪತ್ರಕರ್ತರಿಗೆ ಆಹ್ವಾನ ನೀಡಿರಲಿಲ್ಲ. ಆದಾಗ್ಯೂ ಪತ್ರಕರ್ತರು ವರದಿಗಾಗಿ ಸಭೆ ಸ್ಥಳಕ್ಕೆ ಹೋಗಿದ್ದು, ಜಿಲ್ಲೆಯ ಸಮಸ್ಯೆಗಳು ಮತ್ತು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತರೊಂದಿಗೆ ಉದ್ದಟತನದಿಂದ ವರ್ತಿಸಿದ್ದಾರೆ. ಪ್ರಶ್ನೆ ಕೇಳದಂತೆ ಬೆದರಿಕೆ ರೂಪವಾಗಿ ತಾಕೀತು ಮಾಡಿರುತ್ತಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪತ್ರಕರ್ತರಿಗೆ ಸಭೆಗೆ ಆಹ್ವಾನ ನೀಡದಿರುವ ಬಗ್ಗೆಯೂ ಸಮಚಿತ್ತದ ಸಮಜಯಿಷಿ ನೀಡುವಷ್ಟು ಸಹನೆ ಇಲ್ಲದ ಸಚಿವರು ಪತ್ರಕರ್ತರನ್ನು ಹೀಯಾಳಿಸಿ ಅವಮಾನಿಸಿದ್ದಾರೆ. ಸಚಿವರ ವರ್ತನೆ ಪ್ರಜಸತ್ತಾತ್ಮಕನ ನಡವಳಿಕೆಗೆಳಿಗೆ ವಿರುದ್ದವಾದುದ್ದು, ಸಚಿವರ ಈ ವರ್ತನೆ ಅತ್ಯಂತ ಖಂಡನೀಯವಾದುದ್ದು, ಸಚಿವರ ಕಾರ್ಯಕ್ರಮಗಳ ಬಗ್ಗೆ ಪತ್ರಕರ್ತರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕರ ನಿರ್ದೇಶಕರಾದ ಮಾರುತಿ ಅವರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇವರನ್ನು ಸಮರ್ಥಿಸಿಕೊಳ್ಳುವ ಭರಾಟೆಯಲ್ಲಿ ಸಚಿವ ಮಧು ಬಂಗಾರಪ್ಪ ಅವರು ಕೂಡ ಉದ್ದಟತನದಿಂದ ವರ್ತಿಸಿರುವುದನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಾಗರ ತಾಲ್ಲೂಕು ಘಟಕ ತೀವ್ರವಾಗಿ ಖಂಡಿಸುತ್ತದೆ.

ಮುಖ್ಯಮಂತ್ರಿಗಳಾದ ತಾವು ಸದಾ ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಕರ್ತರ ವೃತ್ತಿ ಘನತೆಯನ್ನು ಪ್ರತಿಪಾದಿಸುತ್ತಾ, ಗೌರವಿಸುತ್ತಾ ಬರುತ್ತಿರುವಾಗ ತಮ್ಮ ಸಂಪುಟದ ಸಹದ್ಯೋಗಿ ಮಧು ಬಂಗಾರಪ್ಪ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವೇ ಆಗಿರುವ ಪತ್ರಕರ್ತರೊಂದಿಗೆ ಉದ್ದಟತನದಿಂದ ವರ್ತಿಸುತ್ತಿರುವುದು, ಪತ್ರಕರ್ತರು ಪ್ರಶ್ನೆಗಳನ್ನೆ ಕೇಳದಂತೆ ಬಾಯ್ಮಿಚ್ಚಿಸುವ ಸರ್ವಾಧಿಕಾರಿ ಪ್ರವೃತ್ತಿ ತೋರುತ್ತಿರುವುದು ಮತ್ತು ಪತ್ರಕರ್ತರ ವೃತ್ತಿಯನ್ನು ಅವಹೇಳನ ಮಾಡಿದ್ದು ಸರ್ಕಾರಕ್ಕೆ ಶೋಭೆ ತರುವಂತದ್ದಲ್ಲ.

ಸಚಿವ ಮಧುಬಂಗಾರಪ್ಪ ಅವರ ಇಂತಹ ಉದ್ದಟತನಗಳು ಮುಂದುವರೆದಿದ್ದೆ ಅದಲ್ಲಿ ಅವರ ವಿರುದ್ದ ಪ್ರತಿಭಟನೆ ನಡೆಸಬೇಕಾಗುವುದು ಅನಿವಾರ್ಯವಾಗುತ್ತದೆ. ಆದ್ದರಿಂದ ಮಧು ಬಂಗಾರಪ್ಪ ಅವರ ಈ ಉದ್ದಟತನವನ್ನು ತಾವುಗಳು ಗಂಭೀರವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳುಹಿಸದಂತೆ ಎಚ್ಚರಿಕೆ ನೀಡಬೇಕಾಗಿ ವಿನಂತಿ ಹಾಗೂ ಶಿವಮೊಗ್ಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಮಾರುತಿ ಅವರು ಕಚೇರಿ ಕೆಲಸದಲ್ಲಿ ಅತ್ಯಂತ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದು ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸಲ್ಲಿಕೆ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ನಾಗೇಶ್, ಕಾರ್ಯದರ್ಶಿ ಮಹೇಶ್ ಹೆಗಡೆ, ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, ರವಿನಾಯ್ಡು, ಎಂ.ಜಿ. ರಾಘವೇಂದ್ರ, ನಾಗರಾಜ್, ಜಮಿಲ್ ಸಾಗರ, ಚಂದ್ರಶೇಖರ್, ರವಿಕುಮಾರ್ ಬಿ.ಡಿ, ಜಗನ್ನಾಥ್ ಮತ್ತಿತರರಿದ್ದರು.

Leave A Reply

Your email address will not be published.

error: Content is protected !!