ಶಿಷ್ಯ ವೇತನದಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯ ನಿರ್ಮಿಸಿಕೊಂಡಿದ್ದಾರೆ ; ಬೇಬಿ ಕೆ

0 66


ಹೊಸನಗರ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಸುಜ್ಞಾನ ಶಿಷ್ಯವೇತನ ನೀಡುತ್ತಿರುವುದರಿಂದ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಓದುವುದರ ಮೂಲಕ ತಮ್ಮ ಜೀವನವನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಹೊಸನಗರ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಯೋಜನಾಧಿಕಾರಿ ಬೇಬಿಯವರು ಹೇಳಿದರು.


ಹೊಸನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬೆಳ್ಳಿ ಹಬ್ಬದ ಆಚರಣೆಯ ಸವಿನೆನಪಿಗಾಗಿ ಯೋಜನೆಯ ಪಾಲುದಾರ ಕುಟುಂಬದ ಸ್ವ ಸಹಾಯ ಹಾಗೂ ಪ್ರಗತಿಬಂಧು ಸಂಘಗಳ, ಆರ್ಥಿಕವಾಗಿ ಹಿಂದುಳಿದ ಸದಸ್ಯರ ಮಕ್ಕಳ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ನೆರವಾಗುವಂತೆ ಸುಜ್ಞಾನನಿಧಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೊಸನಗರ ತಾಲೂಕಿನ 393 ವಿದ್ಯಾರ್ಥಿಗಳನ್ನು ಪ್ರತಿಪರ ಶಿಕ್ಷಣ ಮುಂದುವರಿಸಲು ಸುಜ್ಞಾನ ನಿಧಿ ಯೋಜನೆ ಅಡಿ ಆಯ್ಕೆ ಮಾಡಿದ್ದು ಅಶಕ್ತ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ದುಸ್ಥಿತಿಯಲ್ಲಿರುವ ಶಾಲೆಗಳಿಗೆ ಬೆಂಚ್, ಡೆಸ್ಕ್ ಗಳನ್ನ ನೀಡಲಾಗಿದೆ ಎಂದು ತಿಳಿಸಿ ಸಂಘದ ಮಹತ್ತರ ಗುರಿಯಾದ ದುಶ್ಚಟಗಳಿಂದ ಮುಕ್ತರನ್ನಾಗಿಸುವ ಮದ್ಯವರ್ಜನ ಶಿಬಿರ ಸಂಪೂರ್ಣ ಯಶಸ್ವಿ ಹೊಂದಿದ್ದು ಈ ಬಾರಿ ಜೂನ್ 20ರಿಂದ ತಾಲೂಕಿನ ಸಂಪೇಕಟ್ಟೆಯಲ್ಲಿ ನವ ಜೀವನ ಯೋಜನೆಯ ಮದ್ಯವರ್ಜನ ಶಿಬಿರ ನಡೆಯಲಿದ್ದು ದುಶ್ಚಟ ಪೀಡಿತರು ಈ ಶಿಬಿರದ ಪ್ರಯೋಜನ ಪಡೆಯುವಂತೆ ಕೋರಿದರು.


ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗಿ 2 ರಿಂದ 5 ವರ್ಷದ ಅವಧಿಯ ತಾಂತ್ರಿಕ ಮತ್ತು ವೃತ್ತಪರ ಶಿಕ್ಷಣಗಳಿಗೆ ಸಂಸ್ಥೆಯು ನಿಗದಿಪಡಿಸಿದ ಆಯ್ದ ಕೋರ್ಸಿಗೆ ಅನುಗುಣವಾಗಿ ರೂ 400 ರಿಂದ 1000 ಮೊತ್ತದವರೆಗೆ ಮಾಸಿಕ ಶಿಷ್ಯವೇತನವನ್ನು ಪಾವತಿಸಲಾಗುತ್ತಿದ್ದು ಈ ಹಿನ್ನಲೆಯಲ್ಲಿ ಆರ್ಥಿಕ ವರ್ಷ 2022-23ನೇ ಸಾಲಿನಲ್ಲಿ ಹೊಸನಗರ ಯೋಜನಾ ಕಛೇರಿ ವ್ಯಾಪ್ತಿಯಲ್ಲಿ ಸುಜ್ಞಾನನಿಧಿ ಶಿಷ್ಯ ವೇತನಕ್ಕೆ ಆಯ್ಕೆಯಾಗಿರುವ 73 ವಿದ್ಯಾರ್ಥಿಗಳಿಗೆ ತಿಂಗಳಿಗೆ ಒಟ್ಟು 52,200/-ಮೊತ್ತದ ಶಿಷ್ಯವೇತನ ಮಂಜೂರಾಗಿದ್ದು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಸುಜ್ಞಾನನಿಧಿ ಶಿಷ್ಯವೇತನದ ಮಂಜೂರಾತಿ ಪತ್ರದ ಸಮಾರಂಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಎನ್.ಆರ್ ದೇವಾನಂದ್ ಹಾಗೂ ಸದಾನಂದರವರು ವಿತರಣೆ ಮಾಡಿದರು.


ಈ ಸಂದರ್ಭದಲ್ಲಿ ಮೇಲ್ವಿಚಾರಕ ತಿಮ್ಮಪ್ಪ ಆಡಳಿತ ಸಹಾಯಕ ಪ್ರಬಂಧಕರಾದ ಗುರುಪ್ರಸಾದ್ ಎನ್ ಮಡಿವಾಳ ಕಛೇರಿ ಸಿಬ್ಬಂದಿ ಚೇತನ್ ಬಿ, ಅಜಿತ್ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

ಚೆಕ್ ವಿತರಣೆ :


ಹೊಸನಗರ: ತಾಲ್ಲೂಕಿನ ಕಳೂರು ಗ್ರಾಮ ವ್ಯಾಪ್ತಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘದ ಪ್ರತಿನಿಧಿಯಾಗಿ ಗಾಯಿತ್ರಿಯವರು ಸಂಘವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬಂದಿರುತ್ತಾರೆ ಎಂದು ಜನಜಾಗೃತಿಯ ಜಿಲ್ಲಾ ಸದಸ್ಯ ಎನ್.ಆರ್.ದೇವಾನಂದ್‌ರವರು ಹೇಳಿದರು.


ಕುಟುಂಬದ ಓರ್ವ ಸದಸ್ಯರಾದ ಸುಬ್ಬಮ್ಮ ರವರು ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಸದರಿಯವರ ಚಿಕಿತ್ಸೆಗೆ ಸುಮಾರು 2 ಲಕ್ಷಕ್ಕಿಂತ ಅಧಿಕ ಹಣವನ್ನು ಖರ್ಚು ಮಾಡಿರುತ್ತಾರೆ ಇವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದಡಿ ನೊಂದಾವಣೆ ಮಾಡಿಸಿದ್ದು ಇವರಿಗೆ ರೂ. 53 ಸಾವಿರ ಮೊತ್ತ ಶ್ರೀ ಕ್ಷೇತ್ರದಿಂದ ಮಂಜೂರಾಗಿರುತ್ತದೆ ಈ ಮೊತ್ತದ ಚೆಕ್‌ನ್ನು ಹೊಸನಗರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಬೇಬಿ.ಕೆ, ಜಿಲ್ಲಾ ಜನ ಜಾಗೃತಿ ವೇದಿ ಸದಸ್ಯರಾದ ದೇವಾನಂದ ಎನ್.ಆರ್, ಸದಾನಂದರವರು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮೇಲ್ವಿಚಾರಕರಾದ ತಿಮ್ಮಪ್ಪ, ಆಡಳಿತ ಸಹಾಯಕ ಪ್ರಬಂಧಕರಾದ ಗುರುಪ್ರಸಾದ್ ಎನ್ ಮಡಿವಾಳ, ಮತ್ತು ಕಛೇರಿ ಸಿಬ್ಬಂದಿಗಳಾದ ಚೇತನ್ ಬಿ, ಅಜಿತ್ ಎಸ್ ವಿ ಇನ್ನೂ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!