ಲಂಚಕ್ಕೆ ಬೇಡಿಕೆ ; ಮೂಡಿಗೆರೆ BEO ಲೋಕಾಯುಕ್ತ ಬಲೆಗೆ !

0 472

ಮೂಡಿಗೆರೆ : ಅನುಕಂಪದ ನೌಕರಿಗೆ ಶಿಫಾರಸ್ಸು ಮಾಡಲು ಲಂಚಕ್ಕೆ (Bribe) ಬೇಡಿಕೆ ಇಟ್ಟಿದ್ದ ಮೂಡಿಗೆರೆ ಬಿಇಒ (Mudigere BEO) ಲೋಕಾಯುಕ್ತ ಪೊಲೀಸರ (Lokayuktha Police) ಬಲೆಗೆ ಬಿದ್ದ ಘಟನೆ ನಡೆದಿದೆ.

ಮೂಡಿಗೆರೆ ಹೇಮಂತ್ ರಾಜ್ ಲೋಕಾಯುಕ್ತ ಬಲೆಗೆ ಬಿದ್ದ ಬಿಇಒ. ಅನುಕಂಪದ ಆಧಾರದ ಮೇಲೆ ನೌಕರಿ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು 15 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ, ಕೊನೆಗೆ 10 ಸಾವಿರ ರೂ.ಗೆ ಒಪ್ಪಿಕೊಂಡಿದ್ದ ಹಣ ನೀಡುವಾಗ ಬಿಇಒ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಲೋಕಾಯುಕ್ತ ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ತಂಡ ದಾಳಿ ನಡೆಸಿದ್ದಾರೆ.

Leave A Reply

Your email address will not be published.

error: Content is protected !!