ಇಲಾಖೆಯ ಸವಲತ್ತುಗಳನ್ನು ಕಟ್ಟ ಕಡೆಯ ರೈತನಿಗೂ ನೀಡಿದ ಕೃಷಿ ಅಧಿಕಾರಿ ಸುಬ್ರಹ್ಮಣ್ಯ

0 607

ಹೊಸನಗರ: ಪಟ್ಟಣದ ಕೃಷಿ ಇಲಾಖೆಯಲ್ಲಿ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಪಡೆದಿರುವ ಸುಬ್ರಮಣ್ಯರವರು ಕೃಷಿ ಇಲಾಖೆ ಹಾಗೂ ರೈತರ ನಡುವೆ ಕಂದಕ ನಿರ್ಮಾಣ ಮಾಡದೇ ಇಲಾಖೆಯ ಸವಲತ್ತು ಮತ್ತು ತಾಂತ್ರಿಕ ಸಲಹೆಗಳನ್ನು ತಾಲ್ಲೂಕಿನ ಕಟ್ಟಕಡೇಯ ರೈತರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಅವರನ್ನು ಸನ್ಮಾನಿಸುವಲ್ಲಿ ಅರ್ಥವಿದೆ ಎಂದು ಹೊಸನಗರ ತಾಲ್ಲೂಕಿನ ಪ್ರಗತಿಪರ ಕೃಷಿಕ ಕೊಗ್ರೆ ನಂಜುಂಡಪ್ಪ ಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ಕೃಷಿ ಇಲಾಖೆಯ ಆವರಣದಲ್ಲಿ ಇತ್ತೀಚೆಗೆ ಕೃಷಿ ಇಲಾಖೆಯಿಂದ ವಯೋನಿವೃತ್ತಿ ಪಡೆದ ಕೃಷಿ ಅಧಿಕಾರಿ ಸುಬ್ರಹ್ಮಣ್ಯರವರನ್ನು ಸನ್ಮಾನಿಸಿ ಮಾತನಾಡಿ, ರೈತರನ್ನು ಸ್ನೇಹಿತರಂತೆ ಪರಿಗಣಿಸಿ ನಗುಮೊಗದಿಂದಲೇ ಸವಲತ್ತುಗಳ ಮಾಹಿತಿ ನೀಡುವ ಅಪರೂಪದ ಅಧಿಕಾರಿ ಎಂದು ಕೃಷಿಕ ತೊಗರೆ ನಾಗೇಂದ್ರರವರು ಈ ಸಂದರ್ಭದಲ್ಲಿ ಪ್ರಶಂಸಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷಿ ಅಧಿಕಾರಿ ಸುಬ್ರಹ್ಮಣ್ಯ, ನಾನು ಸುಮಾರು 34 ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದು ನನ್ನ ಕೆಲಸದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಂಡವನಲ್ಲ. ಪ್ರಾಮಾಣಿಕವಾಗಿ ಸರ್ಕಾರ ನನಗೆ ನೀಡಿದ ಜವಾಬ್ದಾರಿಯನ್ನು ಚ್ಯುತಿ ಬಾರದಂತೆ ಯಾವುದೇ ಒಂದು ಕಪ್ಪುಚುಕ್ಕೆ ಇಲ್ಲದಂತೆ ಕಾರ್ಯ ನಿರ್ವಹಿಸಿದ್ದೇನೆ ಎಂಬ ತೃಪ್ತಿಯಿದೆ ಎಂದರು.

ಹೊಸನಗರದ ಕೃಷಿಕ ಗೋವಿಂದರಾಜು ಮಾತನಾಡಿ, ಹೊಸನಗರ ಕೃಷಿ ಇಲಾಖೆಯಲ್ಲಿ ಇಲ್ಲಿಯವರೆಗೆ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿರುವ ಸುಬ್ರಹ್ಮಣ್ಯರವರು ಇಡೀ ಕೃಷಿ ಇಲಾಖೆಗೆ ಒಂದು ನಕ್ಷತ್ರವಿದಂತೆ, ಇವರ ಸೇವೆ ಹೊಸನಗರ ತಾಲ್ಲೂಕಿನ ರೈತರು ಕಳೆದುಕೊಂಡಿದ್ದಾರೆ. ಕೃಷಿ ಇಲಾಖೆಯಲ್ಲಿರುವ ಇಂದು ಇರುವ ಅಧಿಕಾರಿಗಳು ಹಾಗೂ ಮುಂದೆ ಬರುವ ಅಧಿಕಾರಿಗಳು ಹೊಸನಗರ ತಾಲ್ಲೂಕಿನ ರೈತರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಸೇವೆ ಸಲ್ಲಿಸಲಿ ಎಂದರು.

ಈ ಕಾರ್ಯಕ್ರಮದಲ್ಲಿ ವಯೋನಿವೃತ್ತಿ ಪಡೆದಿರುವ ಕೃಷಿ ಅಧಿಕಾರಿ ಸುಬ್ರಹ್ಮಣ್ಯ ದಂಪತಿಗಳನ್ನು ಅದ್ದೂರಿಯಾಗಿ ಸನ್ಮಾನಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ಅಧಿಕಾರಿ ಮಾರುತಿಯವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರೈತರಾದ ಸತ್ಯನಾರಾಯಣ ಅಡಿಗ, ಶ್ರೀಪತಿ, ಗೋವಿಂದರಾಜು, ಮಾಧವ, ನಾಗರಾಜ, ಪ್ರವೀಣ, ಜಯಲಕ್ಷ್ಮಿ, ಗಂಗಾಧರ, ಶಿವಬಸಪ್ಪ, ಸೋಮಣ್ಣ, ಷಣ್ಮುಖ, ನಾಗೇಂದ್ರ, ಕೃಷಿ ಅಧಿಕಾರಿ ಪ್ರತಿಮಾ, ಮುಖ್ಯ ಅಭಿಷೇಕ, ಗೊರಗೋಡು ಪ್ರಕಾಶ್, ಸತ್ಯನಾರಾಯಣ ಅಡಿಗ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!