ಹೊಸನಗರ ಕೊಡಚಾದ್ರಿ ಕಾಲೇಜ್ ಮುಂಭಾಗ ಬಲಿಗಾಗಿ ಕಾದು ಕುಳಿತ ವಿದ್ಯುತ್ ಕಂಬ !

0 39


ಹೊಸನಗರ: ಹೊಸನಗರ ಸರ್ಕಾರಿ ಪ್ರಥಮ ದರ್ಜೆ ಕೊಡಚಾದ್ರಿ ಕಾಲೇಜ್ ಎದುರು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಬಸ್ ಸ್ಟ್ಯಾಂಡ್ ನಿರ್ಮಿಸಲಾಗಿದೆ. ಈ ಬಸ್ ಸ್ಟ್ಯಾಂಡ್ ಸಮೀಪ ಮೆಸ್ಕಾಂ ಇಲಾಖೆಯ ಹೈ ವೋಲ್ಟೇಜ್ ವಿದ್ಯುತ್ ಕಂಬವಿದೆ. ಈ ಕಂಬದ ಪಕ್ಕದಲ್ಲಿಯೇ ದೊಡ್ಡ ಹಸಿ ಆಲದ ಮರವಿದೆ. ಆಲದ ಮರಕ್ಕೆ ವಿದ್ಯುತ್ ತಂತಿಗಳು ತಾಗಿಕೊಂಡಿದೆ. ಹಸಿ ಆಲದ ಮರ ಮುಟ್ಟಿದರೆ ಏನಾಗಬಹುದು ಎಂದು ನೀವೆ ಆಲೋಚಿಸಿ.

ಜನರಿಗೆ ದನಗಳಿಗೆ ಪ್ರಾಣಿ ಪಕ್ಷಿಗಳಿಗೆ ಕರೆಂಟ್ ಪಾಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಒಂದು ಕಥೆಯಾದರೆ ಮೆಸ್ಕಾ ಇಲಾಖೆಯವರು ನಿಲ್ಲಿಸಿರುವ ವಿದ್ಯುತ್ ಕಂಬಕ್ಕೆ ಎಂಟು ವಿವಿಧ ಲೈನ್‌ಗಳ ತಂತಿ ಜೋಡಿಸಲಾಗಿದೆ. ಆಲದ ಮರದ ಬಳ್ಳಿಗಳು ಸುತ್ತಿಕೊಂಡ ಹಾಗೇ ವಿದ್ಯುತ್ ಕಂಬಕ್ಕೆ ಟಿ.ವಿ ಕೇಬಲ್, ಬಿಎಸ್ಎನ್‌ಎಲ್ ಕೇಬಲ್ ಸುತ್ತಿ ನೆಲಕ್ಕೆ ಬಿಟ್ಟಿರುವ ದೃಶ್ಯ ಕಣ್ಣಿಗೆ ಕಾಣುತ್ತದೆ. ಈ ದೃಶ್ಯ ಕಂಡವರಿಗೆ ಮೈ ಝುಮ್ ಎನ್ನುತ್ತದೆ ಇಲ್ಲೆ ಸಮೀಪವಿರುವ ಕೊಡಚಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕ ವೃಂದ ಇಲ್ಲಿಯವರೆಗೆ ಯಾವುದೇ ಅಧಿಕಾರಿಗಳಿಗೆ ದೂರು ಸಲ್ಲಿಸದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಇನ್ನಾದರೂ ಮೆಸ್ಕಾಂ ಇಲಾಖೆಯವರು ತಂತಿಯ ಮೇಲೆ ಹೋದ ಮರದ ರಂಬೆಗಳನ್ನು ಕಡಿಯಬೇಕು ಹಾಗೂ ಕಂಬಕ್ಕೆ ನೆಲದವರೆಗೆ ಹಾಕಿರುವ ಕೇಬಲ್‌ಗಳನ್ನು ತೆಗೆಯದಿದ್ದರೆ ಮುಂದಿನ ದಿನದಲ್ಲಿ ಮಳೆಗಾಲದಲ್ಲಿ ದೊಡ್ಡ ಪ್ರಮಾಣದ ಅನಾಹುತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ತಕ್ಷಣ ಎಚ್ಚೆತ್ತುಕೊಂಡು ಸರಿಪಡಿಸಲು ಮುಂದಾಗಿ ಭಾರಿ ಅನಾಹುತ ತಪ್ಪಿಸಲಿ.

Leave A Reply

Your email address will not be published.

error: Content is protected !!