Thirthahalli | ದೇಶದಲ್ಲಿ ಕೋಮುಗಲಭೆ ಹಿಂದೆ BJP ಯವರು ಇದ್ದಾರೆ ; ಕಿಮ್ಮನೆ ರತ್ನಾಕರ್

0 121

ತೀರ್ಥಹಳ್ಳಿ : ಇಡೀ ದೇಶದಲ್ಲಿ ಕೋಮುಗಲಭೆ ಹಿಂದೆ ಬಿಜೆಪಿಯವರು ಇದ್ದಾರೆ. ತೀರ್ಥಹಳ್ಳಿಯಲ್ಲಿ ನಂದಿತಾ ಪ್ರಕರಣದಲ್ಲಿ ಹೆಣವನ್ನು ಮಸೀದಿ ಎದುರು ತೆಗೆದುಕೊಂಡು ಹೋಗಬೇಕು ಎಂದು ಅಂದು ಜ್ಞಾನೇಂದ್ರರವರು ಕೂತಿದ್ದರು. 52ನೇ ಇಸವಿಯಿಂದ ಐದು ಬಾರಿ ಗೆದ್ದು ಇಡೀ ರಾಜ್ಯದಲ್ಲಿ ಕಳಂಕವನ್ನು ತೆಗೆದುಕೊಂಡಿದ್ದವರು ಅವರು ಒಬ್ಬರೇ ಎಂದು ಶಾಸಕರ ವಿರುದ್ಧ ಕಿಮ್ಮನೆ ರತ್ನಾಕರ್ ಆಕ್ರೋಶ ವ್ಯಕ್ತಪಡಿಸಿದರು.

ಆರ್.ಎಂ. ಮಂಜುನಾಥ್ ಗೌಡರ ಮನೆ ಮೇಲೆ ನಡೆದ ಇಡಿ ದಾಳಿಯ ವಿಷಯವಾಗಿ ಪಟ್ಟಣದ ಗಾಂಧಿ ಭವನದಿಂದ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ತಾಲೂಕು ಕಚೇರಿ ಎದುರು ಮಾತನಾಡಿದ ಅವರು, ಈಗಾಗಲೇ ಮಂಜುನಾಥಗೌಡರ ತನಿಖೆ ಆಗಿದೆ ಈಗೆಂತ ಹೊಸದಾಗಿ ಮಾಡುವುದು ಮಾಡುವುದಾದರೆ ನಂದಿತಾ ಪ್ರಕರಣದಲ್ಲೂ ಮರು ತನಿಖೆ ಮಾಡಿಸಬಹುದಿತ್ತು. ಎರಡು ವರ್ಷ ಗೃಹಸಚಿವರಾಗಿ ಗೆಣಸು ತಿಂದಿದ್ದಾ? ಇವರೇ ಅವತ್ತು ಕಲ್ಲು ಹೊಡೆಸಿದ್ದು, ಆ ಕೇಸ್ ವಾಪಾಸ್ ತೆಗೆದುಕೊಂಡಿದ್ದಾರೆ. ಇವರು ಕೂಡ ಆ ಪ್ರಕರಣದಲ್ಲಿ ಆರೋಪಿ, ಇವರ ಮೇಲೂ 5 ಕೇಸ್ ಬಿದ್ದಿತ್ತು ಎಂದು ಆರಗ ವಿರುದ್ಧ ಹರಿಹಾಯ್ದರು.

ಇವತ್ತು ಮಂಜುನಾಥಗೌಡರಿಗೆ ಅಭಿನಂದನ ಕಾರ್ಯಕ್ರಮ ಮಾಡಬೇಕು ಅಂತ ಆಯೋಜನೆ ಮಾಡಿಕೊಂಡಿದ್ದೆವು. ಜಿಲ್ಲಾದ್ಯಂತ ಕಾಂಗ್ರೆಸ್ ಸಂಘಟನೆ ಆಗುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಂಜುನಾಥ ಗೌಡರಿಗೆ ಹಿಂಸೆ ಕೊಡುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ. ಇದಕ್ಕೆ ಬೆಂಬಲವಾಗಿ ನಮ್ಮ ಸ್ಥಳೀಯ ಶಾಸಕರು ಕುಮ್ಮಕ್ಕು ಕೂಡ ಇದೆ. ಈ ಬಿಜೆಪಿ ಏನು ಪಾತ್ರೆ ತೊಳೆಯುವ ಮಷಿನ್ನ? 10 ಕೋಟಿ ಜನ ಇದ್ದಾರೆ ಅವರಲ್ಲಿ ಯಾರು ಭ್ರಷ್ಟರು ಇಲ್ಲವಾ ಎಂದು ಪ್ರಶ್ನೆ ಮಾಡಿದರು.

ಈಗ ಇವರೆಲ್ಲಾ ಸತ್ಯಶೋಧನ ಎಂಬ ಸಮಿತಿ ರಚನೆ ಮಾಡಿಕೊಂಡಿದ್ದಾರೆ. ಇದರ ಉದ್ದೇಶ ಏನು ಎಂದರೆ ಇನ್ನು ಏನು ಗಲಭೆ ಮಾಡಿಸಬಹುದು ಎಂಬುದಾಗಿರುತ್ತದೆ. ಮಹಾತ್ಮ ಗಾಂಧಿ ಕೊಂದ ಗೋಡ್ಸೆ ಕೇಸ್ ನಲ್ಲಿ ಸಾರ್ವರ್ಕರ್ 7ನೇ ಆರೋಪಿ ಈ ದೇಶದ ವಿಭಜನೆಗೆ ಧರ್ಮ ಧರ್ಮಗಳ ವಿಭಜನೆಗೆ ಸಾರ್ವರ್ಕರ್ ಕೂಡ ಒಬ್ಬ ಕಾರಣಕರ್ತ. ಪ್ರತಿನಿತ್ಯ ಗಲಾಟೆ ಆಗಬೇಕು ಎಂದು ಬಿಜೆಪಿಯವರು ಬಯಸಿದ್ದಾರೆ ಎಂದರು.

ಇತ್ತೀಚಿಗೆ ನಮ್ಮ ಗ್ಯಾರಂಟಿ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯ ಬಂದಿದೆ. ಹೀಗಾಗಿ ಅವರಿಗೆ ಆತಂಕ ಶುರುವಾಗಿದ್ದು ನಾವಿನ್ನು ಗೆಲ್ಲುವುದಕ್ಕೆ ಸಾಧ್ಯವಿಲ್ಲ ಅದಕ್ಕಾಗಿ ಏನಾದರೂ ಮಾಡಿ ಕೋಮು ಗಲಭೆ ಮಾಡಿಸುವ ಉದ್ದೇಶ ಹೊಂದಿದ್ದಾರೆ. ಜ್ಞಾನೇಂದ್ರರವರಿಗೆ ನೇರವಾಗಿ ಪ್ರಶ್ನೆ ಕೇಳುತ್ತೇನೆ ನಿಮ್ಮ ಕುಟುಂಬದಲ್ಲಿ ವೈಕುಂಟ ಸಮಾರಾಧನೆ ಎಷ್ಟು ವರ್ಷ ಮಾಡಿದ್ದೀರಿ? ನಂದಿತಾ ಪ್ರಕರಣದಲ್ಲಿ ಚುನಾವಣೆ ಬರುವವರೆಗೂ ವೈಕುಂಠ ಸಮಾರಾಧನೆ ಮಾಡಿದ್ದೀರಲ್ಲ ಅದು ಸರಿಯೇ? ಒಟ್ಟಿನಲ್ಲಿ ಚುನಾವಣೆಗಾಗಿ ಇಡೀ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದರು.

ಮಂಜುನಾಥ ಗೌಡರನ್ನು ನಿಮ್ಮಿಂದ ಏನು ಮಾಡಲು ಆಗುವುದಿಲ್ಲ. ಸದ್ಯದಲ್ಲೇ ಒಂದು ಬೃಹತ್ ಪ್ರತಿಭಟನೆಯನ್ನು ಮಾಡುತ್ತೇವೆ. ನಾವೆಲ್ಲ ಸೇರಿ ಕೋಮು ಗಲಭೆ ಸೃಷ್ಟಿ ಮಾಡಿ ಮತ ಪಡೆಯಲು ಹೊರಟಿರುವ ಬಿಜೆಪಿ ಕುತಂತ್ರವನ್ನು ನಾವೆಲ್ಲರೂ ಸೇರಿ ತಡೆಯಬೇಕು. ದೇಶದ ಎಲ್ಲ ಪಕ್ಷಗಳು ಬಿಜೆಪಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿವೆ ಆದರೆ ಕಾಂಗ್ರೆಸ್ ಎಂದೂ ಮಾಡಿಕೊಂಡಿಲ್ಲ. ರಾಹುಲ್ ಗಾಂಧಿಯ ಇಮೇಜ್ ಡೆವಲಪ್ಮೆಂಟ್ ಆಗುತ್ತಿರುವುದನ್ನು ನೋಡಿ ಅವರಿಗೆ ಕಷ್ಟ ಅನಿಸುತ್ತಿದೆ ಎಂದರು.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಎಸ್ ಸುಂದರೇಶ್ ಮಾತನಾಡಿ ಮಂಜುನಾಥಗೌಡರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ನಂತರದಲ್ಲಿ ಇಡೀ ಜಿಲ್ಲೆಯಲ್ಲಿ ಎಲ್ಲಾ ಸಹಕಾರಿ ಕ್ಷೇತ್ರದವರು ಅತ್ಯಂತ ಖುಷಿಯಿಂದ ಇದ್ದರು.

ಯಾವುದೇ ರೀತಿಯ ಒಬ್ಬ ಒಳ್ಳೆ ನಾಯಕ ಬೆಳೆದರೆ ಅವರನ್ನು ಬೆಳೆಸುವ ಕೆಲಸವನ್ನು ಬಿಜೆಪಿ ಮಾಡುವುದಿಲ್ಲ. ಅವರನ್ನು ಹಾಳು ಮಾಡುವ ಕೆಲಸವನ್ನೇ ಬಿಜೆಪಿ ಮಾಡುತ್ತಾ ಬಂದಿದೆ ಎಂದರು.

ಈಗಾಗಲೇ ಬಿಜೆಪಿ ಜಿಲ್ಲೆಯಲ್ಲಿ ಲೋಕಸಭಾ ಸ್ಥಾನವನ್ನು ಗೆಲ್ಲಬೇಕು ಎಂದು ಎಲ್ಲಾ ಒಳ ಸಂಚನ್ನು ಮಾಡುತ್ತಿದೆ. ಅವರಿಗೆ ನೇರವಾಗಿ ಮತ ಕೇಳುವ ಶಕ್ತಿ ಇಲ್ಲ ಯಾವುದಾದರೂ ಸಣ್ಣ ಘಟನೆ ನಡೆದರು ಅದಕ್ಕೆ ತುಪ್ಪ ಸುರಿದು ಬೆಂಕಿ ಹಚ್ಚಿ ಕಾಂಗ್ರೆಸ್ಸಿಗೆ ಕಪ್ಪು ಚುಕ್ಕಿ ತರುವ ಕೆಲಸ ಮಾಡಿಸುತ್ತಿದೆ. ಸ್ವಾತಂತ್ರ ನಂತರ ಅತ್ಯಂತ ಕೆಟ್ಟ ಕೀಳು ಮಟ್ಟದ ಹೆಸರನ್ನು ಪಡೆದ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ ಎಂದರು.

ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಯ ಹಾಗೆ 25 ಸ್ಥಾನದಲ್ಲಿ ಈ ಬಾರಿ 5 ಸ್ಥಾನಗಳನ್ನು ಗೆಲ್ಲಲು ಕಷ್ಟವಾಗುತ್ತದೆ. ನಿಮ್ಮ 25 ಜನ ಎಂಪಿ ಗಳು ನಪುಂಸಕರ ರೀತಿ ಕೆಲಸ ಮಾಡುತ್ತಿದ್ದಾರೆ.

ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ. ಕಾವೇರಿ, ಮೇಕೆದಾಟು ವಿಷಯಗಳನ್ನು ಕೂಡ ಇವರು ಹೋಗಿ ಮೋದಿ ಅವರ ಮುಂದೆ ನಿಂತು ಮಾತನಾಡುವ ಶಕ್ತಿ ಇವರಿಗೆ ಇಲ್ಲ ಎಂದರು.

ಈ ಸಂದರ್ಭದಲ್ಲಿ ಕಲಗೋಡು ರತ್ನಾಕರ್, ಡಾ. ಸುಂದರೇಶ್, ಮೂಡಬಾ ರಾಘವೇಂದ್ರ, ಕೆಸ್ತೂರು ಮಂಜುನಾಥ್, ಗೀತಾ ರಮೇಶ್, ರೆಹಮಾತುಲ್ಲ ಅಸಾದಿ ಸುಶೀಲಾ ಶೆಟ್ಟಿ, ಸೇರಿದಂತೆ ಹಲವರು ಇದ್ದರು.

Leave A Reply

Your email address will not be published.

error: Content is protected !!