ಯಾವುದೇ ಖಾಸಗಿ ಶಾಲೆಗೂ ಕಮ್ಮಿಯಿಲ್ಲ ಹೊಸನಗರದ ಈ ಸರ್ಕಾರಿ ಶಾಲೆ

0 127


ಹೊಸನಗರ: ಪಟ್ಟಣದ ಮಾವಿನಕೊಪ್ಪ ಎಪಿಎಂಸಿಗೆ ಹೋಗುವ ದಾರಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಹೊಸನಗರದಲ್ಲಿರುವ ಯಾವುದೇ ಖಾಸಗಿ ಶಾಲೆಗೂ ಕಮ್ಮಿಯಿಲ್ಲದಂತಿದೆ. ಆದರೆ ಮಕ್ಕಳ ಪೋಷಕರು ಖಾಸಗಿ ಶಾಲೆಗಳ ಬಗ್ಗೆ ಇರುವ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಒಂದು ಸರ್ಕಾರಿ ಶಾಲೆಯ ಅಬ್ಬರದ ಪ್ರಚಾರದಿಂದ ಹೊಸನಗರ ಸುತ್ತಮುತ್ತಲಿನ ಗ್ರಾಮಗಳ ಸರ್ಕಾರಿ ಶಾಲೆಗಳು ಬಾಗಿಲು ಹಾಕುವ ಹಂತಕ್ಕೆ ಬಂದಿದೆ ಎಂದರೆ ತಪ್ಪಾಗಲಾರದು.


ಮಾವಿನಕೊಪ್ಪದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 66 ವಿದ್ಯಾರ್ಥಿಗಳಿದ್ದು ಅದರಲ್ಲಿ 29 ಬಾಲಕರು ಹಾಗೂ 38 ಬಾಲಕಿಯರು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಖಾಯಂ ಶಿಕ್ಷಕರಾಗಿ 4 ಜನರು ಸೇವೆ ಸಲ್ಲಿಸುತ್ತಿದ್ದು ಶಿಕ್ಷಕರ ಸ್ವಂತ ಹಣವನ್ನು ನೀಡಿ ಸುಮಾರು ನಾಲ್ಕು ವರ್ಷದಿಂದ 2 ಗೌರವ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.


ಈ ಶಾಲೆಯಲ್ಲಿ ಪೋಷಕರ ಅಭಿಪ್ರಾಯದೊಂದಿಗೆ ಇಂಗ್ಲೀಷ್ ಭಾಷೆಯ ಭೋಧನೆಯನ್ನು ಮಾಡಲಾಗುತ್ತಿದೆ ಇದರ ಜೊತೆಗೆ ಎಲ್.ಕೆ.ಜಿ, ಯುಕೆಜಿಯನ್ನು ಆರಂಭಿಸಲಾಗಿದೆ. ಈ ಶಾಲೆಯಲ್ಲಿ 100 ಅಡಿಕೆ ಮರಗಳಿದ್ದು ಅದರಲ್ಲಿ ಕೆಲವು ಮರಗಳು ಅಡಿಕೆ ಫಲಗಳನ್ನು ನೀಡುತ್ತಿದೆ ಈ ವರ್ಷ 15 ಕೆ.ಜಿ ಅಡಿಕೆ ಬೆಳೆ ಎಳೆಯಲಾಗಿದೆ ಅಡಿಕೆ ಮರಗಳ ಜೊತೆಗೆ ತರಕಾರಿ ಸಸ್ಯಗಳನ್ನು ಜೊತೆಗೆ ಔಷಧಿ ಸಸ್ಯಗಳನ್ನು ಬೆಳೆಯಲಾಗುತ್ತಿದೆ.


ಈ ಶಾಲೆಯಲ್ಲಿ ತೆರೆದ ಬಾವಿಯ ಜೊತೆಗೆ ಬೋರ್‌ವೇಲ್ ತೆಗೆಯಲಾಗಿದ್ದು ನೀರಿನ ಅಭಾವವಿಲ್ಲ ಎಲ್ಲ ರೀತಿಯ ಸೌಲಭ್ಯ ಈ ಶಾಲೆಯಲ್ಲಿದ್ದರೂ ಯಾವುದೇ ಖಾಸಗಿ ಶಾಲೆಗಳಿಗಿಂತ ಕಮ್ಮಿಯಿಲ್ಲದಿದ್ದರೂ ಷೋಷಕರು ಮಾತ್ರ ಸರ್ಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷ್ಯ ಅರ್ಥವಾಗುತ್ತಿಲ್ಲ.


ಉತ್ತಮ ಮುಖ್ಯ ಶಿಕ್ಷಕ ಮತ್ತು ಶಿಕ್ಷಕ ವೃಂದ:

ಈ ಶಾಲೆಯಲ್ಲಿ ಮಕ್ಕಳ ಭೋಧನೆಗಾಗಿ 5 ಕೊಠಡಿಗಳು ಅಡುಗೆ ಮನೆ ಆಪೀಸ್ ಕೊಠಡಿಗಳು ಪರಿಶುದ್ಧವಾದ ವಾತಾವರಣಗಳಿದ್ದು ಸುಮಾರು 7 ವರ್ಷಗಳಿಂದ ಮುಖ್ಯ ಶಿಕ್ಷಕರಾಗಿ ಕುಬೇಂದ್ರಪ್ಪನವರು ಕಾರ್ಯನಿರ್ವಹಣೆ ಮಾಡುತ್ತಿದ್ದು ಸಹ ಶಿಕ್ಷಕರಾಗಿ ರಾಧಾ, ಸುರೇಶ ಆರ್, ವೇದಾಬಾಯಿ ಎನ್ ಗೌರವ ಶಿಕ್ಷಕರಾಗಿ ಆಶಾ, ಅನುಪಮರವರು ಕೆಲಸ ಮಾಡುತ್ತಿದ್ದಾರೆ. ಮುಖ್ಯ ಅಡಿಗೆಯವರಾಗಿ ಮಮತಾ ಮತ್ತು ಸಿಬ್ಬಂದಿಗಳು ಕಾರ್ಯನಿರ್ವಸುತ್ತಿದ್ದಾರೆ‌. ಈ ಶಾಲೆಯ ಎಸ್‌ಡಿಎಂಸಿ ಕಮಿಟಿಯವರು ಶಾಲೆಯ ಬಗ್ಗೆ ಮುತುವರ್ಜಿಸಿದ್ದು ಇವರ ಸಹಕರದಿಂದ ಈ ಶಾಲೆ ಈ ಮಟ್ಟಕ್ಕೆ ಎಳೆದಿದೆ ಎಂದರೆ ತಪ್ಪಾಗಲಾರದು.


ಗಣಪತಿ ವಿಗ್ರಹ ಸ್ಥಾಪನೆ:

ಸುಮಾರು 50ಸಾವಿರ ರೂಪಾಯಿ ಖರ್ಚಿನಲ್ಲಿ ಶಾಲೆಯ ಮುಂಭಾಗ ಗಣಪತಿ ವಿಗ್ರಹ ಸ್ಥಾಪಿಸಲಾಗಿದ್ದು ಶಾಲೆಗೆ ಆಗಮಿಸುವ ಪ್ರತಿ ವಿದ್ಯಾರ್ಥಿಗಳು ದೇವರಿಗೆ ಕೈ ಮುಗಿದು ಒಳಗೆ ಬರುತ್ತಾರೆ. ಪ್ರತಿದಿನ ಗಣಪತಿ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ಗಣಪತಿ ವಿಗ್ರಹ ಶಾಶ್ವತವಾಗಿ ಇರುತ್ತದೆ.

Leave A Reply

Your email address will not be published.

error: Content is protected !!