ಹೊಸೂರು ಗುಡ್ಡೇಕೇರಿ ಪ್ರೌಢ ಶಾಲೆ ಮಡಿಲಿಗೆ ಮತ್ತೊಂದು ಗರಿ, ರಾಜ್ಯ ಮಟ್ಟದ ಅತ್ಯುತ್ತಮ ಶಾಲಾ ಶೈಕ್ಷಣಿಕ ಸಂಸ್ಥೆ 2023 ಪ್ರಶಸ್ತಿ

0 226

ತೀರ್ಥಹಳ್ಳಿ : ಕಳೆದ ಒಂದು ದಶಕದಿಂದಲೂ, ತೀರ್ಥಹಳ್ಳಿ ಗ್ರಾಮೀಣ ಭಾಗದ ಮೇರು ಸರ್ಕಾರಿ ಶಾಲೆಯಾಗಿ ರೂಪಗೊಂಡು, ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಸಮಗ್ರ ಪ್ರಗತಿಯಲ್ಲಿ ಕೀರ್ತಿ ಗಳಿಸಿದ ತೀರ್ಥಹಳ್ಳಿ ತಾಲ್ಲೂಕಿನ ಅತ್ಯಂತ ಹೆಮ್ಮೆಯ ಸರ್ಕಾರಿ ವಿದ್ಯಾಸಂಸ್ಥೆ ಹೊಸೂರು ಗುಡ್ಡೇಕೇರಿ.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 100 ಅಂಕ, ಕ್ರೀಡೆಯಲ್ಲಿ, ಸಹ ಪಠ್ಯ ಚಟುವಟಿಕೆಗಳಲ್ಲಿ, ಜಿಲ್ಲೆ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಹೆಮ್ಮೆಯ ಶಾಲೆ. ಈಗಾಗಲೇ 2015 ರಲ್ಲಿ ರಾಜ್ಯ ಮಟ್ಟದ ಗೋವಿಂದೇಗೌಡ ಅತ್ಯುತ್ತಮ ಪ್ರೌಢಶಾಲಾ ಪ್ರಶಸ್ತಿಗೆ ನಾಮಿನೇಷನ್ ಆಗಿತ್ತು. 2017 ರಲ್ಲಿ ಶಿವಮೊಗ್ಗ ಡಯಟ್ ನಿಂದ, ಅತ್ಯುತ್ತಮ ಗುಣಮಟ್ಟದ ಪ್ರೌಢಶಾಲಾ ಪ್ರಶಸ್ತಿ ಹಾಗೂ 2018 ರಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಅತ್ಯುತ್ತಮ ಪ್ರೌಢಶಾಲಾ ಪ್ರಶಸ್ತಿ ಪಡೆದಿರುವುದು ಹಾಗೂ ಇತ್ತೀಚಿಗೆ ಅನೇಕ ಶಾಲೆಗಳು ಹೊಸೂರು ಗುಡ್ಡೇಕೇರಿ ಪ್ರೌಢಶಾಲೆಗೆ ಭೇಟಿ ಅಲ್ಲಿನ ಸಮಗ್ರ ಪ್ರಗತಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿವೆ‌.

ನಿನ್ನೆ ಶಿವಮೊಗ್ಗದ ಬೆಕ್ಕಿನಕಲ್ಮಠದಲ್ಲಿ ನಡೆದ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಅತ್ಯುತ್ತಮ ಶಾಲಾ ಶೈಕ್ಷಣಿಕ ಸಂಸ್ಥೆ 2023 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಪ್ರಶಸ್ತಿ ಬರಲು ಕಾರಣರಾದ ಎಲ್ಲಾ ಶಿಕ್ಷಕರಿಗೂ, ಹಿರಿಯ ವಿದ್ಯಾರ್ಥಿಗಳಿಗೂ, ಪೋಷಕರಿಗೂ, ಜನಪ್ರತಿನಿಧಿಗಳಿಗೂ, ದಾನಿಗಳಿಗೂ, ಕೇರ್ ವರ್ಕ್ಸ್ ಪೌಂಡೇಷನ್ ಬೆಂಗಳೂರು, ಸಂಘ ಸಂಸ್ಥೆಗಳಿಗೂ, ಕಳೆದ ದಶಕದಿಂದ ಸೇವೆ ಸಲ್ಲಿಸಿದ ಎಲ್ಲಾ ಎಸ್‌ಡಿಎಂಸಿ ಸದಸ್ಯರಿಗೂ, ಅಧ್ಯಕ್ಷರಿಗೂ, ಗ್ರಾಮಸ್ಥರಿಗೂ, ಶಿಕ್ಷಣ ಇಲಾಖೆಗೂ, ಎಲ್ಲಾ ಪ್ರಾಥಮಿಕ ಶಾಲೆಗಳಿಗೂ, ಶಾಲೆಯ ಬೆಳವಣಿಗೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಶಾಲೆಯ ಬೆಳವಣಿಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಹಾಗೂ 1965 ರಲ್ಲಿ ಶಾಲೆ ಕಟ್ಟಲು ಅತ್ಯಂತ ಶ್ರಮ ವಹಿಸಿದ ಕಾಡಮ್ಮ ಹೆಗ್ಗಡತಿ ಗುಡ್ಡೇಕೇರಿ ಹಾಗೂ ತಮ್ಮ ತಮ್ಮ ಮನೆಯಲ್ಲಿ ಮಕ್ಕಳಿಗೆ ಊಟ ಹಾಕಿ, ಶಾಲೆ ಉಳಿಸಿಕೊಂಡು ಬಂದ ಅಂದಿನ ಎಲ್ಲಾ ಶಿಕ್ಷಣ ಪ್ರೇಮಿಗಳಿಗೆ, ಶಾಲೆಯಲ್ಲಿ ಓದಿದ ಎಲ್ಲಾ ಮಕ್ಕಳಿಗೂ, ಕರ್ತವ್ಯ ನಿರ್ವಹಿಸಿದ ಎಲ್ಲಾ ಮುಖ್ಯ ಶಿಕ್ಷಕರಿಗೂ, ಶಿಕ್ಷಕರಿಗೂ, ಸಿಬ್ಬಂದಿ ವರ್ಗದವರಿಗೆ ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ ಈ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!