ಹೊಸನಗರ ಪಟ್ಟಣ ಪಂಚಾಯಿತಿ ; 14.76 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

0 40

ಹೊಸನಗರ: 2023-24ನೇ ಸಾಲಿನ ಹೊಸನಗರದ ಪಟ್ಟಣ ಪಂಚಾಯಿತಿಯ ಬಜೆಟ್‌ನಲ್ಲಿ 14,76,683 ರೂ.ಗಳ ಉಳಿತಾಯ ಮಾಡಲಾಗಿದೆ ಎಂದು ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಗುಲಾಬಿ ಮರಿಯಪ್ಪ ಸಭೆಯಲ್ಲಿ ತಿಳಿಸಿದರು.


ಹೊಸನಗರದ ಪಟ್ಟಣ ಪಂಚಾಯಿತಿ ಆವರಣದಲ್ಲಿ ಬಜೆಟ್ ಸಭೆ ನಡೆಸಿ ಸಭೆಯಲ್ಲಿ ಮಂಡಿಸಿದ ಅವರು, ಪಟ್ಟಣ ಪಂಚಾಯಿತಿಯ 2023-24 ನೇ ಸಾಲಿನ ಪ್ರಾರಂಭಿಕ ಶಿಲ್ಕು 4 ಕೋಟಿ 48 ಲಕ್ಷಗಳಿದ್ದು, ವಿವಿಧ ಜಮೆ (ನೀರಿನ ತೆರಿಗೆ, ಮನೆ ಕಂದಾಯ, ಕಟ್ಟಡ ಪರವಾನಗಿ, ಸರ್ಕಾರದ ಅನುದಾನ ಇತ್ಯಾದಿ) ಗಳಿಂದ 14 ಕೋಟಿ 93 ಲಕ್ಷಗಳು ಜಮೆಯ ನಿರೀಕ್ಷೆಯಲ್ಲಿದ್ದು, ಒಟ್ಟು 19 ಕೋಟಿ 41 ಲಕ್ಷಗಳಾಗಲಿದ್ದು, ಖರ್ಚಿನ ಬಾಬ್ತು 19 ಕೋಟಿ 27 ಲಕ್ಷಗಳೆಂದು ಅಂದಾಜಿಸಲಾಗಿದ್ದು ಅಖೈರು ಶುಲ್ಕ 14 ಲಕ್ಷಗಳು ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಸದಸ್ಯರಾದ ಹಾಲಗದ್ದೆ ಉಮೇಶ್ ಮಾತನಾಡಿ, ಇಂದಿನ ಬಜೆಟ್‌ನಲ್ಲಿ ನಿಗದಿಪಡಿಸಿದ ಅನುದಾನವನ್ನು ಸಮರ್ಪಕವಾಗಿ ಬಳಸಿ ಕಾರ‍್ಯರೂಪಕ್ಕೆ ತಂದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದರು.
ಪಟ್ಟಣ ಪಂಚಾಯಿತಿಯ ಸದಸ್ಯರಾದ ಶಗುರುರಾಜ್ ಆರ್ ಮಾತನಾಡಿ, ಉತ್ತಮವಾದ ಬಜೆಟ್ ಆಗಿದ್ದು ಈ ಬಜೆಟ್‌ನಿಂದಾಗಿ ಹೊಸನಗರ ಪಟ್ಟಣ ಪಂಚಾಯಿತಿಯ ನಿವಾಸಿಗಳಿಗೆ ಉತ್ತಮ ರೀತಿಯ ಸೌಲತ್ತುಗಳನ್ನು ಒದಗಿಸಲು ಪೂರಕವಾಗಿದೆ ಇದನ್ನು ಸಮರ್ಪಕವಾಗಿ ಬಳಸಿಕೊಂಡು ಹೊಸನಗರ ಪಟ್ಟಣವನ್ನು ಅಭಿವೃದ್ಧಿ ಪಥದತ್ತ ಕೊಂಡಯ್ಯುತ್ತೇವೆ ಎಂದರು.


ಈ ಬಜೆಟ್ ಸಭೆಯಲ್ಲಿ ಉಪಾಧ್ಯಕ್ಷೆ ಕೃಷ್ಣವೇಣಿ ಬಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಂದ್ರ ಹಾಗೂ ಸದಸ್ಯರುಗಳಾದ ಗುರುರಾಜ್, ಹಾಲಗದ್ದೆ ಉಮೇಶ್, ನಾಗಪ್ಪ, ಗಾಯತ್ರಿ ನಾಗರಾಜ್, ಶ್ರೀಪತಿ ರಾವ್, ಎಂ ಎನ್ ಸುಧಾಕರ್, ಯಾಸೀರ್, ಅಶ್ವಿನಿ ಕುಮಾರ್, ಸಿಂಥಿಯಾ, ಶಾಹೀನಾ ನಸೀರ್, ಚಂದ್ರಕಲಾ ನಾಗರಾಜ್ ರವರು ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಾದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಟಿ, ಮಂಜುನಾಥ್ ಎಂ, ಉಮಾಶಂಕರ್ ಟಿ., ಪ್ರಶಾಂತ್ ಎಂ ಬಿ, ಪರಶುರಾಮ್ ಹೆಚ್, ಲಕ್ಷ್ಮಣ ಜಿ, ನೇತ್ರಾವತಿ ಆರ್, ಗಿರೀಶ್, ಆಸ್ಮಾ, ಬಸವರಾಜ್ ಸಿ., ಕುಮಾರಿ, ಚಂದ್ರಪ್ಪ, ಯಶೋಧಮ್ಮ ರವರು ಹಾಜರಿದ್ದರು.

Leave A Reply

Your email address will not be published.

error: Content is protected !!