ಗ್ರಾಮದಲ್ಲಿ ಸರ್ವರನ್ನು ಸಂಘಟಿತರನ್ನಾಗಿಸುವ ಶಕ್ತಿ ದೇವಸ್ಥಾನಕ್ಕಿದೆ

0 346

ರಿಪ್ಪನ್‌ಪೇಟೆ: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕೋಮಭಾವನೆಯೊಂದಿಗೆ ಅಶಾಂತಿ ಅರಾಜಕತೆ ಸೃಷ್ಠಿಯಾಗುತ್ತಿದ್ದು ಇದರಿಂದ ಜನರಲ್ಲಿ ನೆಮ್ಮದಿ ಇಲ್ಲದಂತಾಗಿರುವ ಸಂದರ್ಭ ಉದ್ಭವಗೊಳ್ಳುತ್ತಿರುವ ಬಗ್ಗೆ ಕೆಳದಿ ರಾಜಗುರು ಮಹಾಮಹತ್ತಿನ ಭುವನಗಿರಿ ಕವಲೇದುರ್ಗಮಠದ ಮರುಳಸಿದ್ದ ಶಿವಾಚಾರ್ಯ ಮಹಾಸ್ವಾಮಿಜಿ ತೀವ್ರ ಕಳವಳ ವ್ಯಕ್ತಪಡಿಸಿದರು.

ರಿಪ್ಪನ್‌ಪೇಟೆ ಸಮೀಪದ ಶೆಟ್ಟಿಬೈಲು ಗ್ರಾಮದ ಶ್ರೀ ಗುಡ್ಡದಮಠ ಶೀಲವಂತಚೌಡೇಶ್ವರಿ ಅಮ್ಮನವರ ಹಾಗೂ ಲಿಂ. ಶಿವಾಚಾರ್ಯರ ನೂತನ 5 ಗದ್ದುಗೆ ಮತ್ತು ನಾಗದೇವರ ಪುನರ್‌ಪ್ರತಿಷ್ಠಾಪನಾ ಸಮಾರಂಭ ಮತ್ತು ಧರ್ಮಜಾಗೃತ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿ, ಧರ್ಮ ಧಾರ್ಮಿಕ ಆಚರಣೆಗಳಿಂದ ಗ್ರಾಮಸ್ಥರಲ್ಲಿ ಸಂಘಟನೆಯೊಂದಿಗೆ ಸಾಮರಸ್ಯದಿಂದಿರುವುದು ಮತ್ತು ದ್ವೇಷ ಅಸೂಯೆ ಭಾವನೆ ದೂರವಾಗಿ ಶಾಂತಿ ನೆಮ್ಮದಿಯ ಬದುಕು ಸಾದ್ಯವಾಗುವುದು ಎಂದು ಹೇಳಿದರು.

ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಜೀ ಆಶೀರ್ವಚನ ನೀಡಿ ನಮ್ಮೂರಿನ ಗ್ರಾಮ ದೇವತೆಗಳು ಊರಿನಲ್ಲಿ ಶಾಂತಿ ನೆಮ್ಮದಿ ಕಾಪಾಡುತ್ತವೆಂಬ ನಮ್ಮ ಪೂರ್ವಿಕರ ನಂಬಿಕೆಯಂತೆ ಅದನ್ನು ನಮ್ಮ ಯುವ ಜನಾಂಗ ಇಂದಿನವರೆಗೂ ಪಾಲಿಸಿಕೊಂಡು ಬರಲಾಗುತ್ತಿದ್ದು ಮುಂದಿನ ಯುವ ಪೀಳಿಗಗೂ ಈ ಸಂಪ್ರದಾಯ ಮುಂದುವರಿಯಲಿ ಎಂದರು.

ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಎ.ದೇವರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹುಂಚದ ವೇ.ಬ್ರ.ಅಜಯ್‌ಶಾಸ್ತ್ರಿಗಳು ಮತ್ತು ಅರ್ಚಕ ವೃಂದ ಇವರಿಂದ ನಾಗದೇವತೆಯ ಪುನರ್‌ಪ್ರತಿಷ್ಠಾಪನೆ ಮಂತ್ರೋಪದೇಶ ಪೂರ್ಣಾಹುತಿ, ನೂತನ ಮಂದಿರದ ಕಳಸಾರೋಹಣ, ಮಹಾಪೂಜೆ ಪರಿವಾರ ಪೂಜೆ ವಿಧಿವಿಧಾನಗಳು ಜರುಗಿದವು.

ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಪುಟ್ಟೇಗೌಡ ದಂಪತಿಗಳು, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಎ.ದೇವರಾಜ್ ಗೌಡ ದಂಪತಿ ಮತ್ತು ಲಿಂಗಸ್ವಾಮಿಗೌಡ ಆಲವಳ್ಳಿ, ರೋಷನ್ ದಾವಣಗೆರೆ ಗ್ರಾಮ ಪಂಚಾಯ್ತಿ ಸದಸ್ಯೆ ಯಶಸ್ವತಿ ವೃಷಭರಾಜ್ ಜೈನ್, ಎಸ್.ಆರ್.ಲಿಂಗಾರ್ಜುನ, ಕೆ.ಎಂ ಬಸವರಾಜ್ ಇನ್ನಿತರರನ್ನು ಸನ್ಮಾನಿಸಲಾಯಿತು.

ಧಾರ್ಮಿಕ ಸಮಾರಂಭದಲ್ಲಿ ಶೆಟ್ಟಿಬೈಲು, ಬಿಲ್ಲೇಶ್ವರ, ಹುಂಚ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಮಲ್ಲಿಕಾರ್ಜುನ ಸ್ವಾಗತಿಸಿ, ನಿರೂಪಿಸಿದರು.

Leave A Reply

Your email address will not be published.

error: Content is protected !!