MAMCOS ನಿಂದ ಅಭಿರಕ್ಷೆ ಯೋಜನೆಯಡಿ ₹ 1.49 ಲಕ್ಷ ಪರಿಹಾರದ ಚೆಕ್ ವಿತರಣೆ

0 681


ಹೊಸನಗರ: ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ಶಿವಮೊಗ್ಗ ಇದರ ಷೇರುದಾರರಿಗೆ ಹಾಗೂ ಸಂಘದ ಸದಸ್ಯರಿಗೆ ಶೇ. 60 ಲಾಭಾಂಶ ನೀಡುತ್ತಿದ್ದು ಇದರ ಉಪಯೋಗವನ್ನು ಎಲ್ಲ ರೈತರು ಉಪಯೋಗ ಪಡಿಸಿಕೊಳ್ಳಬೇಕೆಂದು ಮಾಮ್ ಕೋಸ್ ನಿರ್ದೇಶಕ ಕೆ.ವಿ. ಕೃಷ್ಣಮೂರ್ತಿ ಹೇಳಿದರು.

ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ಹೊಸನಗರ ಶಾಖೆ ವತಿಯಿಂದ ಸಂಘದ ಆವರಣದಲ್ಲಿ ಕೂಲಿ ಕಾರ್ಮಿಕರಾದ ಸೋಮಶೇಖರ ಎಂ.ಡಿ ಎಂಬುವವರು ಮಾಮ್ ಕೋಸ್ ಷೇರುದಾರರಾದ ಗವಟೂರು ಗ್ರಾಮದ ಮಹೇಂದ್ರ ಎಂಬುವವರ ತೋಟದಲ್ಲಿ ಅಡಿಕೆ ಮರಕ್ಕೆ ಔಷಧಿ ಹೊಡೆಯುವ ಸಂದರ್ಭದಲ್ಲಿ ಮರದಿದ್ದ ಕೆಳಗೆ ಬಿದ್ದು ಗಾಯಗೊಂಡಿದ್ದು ಚಿಕಿತ್ಸೆ ವೆಚ್ಚ ನೀಡಬೇಕೆಂದು ಸಂಘಕ್ಕೆ ಮಹೇಂದ್ರ ಅರ್ಜಿ ಸಲ್ಲಿಸಿದ್ದು ಸಂಘದ ಗುಂಪು ವಿಮಾ ಅಭಿರಕ್ಷೆ ಯೋಜನೆಯಡಿಯಲ್ಲಿ ದಿ ನ್ಯೂ ಇಂಡಿಯ ಇಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ ವತಿಯಿಂದ ಮಂಜೂರಾದ 1,49,178 ರೂ. ಮೊತ್ತದ ಪರಿಹಾರದ ಚೆಕ್‌ನ್ನು ವಿತರಿಸಿ ಅವರು ಮಾತನಾಡಿದರು.

ಅಡಿಕೆ ವ್ಯಾಪಾರಿಗಳು ಕೆಲವು ಆಸೆ ಆಮಿಷಗಳಿಗೆ ಬಲಿಯಾಗಿ ತಾವು ಬೆಳೆದ ಅಡಿಕೆಯನ್ನು ಬೇರೆ-ಬೇರೆ ಕಡೆಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಅವರು ಕೆ.ಜಿಯ ಮೇಲೆ ಹೆಚ್ಚು ಬೆಲೆ ನೀಡಿ ಕೊಂಡುಕೊಳ್ಳಬಹುದು ಆದರೆ ನಮ್ಮ ಸಂಘದಲ್ಲಿ ನೀವು ಷೇರುದಾರರಾಗಿದ್ದಲ್ಲಿ ನಮ್ಮ ಸಂಸ್ಥೆ ಲಾಭಾಂಶದಲ್ಲಿ ಹೆಚ್ಚು ಕಡಿಮೆ 60% ಲಾಭಾಂಶ ನೀಡುತ್ತಾ ಬರುತ್ತಿದ್ದು ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಸೌಲಭ್ಯ ನೀಡಲು ನಮ್ಮ ಸಂಸ್ಥೆ ಯೋಚಿಸಿದ್ದು ಹೊಸನಗರ ತಾಲ್ಲೂಕಿನ ಅಡಿಕೆ ವ್ಯಾಪಾರಿಗಳು ನಮ್ಮ ಸಂಘದ ಸದಸ್ಯತ್ವ ಪಡೆದು ಸೌಲಭ್ಯವನ್ನು ಪಡೆಯುವಂತಾಗಲಿ ಎಂದರು.

ಈ ಚೆಕ್ ವಿತರಿಸುವ ಸಂಧರ್ಭದಲ್ಲಿ ನಿರ್ದೇಶಕರಾದ ಹೆಚ್.ಟಿ ಸುಬ್ರಹ್ಮಣ್ಯರವರು ಮಾತನಾಡಿ, ನಮ್ಮ ಸಂಘಕ್ಕೆ ಕನಿಷ್ಠ 65 ಕೆ.ಜಿ ಯಷ್ಟು ಅಡಿಕೆ ಹಾಕಿದರೆ ನಮ್ಮ ಸಂಸ್ಥೆಯಲ್ಲಿ ರೈತರಿಗೆ ಎಲ್ಲ ಸೌಲಭ್ಯಗಳು ಸಿಗಲಿದ್ದು ರೈತರು ನಮ್ಮ ಸಂಘದ ಸದಸ್ಯರಾಗಿ ಎಂದರು.

ಮಲೆನಾಡು ಅಡಿಕೆ ಮಾರಾಟಗಾರದ ಸಹಕಾರ ಸಂಘದ ವ್ಯವಸ್ಥಾಪಕರಾದ ಮುರುಗೇಶ್, ದೊಡ್ಡರಾಜಪ್ಪ ಗೌಡ, ಗೋಪಾಲ್, ಶಾಂತ, ರಾಘವೇಂದ್ರ ಕೆ, ಚೇತನ್ ಟಿ.ಕೆ, ದಿವ್ಯಾ, ವಾಣಿಶ್ರೀ, ನಾಗೇಂದ್ರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!