ರೈತರಿಗೆ ಉಪಯುಕ್ತವಾಗುವಂತಹ ಸಹಕಾರಿ ಕಾರ್ಯಾಗಾರಗಳು ಅಗತ್ಯ ; ಬೇಳೂರು ಗೋಪಾಲಕೃಷ್ಣ

0 892

ರಿಪ್ಪನ್‌ಪೇಟೆ: ಸಹಕಾರಿ (Cooperative) ಕ್ಷೇತ್ರದಲ್ಲಿ ರೈತರು ಪಡೆದ ಸಾಲವನ್ನು (Loan) ಸರ್ಕಾರಗಳು ಮನ್ನಾ ಮಾಡುತ್ತವೆ ಎಂಬ ಭ್ರಮಯಲ್ಲಿ ರೈತರು ಸಾಲ ಮರುಪಾವತಿ ಮಾಡದೇ ಇರಬಹುದು ಆದರೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ವಾರ್ಷಿಕ 32 ಸಾವಿರ ಕೋಟಿ ವ್ಯಯವಾಗುತ್ತಿರುವ ಕಾರಣ ಸಾಲ ಮನ್ನಾ ಕಷ್ಟಕರವಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು (Beluru Gopalakrishna) ಹೇಳಿದರು.

ರಿಪ್ಪನ್‌ಪೇಟೆಯ (Ripponpet) ಗಣಪತಿ ದೇವಸ್ಥಾನದ (Ganapathi Temple) ಹಿಂಭಾಗದಲ್ಲಿ ಕರ್ನಾಟಕ ರಾಜ್ಯ ಮಹಾಮಂಡಳ ನಿಯಮಿತ ಮತ್ತು ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಹಕಾರ ಹಾಲು ಒಕ್ಕೂಟ ಹೊಸನಗರ ತಾಲ್ಲೂಕಿನ ಸಹಕಾರ ಸಂಘ ಮತ್ತು ಬ್ಯಾಂಕ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ 70ನೇ ಆಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ರಾಜಕೀಯವನ್ನು ಬಳಸದೇ ಜನಪರ ಬಡವರ ಪರ ಧ್ವನಿಯಾಗಿ ಸಹಕಾರ ಕ್ಷೇತ್ರವನ್ನು ಪ್ರಗತಿಯತ್ತ ಸಾಗುವಂತೆ ಮಾಡಬೇಕು. ಈಗಾಗಲೇ ರಾಜ್ಯ ಸಹಕಾರಿ ಸಚಿವರು ತಿಳಿಸಿದಂತೆ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಒಂದು ಸಹಕಾರಿ ಸಂಘ ಆರಂಭಿಸಬೇಕು ಎಂಬ ನಿಯಮದಂತೆ ಶೀಘ್ರದಲ್ಲಿ ಆರಂಭಿಸುವ ಬಗ್ಗೆ ನಿರ್ಣಯ ಕೈಗೊಳ್ಳಲು ಸಹಕಾರಿಗಳಿಗೆ ಕರೆ ನೀಡಿದ ಅವರು ಸಹಕಾರಿ ಮಹಿಳಾ ಸಂಘಗಳು ಸ್ಥಾಪನೆಯಾಗಬೇಕು ಎಂದರು.

ಸಣ್ಣ ಮತ್ತು ಅತಿಸಣ್ಣ ರೈತರಿಗೆ ಭತ್ತದ ಬೆಳೆಗೆ ಕಡಿಮೆ ಸಾಲ ದೊರೆಯುತ್ತಿದ್ದು ಇದನ್ನು ಮುಂದಿನ ದಿನಗಳಲ್ಲಿ ಎಕರೆಗೆ 1 ಲಕ್ಷ ರೂ. ಗೆ ಹೆಚ್ಚಿಸುವ ಬಗ್ಗೆ ಶಾಸನ ಸಭೆಯಲ್ಲಿ ಚರ್ಚಿಸುವಂತೆ ಸಹಕಾರ ಸಂಘದವರು ಶಾಸಕರಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ವಿಧಾನಸಭೆಯಲ್ಲಿ ಭರವಸೆ ನೀಡಿದರು.ಇದರೊಂದಿಗೆ ಆಡಿಕೆ ಬೆಳೆಗೆ ಎಲೆಚುಕ್ಕೆ ರೋಗದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಮಾಮ್‌ಕೋಸ್ ಸಂಸ್ಥೆಯ ಆಡಳಿತ ವರ್ಗ ಮುಂದಾದರೆ ಅವರೊಂದಿಗೆ ಕೇಂದ್ರದ ಸರ್ಕಾರದ ಗಮನ ಸೆಳೆಯಲು ನಿಯೋಗದ ನೇತೃತ್ವವನ್ನು ವಹಿಸುವುದಾಗಿ ಶಾಸಕರು ಅಡಿಕೆ ಬೆಳೆಗಾರರಿಗೆ ಭರವಸೆಯನ್ನು ನೀಡಿದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ರತ್ನಾಕರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಎಂ.ಎಂ.ಪರಮೇಶ್, ಹೊಸನಗರ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ವಿ.ಜಯರಾಂ, ಸಹ್ಯಾದ್ರಿ ಕಾಫಿ ಬೆಳೆಗಾಯ ಸಹಕಾರ ಸಂಘದ ನಿ. ಅಧ್ಯಕ್ಷ ಪಿ.ಎನ್. ಶಶಿಧರ್ ಹರತಾಳು, ನಿರ್ದೇಶಕ ಹರತಾಳು ನಾಗರಾಜ್, ಆಪ್ಸ್ಕೋಸ್ ನಿರ್ದೇಶಕ ಎ.ಓ.ರಾಮಚಂದ್ರ, ಹೆಚ್.ಬಿ.ಕಲ್ಯಾಣಪ್ಪಗೌಡ, ಮಾಮ್‌ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ಹೆಚ್.ಟಿ.ಸುಬ್ರಮಣ್ಯ, ಹೊಸನಗರ ತಾಲ್ಲೂಕ್ ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಪಿ.ನಂಜುಂಡಪ್ಪ, ತೋಟಗರ‍್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಜಯಶೀಲಪ್ಪಗೌಡ ಹರತಾಳು, ತುಂಗಾ ಅಡಿಕೆ ಸಹಕಾರ ಸಂಘದ ಆಧ್ಯಕ್ಷ ವಿನಯಕುಮಾರ್ ಡಿ.ಆರ್. ವರಾಹಿ ಪತ್ತಿನ ಸಹಕಾರ ಸಂಘ ನಿರ್ದೇಶಕ ಹಾಲಗದ್ದೆ ಉಮೇಶ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ವೆಂಕಟಾಚಲಪತಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಯಶವಂತ್‌ಕುಮಾರ್, ಮಮತಾ ಚಂದ್ರಶೇಖರ್ ಇನ್ನಿತರರು ಭಾಗವಹಿಸಿ ಮಾತನಾಡಿದರು.

ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ನಿರ್ದೇಶಕ ಹೆಚ್.ಎನ್. ವಿದ್ಯಾಧರ ಸ್ವಾಗತಿಸಿದರು. ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ವಾಟಗೋಡು ಸುರೇಶ್, ಪ್ರಾಸ್ತಾವಿಕವಾಗಿ ಮಾತನಾಡಿದರು.

Leave A Reply

Your email address will not be published.

error: Content is protected !!