ಹೊಸನಗರದಲ್ಲಿ ನಡೆದ BSY ಕಾರ್ಯಕ್ರಮದ ವೇಳೆ ಇಬ್ಬರನ್ನು ಪೊಲೀಸರು ವಶ ಪಡೆದಿದ್ದು ಯಾಕೆ ಗೊತ್ತಾ ?

0 61


ಹೊಸನಗರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಾರ್ವಜನಿಕ ಸಭೆ ವೇಳಿ ಕಪ್ಪುಬಟ್ಟೆ ಪ್ರದರ್ಶನ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದ ಬಿಜೆಪಿ ಕಾರ್ಯಕರ್ತ, ಯುವ ಉದ್ಯಮಿ ಅರೆಮನೆ ವಿನಾಯಕ ಅವರನ್ನು ಇಲ್ಲಿನ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದರು.


ಬಿಜೆಪಿ ಕಾರ್ಯಕರ್ತ ಅರೆಮನೆ ವಿನಾಯಕ ಅವರು ಶನಿವಾರ ಸಂಜೆ ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹರಿಯಬಿಟ್ಟು ನಾಳೆನ ಮಾಜಿ ಮುಖ್ಯಮಂತ್ರಿಗಳ ಕಾರ‍್ಯಕ್ರಮದಲ್ಲಿ ಕಪ್ಪುಬಟ್ಟೆ ಪ್ರದರ್ಶನ ಮಾಡುವುದಾಗಿ ಪ್ರಚುರ ಪಡಿಸಿದ್ದರು. ಇದನ್ನರಿತ ಇಲ್ಲಿನ ಪೊಲೀಸರು ಬೆಳಿಗ್ಗೆ ಅರೆಮನೆ ವಿನಾಯಕ ಅವರ ಮನೆಗೆ ಬಂದು ಠಾಣೆಗೆ ಕರೆ ತಂದಿದ್ದಾರೆ. ಹೇಳಿಕೆ ಕುರಿತಾಗಿ ಸ್ಪಷ್ಟನೆ ನೀಡಿದರೂ ಸುಮ್ಮನಾಗದ ಪೊಲೀಸರು ವಿನಾಯಕ ಅರೆಮನೆ ಅವರನ್ನು ಕಾರ‍್ಯಕ್ರಮ ಮುಗಿಯುವವರೆಗೂ ಠಾಣೆಯಲ್ಲಿರಿಸಿ ಕೊಂಡಿದ್ದಾರೆ.


ಚರ್ಚೆಗೆ ಗ್ರಾಸ:
ಮಾಜಿ ಮುಖ್ಯಮಂತ್ರಿಗಳ ಕಾರ‍್ಯಕ್ರಮದಲ್ಲಿ ತಾಲ್ಲೂಕಿನ ಸಮಸ್ಯೆ ಹೇಳಿಕೊಳ್ಳಲು, ಕಪ್ಪುಬಟ್ಟೆ ಪ್ರದರ್ಶನ ಮೂಲಕ ಮನವಿ ಮಾಡುವುದಾಗಿ ಹೇಳಿಕೊಂಡ ಯುವ ಉದ್ಯಮಿ ವಿನಾಯಕರನ್ನು ಪೊಲೀಸರು ವಶಪಡಿಸಿಕೊಂಡಿದ್ದು ಎಷ್ಟು ಸರಿ? ಅಲ್ಲದೆ ಹೇಳಿಕೆ ಬಗ್ಗೆ ಸಮಜಾಯಿಸಿ ನೀಡಿದರೂ ಕಾರ‍್ಯಕ್ರಮ ಮುಗಿಯುವವರೆಗೆ ಅಂದರೆ 4 ಗಂಟೆಗೂ ಹೆಚ್ಚು ಕಾಲ ಅರೆಮನೆ ವಿನಾಯಕ ಅವರನ್ನು ಠಾಣೆಯಲ್ಲಿರಿಸಿಕೊಂಡಿದ್ದ ಪೊಲೀಸರ ಕ್ರಮ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.


ಸಾಮಾಜಿಕ ಹೋರಾಟಗಾರ ಟಿ.ಆರ್ ಕೃಷ್ಣಪ್ಪ ವಶ:
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸಭೆಯಲ್ಲಿ ರೈಲ್ವೆ ಸಮಸ್ಯೆ ಕುರಿತಾಗಿ ಮನವಿ ನೀಡಲು ಬಂದ ಸಾಮಾಜಿಕ ಹೋರಾಟಗಾರ ಟಿ.ಆರ್. ಕೃಷ್ಣಪ್ಪ ಅವರನ್ನು ಇಲ್ಲಿನ ಪೊಲೀಸರು ವಶ ಪಡಿಸಿಕೊಂಡರು.


ಬೆಳಿಗ್ಗೆ 8ಗಂಟೆ ಸುಮಾರಿಗೆ ಕಾರ‍್ಯಕ್ರಮ ಬಳಿ ಇದ್ದ ಟಿ.ಆರ್. ಕೃಷ್ಣಪ್ಪ ಅವರನ್ನು ವಶಪಡಿಸಿಕೊಂಡ ಪೊಲೀಸರು ಕಾರ‍್ಯಕ್ರಮ ಮುಗಿಯುವವರೆಗೆ ಠಾಣೆಯಲ್ಲಿರಿಸಿಕೊಂಡರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಟಿ.ಆರ್.ಕೃಷ್ಣಪ್ಪ, ಅರಸಾಳು ಗ್ರಾಮದಲ್ಲಿ ರೈಲ್ವೆ ನಿಲುಗಡೆ ಇತ್ತು ಈಗ ರೈಲು ನಿಲುಗಡೆಯನ್ನು ನಿಲ್ಲಿಸಲಾಗಿದೆ. ಇದರಿಂದ ಹೊಸನಗರ ಪ್ರಯಾಣಿಕರು ದೂರದ ಆನಂದಪುರಕ್ಕೆ ಹೋಗಬೇಕಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಅರಸಾಳುವಿನಲ್ಲಿ ನಿಲ್ದಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಲು ಬಂದಿದೆ. ಪೊಲೀಸರು ನನ್ನನ್ನು ಒಳಗೆ ಹಾಕಿದ್ದಾರೆ. ಇದು ಪೊಲೀಸರು ಅಮಾನುಷ ಕ್ರಮವಾಗಿದೆ. ಈ ಕುರಿತಾಗಿ ಪೊಲೀಸ್ ಮೇಲಾಧಿಕಾರಿಗಳಲ್ಲಿ ದೂರು ನೀಡಲಾಗುವುದು ಎಂದು ತಿಳಿಸಿದರು.

Leave A Reply

Your email address will not be published.

error: Content is protected !!